ನವಿ ಮುಂಬೈನ ವಾಶಿ ಸೆಕ್ಟರ್-12ರಲ್ಲಿರುವ ಪುತ್ತಿಗೆ ಮಠದ ಶಾಖೆಯಲ್ಲಿ ನವೆಂಬರ್ 24ರಂದು ಪುತ್ತಿಗೆ ಶ್ರೀಗಳ ಚಾತುರ್ಮಾಸ ಸಮಾಪ್ತಿ ಹಾಗೂ ಶ್ರೀಗಳಿಗೆ ಗುರುವಂದನಾ ಕಾರ್ಯಕ್ರಮವು ಅದ್ದೂರಿಯಾಗಿ ನೆರವೇರಲಿದೆ.
ಅಂದು ಬೆಳಿಗ್ಗೆ 7.00 ಗಂಟೆಗೆ ಸಂಸ್ಥಾನ ಪೂಜೆ ನೆರವೇರಲಿದ್ದು, ಬೆಳಿಗ್ಗೆ 8.00 ಗಂಟೆಗೆ ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿತರಣೆ ನಡೆಯಲಿದೆ. ನಂತರ ಮಧ್ಯಾಹ್ನ 11.00 ಗಂಟೆಗೆ ಮಹಾಪೂಜೆ ನೆರವೇರಲಿದ್ದು, ಮಧ್ಯಾಹ್ನ 12.00 ಗಂಟೆಗೆ ಪೂಜ್ಯ ಶ್ರೀಪಾದರಿಗೆ ಗುರುವಂದನೆ ಹಾಗೂ ಶ್ರೀಗಳಿಂದ ಭಕ್ತರಿಗೆ ಆಶೀರ್ವಚನ ಕಾರ್ಯಕ್ರಮ ನೆರವೇರಲಿದೆ.
ಅದರ ಜೊತೆಗೆ, ಮಧ್ಯಾಹ್ನ 2.00 ಗಂಟೆಯಿಂದ “ಹರಿಭಕ್ತ ಸುಧನ್ವ” ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಲಿದ್ದು, ಸಂಜೆ 4.00ರಿಂದ 6.00 ಗಂಟೆಯವರೆಗೆ ಭಜನಾ ಕಾರ್ಯಕ್ರಮವು ಜರುಗಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.



