September 23, 2026
Mumbai News Kannada
ಸುದ್ದಿ

ಸೆ.26 : ಸ್ಕಾಲರ್‌ಶಿಪ್ ಮಾಸ್ಟರ್ ನಾರಾಯಣ ನಾಯಕ್ ಅವರಿಗೆ 2026ರ ಮೂಲತ್ವ ವಿಶ್ವ ಪ್ರಶಸ್ತಿ



“ನಾನೇ ನೀನು, ನೀನೇ ನಾನು” ಎಂಬ ತತ್ವದಡಿಯಲ್ಲಿ ಕಾರ್ಯಾಚರಿಸುತ್ತಿರುವ ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಕಳೆದ ಸುಮಾರು 20 ವರ್ಷಗಳಿಂದ ಸಮಾಜಮುಖಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ದೇವರಲ್ಲಿ ಮಾನವನನ್ನು, ಮಾನವರಲ್ಲಿ ದೇವರನ್ನು ಹಾಗೂ ಮಾನವರೊಳಗೆ ಪರಸ್ಪರರನ್ನು ಕಂಡು, ಪರಸ್ಪರರನ್ನು ಅರ್ಥೈಸಿಕೊಂಡು ಪರಸ್ಪರರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದಾತ್ತ ಹಾಗೂ ವಿಶಾಲ ಮನೋಭಾವನೆಯೊಂದಿಗೆ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಸಾಮೂಹಿಕ ಪ್ರಾರ್ಥನೆಯಂತಹ ಅಧ್ಯಾತ್ಮಿಕ ಹಾಗೂ ಮಾನಸಿಕ ಆರೋಗ್ಯ ಸಂರಕ್ಷಣೆಗೆ ಪೂರಕವಾದ ಕಾರ್ಯಕ್ರಮಗಳು, ಜನಸಾಮಾನ್ಯರಿಗೆ ಉಪಯೋಗವಾಗುವ ವಿವಿಧ ಮಾಹಿತಿ ಶಿಬಿರಗಳು, ಸ್ವಚ್ಛ ಭಾರತ ಅಭಿಯಾನ, ಉಚಿತ ವೈದ್ಯಕೀಯ ಶಿಬಿರಗಳು, ಅರ್ಹ ಬಡ ಮಕ್ಕಳಿಗೆ ಶೈಕ್ಷಣಿಕ ನೆರವು, ಬಡ ಕುಟುಂಬಗಳಿಗೆ ವೈದ್ಯಕೀಯ ನೆರವು, ಮದುವೆಗಳಿಗೆ ನೆರವು ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಸ್ಥೆ ಹಮ್ಮಿಕೊಂಡು ಬಂದಿದೆ.

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಸುಮಾರು 18 ವರ್ಷಗಳಿಂದ ಜಗತ್ತಿನಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಾ, ಸಮಾಜಕ್ಕೆ ತಮ್ಮನ್ನು ತಾವು ಮುಡಿಪಾಗಿಟ್ಟು ಸಮಾಜದ ನೋವಿಗೆ ಸ್ಪಂದಿಸುತ್ತಿರುವ ಮುತ್ತುರತ್ನಗಳಂತಹ ದಿವ್ಯ ಚೈತನ್ಯಗಳನ್ನು ಗುರುತಿಸಿ, ಅವರಿಗೆ ಪ್ರಸಾದ ರೂಪದಲ್ಲಿ ಪ್ರಶಸ್ತಿ ನೀಡುವ ಉದ್ದೇಶದಿಂದ ಈ ಪ್ರಶಸ್ತಿ ಪರಂಪರೆಯನ್ನು ಆರಂಭಿಸಿದೆ. ಪ್ರತಿವರ್ಷ ಜಗತ್ತಿನಾದ್ಯಂತ ಸಮಾಜಮುಖಿ ಸೇವೆಯಲ್ಲಿ ತೊಡಗಿರುವ ಮುತ್ತುರತ್ನಗಳಂತಹ ದಿವ್ಯ ಚೈತನ್ಯಗಳನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

2015ರಲ್ಲಿ ಮಂಗಳೂರಿನ ಅಕ್ಷರಸಂತ ಹರೇಕಳ ಹಾಜಬ್ಬ, 2016ರಲ್ಲಿ ಪಶ್ಚಿಮ ಬಂಗಾಳದ ಪದ್ಮಶ್ರೀ ಸುಭಾಷಿನಿ ಮಿಸ್ತೀ, 2017ರಲ್ಲಿ ಮಹಾರಾಷ್ಟ್ರದ ಪುಣೆಯ ಪದ್ಮಶ್ರೀ ಡಾ. ಸಿಂಧುತಾಯಿ ಸಪ್ಕಾಲ್, 2018ರಲ್ಲಿ ಬೆಂಗಳೂರಿನ ಆಟೋರಾಜ, 2019ರಲ್ಲಿ ಮಹಾರಾಷ್ಟ್ರದ ನಾಗ್‌ಪುರದ ಪ್ರಕಾಶ್ ಆಮ್ಚೆ ಮತ್ತು ಮಂದಾಕಿಣಿ ಆಮ್ಚೆ ದಂಪತಿಗೆ, 2020ರಲ್ಲಿ ಉಡುಪಿಯ ರವಿಕಟಪಾಡಿಯವರಿಗೆ ಅವರ ನಿಸ್ವಾರ್ಥ ಸೇವೆಗಾಗಿ ಪ್ರಶಸ್ತಿ ನೀಡಲಾಯಿತು. 2021ರಲ್ಲಿ ಕಾರವಾರ ಜಿಲ್ಲೆಯ ಅಂಕೋಲ ತಾಲ್ಲೂಕಿನ ಪದ್ಮಶ್ರೀ ಪುರಸ್ಕೃತೆ, ಹಾಲಕ್ಕಿ ಸಮುದಾಯದ ಹೋರಾಟಗಾರ್ತಿ ಹಾಗೂ ಸಾಧಕಿಯಾಗಿರುವ ಪದ್ಮಶ್ರೀ ಸುಕ್ರಿ ಬೊಮ್ಮಗೌಡ (ಸುಕ್ರಿ ಅಜ್ಜಿ) ಅವರ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಯಿತು. 2022ರ 8ನೇ ವರ್ಷದ ಪ್ರಶಸ್ತಿಯನ್ನು ತೆಲಂಗಾಣ ರಾಜ್ಯದ ಪದ್ಮಶ್ರೀ ಡಾ. ಸುನಿತಾ ಕೃಷ್ಣನ್ ಅವರಿಗೆ ನೀಡಲಾಯಿತು. 2023ರ 9ನೇ ಮೂಲತ್ವ ವಿಶ್ವ ಪ್ರಶಸ್ತಿಯನ್ನು ಛತ್ತೀಸ್‌ಗಢದ ಪದ್ಮಶ್ರೀ ಶ್ರೀಮತಿ ಘೂಲ್‌ಬಸನ್ ಬಾಯಿ ಯಾದವ್ ಅವರಿಗೆ ನೀಡಲಾಯಿತು. 2024ರ 10ನೇ ವರ್ಷದ ಮೂಲತ್ವ ವಿಶ್ವ ಪ್ರಶಸ್ತಿಯನ್ನು ಉಡುಪಿ ಜಿಲ್ಲೆಯ ಮುಳುಗು ತಜ್ಞರೆಂದೇ ಖ್ಯಾತಿ ಪಡೆದ ಶ್ರೀಯುತ ಈಶ್ವರ್ ಮಲ್ಪೆ ಅವರಿಗೆ ನೀಡಿ ಗೌರವಿಸಲಾಯಿತು. 2025ರ 11ನೇ ವರ್ಷದ ಮೂಲತ್ವ ಪ್ರಶಸ್ತಿಯನ್ನು ಅವಕಾಶ ವಂಚಿತ ಮಕ್ಕಳನ್ನು ಮತ್ತು ಸಮುದಾಯಗಳನ್ನು ಸಬಲೀಕರಣಗೊಳಿಸುವಲ್ಲಿ ಸೇವಾ ನಿರತರಾಗಿರುವ ಬೆಂಗಳೂರಿನ “SE ಫೌಂಡೇಶನ್” ಅವರಿಗೆ ನೀಡಲಾಯಿತು.

ಈ ವರ್ಷದ 2026ರ 12ನೇ ಮೂಲತ್ವ ವಿಶ್ವ ಪ್ರಶಸ್ತಿಗೆ ‘ಸ್ಕಾಲರ್‌ಶಿಪ್ ಮಾಸ್ಟರ್’ ಎಂದೇ ಖ್ಯಾತರಾದ ಶ್ರೀಯುತ ನಾರಾಯಣ್ ನಾಯಕ್ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಫಲಕದೊಂದಿಗೆ ರೂ.1,00,001/- ನಗದು ಬಹುಮಾನವನ್ನು ನೀಡಲಾಗುವುದು. ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ಸೆ. 26, 2026ರಂದು ಬೆಳಗ್ಗೆ 10 ಗಂಟೆಗೆ ಬಲ್ಮಠ ಮಹಿಳಾ ಪ್ರಥಮ ದರ್ಜೆ ಕಾಲೇಜು, ಮಂಗಳೂರು ಇಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕರಾದ ಡಿ. ವೇದವ್ಯಾಸ ಕಾಮತ್, ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ಮನೋಜ್ ಕುಮಾರ್ ಎ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಬಲ್ಮಠ, ಮಂಗಳೂರಿನ ಪ್ರಾಂಶುಪಾಲರಾದ ಡಾ. ಗೋಪಾಲಕೃಷ್ಣ ಕೆ, ಡಾ. ಪಿ. ದಯಾನಂದ ಪೈ–ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಾರ್‌ಸ್ಟ್ರೀಟ್, ಮಂಗಳೂರಿನ ಪ್ರಾಂಶುಪಾಲರಾದ ಪ್ರೊ. ಜಯಕರ ಭಂಡಾರಿ ಎಂ., ಬಿಎಸ್‌ಎಫ್ ಕೆಮಿಕಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರು (ಇಂಜಿನಿಯರಿಂಗ್ ಮತ್ತು ಯೋಜನೆ ಅನುಷ್ಠಾನ) ಹಾಗೂ ಏಷ್ಯಾ–ಪೆಸಿಫಿಕ್ ಮುಖ್ಯಸ್ಥರು (ಮುಂಬೈ ಕೇಂದ್ರ) ಶ್ರೀಮತಿ ಆಶಿಮಾ ಸುಶೀಲ್ ಚಂದ್ರ, ಚಲನಚಿತ್ರ ನಿರ್ದೇಶಕ, ನಟ ಹಾಗೂ ಕನ್ನಡ ಮತ್ತು ತುಳು ರಂಗಭೂಮಿಯ ಜೆ.ಪಿ. ತುಮಿನಾಡು, ಶೈಕ್ಷಣಿಕ ಕಾರ್ಯತಂತ್ರ ನಿರೂಪಕ, ಲೇಖಕ ಹಾಗೂ ಅಂಕುರಮ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಅಕ್ಷಯ್ ಕೆ. ಪಣಿಕರ್ ಅವರು ಗಣ್ಯ ಉಪಸ್ಥಿತಿಯಲ್ಲಿ ಪ್ರಶಸ್ತಿಯನ್ನು ಪ್ರಧಾನಿಸಲಾಗುವುದು.

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್‌ನ ಸಲಹೆಗಾರರಾದ ,ಶಾಸಕ ವೇದವ್ಯಾಸ ಕಾಮತ್, ಸಂಸ್ಥಾಪಕರಾದ ಪ್ರಕಾಶ್ ಮೂಲತ್ವ, ಟ್ರಸ್ಟಿಗಳಾದ ಶ್ರೀಮತಿ ಕಲ್ಪನಾ ಕೋಟ್ಯಾನ್, ಶ್ರೀಮತಿ ಶೈನಿ ಮೂಲತ್ವ, ಪ್ರಕಾಶ್ ಕೋಟ್ಯಾನ್ ಎಲ್ಲರಿಗೂ ಆದರದ ಸ್ವಾಗತ ಬಯಸಿದ್ದಾರೆ.
ಸಮಾಜದ ನೋವಿಗೆ ಸ್ಪಂದಿಸಿ, ನಿಸ್ವಾರ್ಥ ಸೇವೆಯ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುತ್ತಿರುವ ಸಾಧಕರನ್ನು ಗುರುತಿಸಿ ಗೌರವಿಸುವ ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್‌ನ ಈ ಪ್ರಶಸ್ತಿ ಪರಂಪರೆ, ಸೇವೆಯ ಮಹತ್ವವನ್ನು ಸಮಾಜದ ಮುಂದೆ ಸಾರುವ ಅರ್ಥಪೂರ್ಣ ಹೆಜ್ಜೆಯಾಗಿ ಮುಂದುವರಿಯುತ್ತಿದೆ



Related posts

ಪಡುಬಿದ್ರಿ ನಡಿಪಟ್ನ ಮೊಗವೀರ ಮಹಾಸಭಾ ಮುಂಬಯಿ ಶಾಖೆಯ 136ನೇ ವಾರ್ಷಿಕ ಮಹಾಸಭೆ.

Mumbai News Desk

ಡಹಾಣೂವಿನ ಉದ್ಯಮಿ ಸಮಾಜಸೇವಕ ಅಶೋಕ್ ಎಸ್‌. ಶೆಟ್ಟಿ ಉಳೆಪಾಡಿ ಇವರಿಗೆ ವಿಶೇಷ ಸನ್ಮಾನ

Mumbai News Desk

ರಾಜ್ಯವ್ಯಾಪಿ ಕಂಬಳಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್ :ಯಾವ ಮೂಲೆಯಲ್ಲಾದ್ರೂ ಕಂಬಳ ನಡೆಸಲು ಆದೇಶ

Mumbai News Desk

ಶ್ರೀ ವಿಶ್ವೇಶತೀರ್ಥ ಜನ್ಮಶತಾಬ್ದಿ ಪಂಚವಾರ್ಷಿಕ ಯೋಜನೆ ಲಾಂಛನ ಬಿಡುಗಡೆ: ಉಡುಪಿ-ದ್ವಾರಕೆ ಬೆಸೆಯುವ ಯೋಜನೆ ರೂಪಿಸಲು ಪೇಜಾವರ ಶ್ರೀಗಳ ಸಲಹೆ

Mumbai News Desk

ಶ್ರೀ ಸುಬ್ರಮಣ್ಯ ಮಹಾಗಣಪತಿ ಸ್ಪೋರ್ಟ್ ಕ್ಲಬ್ ತೋಕೂರು ಗೆ, ಅರಸು ಪ್ರಶಸ್ತಿ 2024

Mumbai News Desk

ಕರಾವಳಿ ಜಿಲ್ಲೆಗಳಿಗೆ ನಿರಂತರ ವಿದ್ಯುತ್ ಪೂರೈಸಲು ಜಯಶ್ರೀಕ್ರಷ್ಣ ಪರಿಸರ ಪ್ರೇಮಿ ಸಮಿತಿ ಉಪಮುಖ್ಯಮಂತ್ರಿಗಳಿಗೆ ಮನವಿ

Mumbai News Desk