July 22, 2026
Mumbai News Kannada
ತುಳುನಾಡು

ಮುದ್ರಾಡಿ ಪ್ರೌಢಶಾಲೆ: ಉತ್ತಮ ಶ್ರೇಣಿ ಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಗೌರವ , ನಿವೃತ್ತ ಮುಖ್ಯ ಶಿಕ್ಷಕಿಗೆ ಸಮ್ಮಾನ







ಶಿಕ್ಷಕರಿಂದ ಉತ್ತಮ ಸಮಾಜ ನಿರ್ಮಾಣ:ದಿವಾಕರ ಎನ್. ಶೆಟ್ಟಿ ಮುದ್ರಾಡಿ 

ಹೆಬ್ರಿ, ಜೂ.16.: ಹುದ್ದೆಗಿಂತಲೂ, ವೃತ್ತಿಯಲ್ಲಿ ಗಳಿಸಿದ ಮನ್ನಣೆಯೇ ಗೌರವಕ್ಕೆ ಕಾರಣ, ನಿಸ್ವಾರ್ಥವಾಗಿ ಕೈಗೊಂಡ ಕೆಲಸಗಳೆಲ್ಲ ಪರಮಾತ್ಮನ ಸೇವೆ ಎಂದು ವಿದ್ಯಾಸಾಗರ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷ ದಿವಾಕರ ಎನ್. ಶೆಟ್ಟಿ.  ಮುದ್ರಾಡಿಯ ಹೇಳಿದರು.

ಮುದ್ರಾಡಿಯ  ಅನುದಾನಿತ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಸೇವೆ ನಿವೃತ್ತಿ ಹೊಂದಿದ ಇಂದಿರಾ ಬಾಯರಿ ಅವರನ್ನು ಸಮ್ಮಾನಿಸಿ ಅವರು ಮಾತನಾಡಿದರು.

ವೃತ್ತಿಯಲ್ಲಿ ಗಳಿಸಿದ ಮನ್ನಣೆಯೇ ಗೌರವಕ್ಕೆ ಕಾರಣ. ನಿಸ್ವಾರ್ಥ ಸೇವೆಯಿಂದ ಕೈಗೊಂಡ ಕೆಲಸಗಳೆಲ್ಲವು ಪರಮಾತ್ಮನ ಸೇವೆಯೇ. ಯಾವ ವೃತ್ತಿಯಲ್ಲೂ ಮೇಲು ಕೀಳಿಲ್ಲ. ಆದರೂ ಶಿಕ್ಷಕ ವೃತ್ತಿಯು ಉತ್ತಮ ಸಮಾಜ ನಿರ್ಮಾಣದ ಜವಾಬ್ದಾರಿ ಹೊಂದಿದೆ. ಪ್ರತಿಯೊಬ್ಬರು ನೆನಪಿಟ್ಟುಕೊಳ್ಳುವುದು ಅವರ ಶಿಕ್ಷಕರನ್ನು . 27 ವರ್ಷಗಳ ಶಿಕ್ಷಕ ವೃತ್ತಿ ಬದುಕಿನಲ್ಲಿ ಅಸಂಖ್ಯಾತ ಸಾಧಕರ ಸೃಷ್ಟಿಗೆ ಕಾರಣೀಭೂತರಾದ ಶ್ರೀಮತಿ ಇಂದಿರಾ ಬಾಯರಿಯವರ ಸೇವೆ ಸಂಸ್ಥೆಗೆ ಅವಿಸ್ಮರಣೀಯವಾದುದು  ಹೇಳಿದರು

ಮುದ್ರಾಡಿಯ ಅನುದಾನಿತ ಪ್ರೌಢಶಾಲೆಯ ಸ್ಥಾಪಕ ಅಧ್ಯಕ್ಷರಾಗಿದ್ದ ಕೃಷ್ಣ ಡಿ. ಶೆಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.

ಕಳೆದ ಶೈಕ್ಷಣಿಕ ವರ್ಷದಲ್ಲಿ ವಿಶಿಷ್ಟ ಶ್ರೇಣಿ ಪಡೆದ ಹರ್ಷಿತ್, ವಿನೀತಾ, ಸುಗಂಧಿ, ರಂಜಿತ್ ಅವರಿಗೆ ತರಂಗ ವಾರಪತ್ರಿಕೆಯ ಕಾರ್ಯನಿರ್ವಹಕ ಸಂಪಾದಕಿ ಸಂಧ್ಯಾ ಪೈ ಅವರು ಕೊಡ ಮಾಡಿದ ದತ್ತಿನಿಧಿ, ಮುದ್ರಾಡಿಯ ಜಗದಂಬಾ ಆರ್. ಶೆಟ್ಟಿಯವರು ಅವರ ಗುರುಗಳಾದ ಮರಿಯಪ್ಪ ಕಲ್ಕೂರರ ನೆನಪಿನಲ್ಲಿ ನೀಡಿದ ದತ್ತಿನಿಧಿ, ಹೆಬ್ರಿಯ ಕನ್ನಡ ಸೇನಾನಿ ಗಂಗಾಧರ ರಾವ್ ಮತ್ತು ವರಂಗದ ಕಮಲಾ ಪೂಜಾರಿ ಅವರ ಹೆಸರಿನಲ್ಲಿ ಪುತ್ರ ಸುರೇಶ ಪೂಜಾರಿ ಅವರು ನೀಡಿದ.

ಬಹುಮಾನಗಳನ್ನು ವಿತರಿಸಲಾಯಿತು.

ಇದೇ ಸಂದರ್ಭ ಪ್ರಾರಂಭೋತ್ಸವದಲ್ಲಿ ಸರಕಾರದಿಂದ ಕೊಡ ಮಾಡಿದ ಪಠ್ಯಪುಸ್ತಕವನ್ನು ಮುದ್ರಾಡಿ ಗ್ರಾ.ಪಂ.ನ ಅಧ್ಯಕ್ಷೆ ವಸಂತಿ ಪೂಜಾರಿ ವಿತರಿಸಿದರು. ಕೋಟ ಗೀತಾನಂದ ಫೌಂಡೇಶನ್‌ ಆನಂದ ಕುಂದರ್ ನೀಡಿದ ಉಚಿತ ನೋಟ್ ಬುಕ್‌ಗಳನ್ನು ಪಂಚಾಯತ್ ಉಪಾಧ್ಯಕ್ಷೆ ರಮ್ಯಕಾಂತಿ ಹಾಗೂ ಸದಸ್ಯ ಗಣಪತಿ ಎಂ. ಸನತ್ ಕುಮಾರ್ ವಿತರಿಸಿದರು.

ಮುಂಬಯಿ ಉದ್ಯಮಿ ಭರತ್ ಸೂರ್ತಿ,. ಶಿಕ್ಷಣ ಇಲಾಖೆಯ ಸಿ.ಆ‌ರ್.ಪಿ. ರಾಘವೇಂದ್ರ ಆಚಾರ್ಯ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಸುರೇಶ್ ಕುಲಾಲ್, ಕಾರ್ಯದರ್ಶಿ ಅಶೋಕ ಕುಮಾರ್ ಶೆಟ್ಟಿ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷೆ ಶಶಿಕಲಾ ಡಿ.ಪೂಜಾರಿ, ಮಂಜುನಾಥ ಪೂಜಾರಿ ಶಿಕ್ಷಕರಾದ ರಘುಪತಿ ಹೆಬ್ಬಾರ್, ಮಹೇಶ್ ಕಾನ್ಸುಂಡಿ ಉಪಸ್ಥಿತರಿದ್ದರು. ಶಿಕ್ಷಕಿ ಶ್ಯಾಮಲಾ ಕೊಠಾರಿ ಸಾಧಕ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಶಿಕ್ಷಕ ಮಹೇಶ್ ನಾಯ್ ಅಭಿನಂದನ ಪತ್ರ ವಾಚಿಸಿದರು. ಹಿರಿಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ನಿರೂಪಿಸಿ, ಪಿ. ವಿ.ಆನಂದ ವಂದಿಸಿದರು.

B. Dinesh Kulal

Mob.: 9821868674

Show quoted text



Related posts

ಉಡುಪಿ : ಮನೆಯಲ್ಲಿ ಅಗ್ನಿ ಅವಘಡ, ಮನೆಯ ಯಜಮಾನ ಮೃತ್ಯು.

Mumbai News Desk

ಯುವಕ ಸಂಘ ತೋಕೂರು,ಮಹಿಳಾ ಮಂಡಲ ತೋಕೂರು, ಹಾಗೂ ಪತಂಜಲಿ ಯೋಗ ಸಮಿತಿ ದಕ್ಷಿಣ ಕನ್ನಡ ಇದರ ಜಂಟಿ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Mumbai News Desk

ಕಾಪು ನವದುರ್ಗಾ ಲೇಖನ ಯಜ್ಞ ಸಮಿತಿ ಉದ್ಘಾಟನಾ ಕಾರ್ಯಕ್ರಮದ ತುಣುಕುಗಳು.

Mumbai News Desk

ಮೂಲ್ಕಿ ಕಾರ್ನಾಡು ಶ್ರೀ ಹರಿಹರ ಕ್ಷೇತ್ರದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಿಜೃಂಭಣೆಯ ದೃಢ ಕಲಶಾಭಿಷೇಕ

Mumbai News Desk

ಉಡುಪಿ ಕಂಬಳ ಶಂಕುಸ್ಥಾಪನೆ: ನಿಷೇಧಾಜ್ಞೆ ಉಲ್ಲಂಘಿಸಿದ ಸಂಸದರು, ಶಾಸಕರು ಸೇರಿ 37 ಮಂದಿಯ ವಿರುದ್ಧ ಎಫ್‌ಐಆರ್ ದಾಖಲು

Mumbai News Desk

ಕಾರ್ಲೆ ಭಗವತಿ ಕ್ಷೇತ್ರದ ದೈವ ಪಾತ್ರಿ, ಮೋಯ ಜನಾಂಗದ ದಿವ್ಯ ಚೇತನ ದಿ.ಕೃಷ್ಣ ಬೆಳ್ಚಪ್ಪಾಡರು ಶಿರಿಯ, ಅವರ 42ನೇ ಪುಣ್ಯ ಸ್ಮರಣೆ

Mumbai News Desk