30 C
Mumbai
September 30, 2026
Mumbai News Kannada
ತುಳುನಾಡು

ಅ.4 : ಮೂಲ್ಕಿ ‘ಹೊಸ ಅಂಗಣ’ ಕನ್ನಡ ಮಾಸಪತ್ರಿಕೆಯ 10ನೇ ವರ್ಷದ ದಶಮಾನೋತ್ಸವ ಸಂಭ್ರಮ ಹಾಗೂ ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಸಂಭ್ರಮ, ಚಿಂತನ ಮಂಥನ ಸಂಭ್ರಮ



ಮೂಲ್ಕಿಯ ಜನಪ್ರಿಯ ‘ಹೊಸ ಅಂಗಣ’ ಕನ್ನಡ ಮಾಸಪತ್ರಿಕೆಯ 10ನೇ ವರ್ಷದ ದಶಮಾನೋತ್ಸವ ಸಮಾರಂಭವು 2026ರ ಅಕ್ಟೋಬರ್ 04ರ ರವಿವಾರದಂದು ಬೆಳಿಗ್ಗೆ 9:30ಕ್ಕೆ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನ್ನಪೂರ್ಣ ಸಭಾಂಗಣದಲ್ಲಿ ನಡೆಯಲಿದೆ.
​ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸನ್ಮಾನ್ಯ ಸಂಸದರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಲಿದ್ದು, ಮೂಲ್ಕಿ-ಮೂಡಬಿದಿರೆ ಕ್ಷೇತ್ರದ ಸನ್ಮಾನ್ಯ ಶಾಸಕರಾದ ಶ್ರೀ ಉಮಾನಾಥ ಎ. ಕೊಟ್ಯಾನ್ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ಕರ್ನಾಟಕ ಸರ್ಕಾರದ ಸನ್ಮಾನ್ಯ ಮಾಜಿ ಸಚಿವರಾದ ಶ್ರೀ ಅಭಯಚಂದ್ರ ಜೈನ್ ಅವರು ಗೌರವಾನ್ವಿತ ಉಪಸ್ಥಿತಿ ವಹಿಸಲಿದ್ದು, ಜೋಕಟ್ಟೆಯ ಶ್ರೀ ಚಂದ್ರಶೇಖರ ಸ್ವಾಮೀಜಿ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ. ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅವರು ವಿಶೇಷ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ.
​ಈ ಶುಭ ಸಮಾರಂಭದಲ್ಲಿ ದ.ಕ. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ಸುದರ್ಶನ್ ಮೂಡುಬಿದಿರೆ, ಬೆಂಗಳೂರು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ತಲ್ಲೂರು ಶಿವರಾಮ ಶೆಟ್ಟಿ, ಹಳೆಯಂಗಡಿಯ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಲಿ. ಅಧ್ಯಕ್ಷರಾದ ಶ್ರೀ ವಸಂತ್ ಬೆರ್ನಾಡ್, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಕಾರ್ಯನಿರ್ವಾಹಕಾಧಿಕಾರಿಗಳಾದ ಶ್ರೀಮತಿ ಶ್ವೇತಾ ಶೆಟ್ಟಿ, ಮೊಕ್ತೇಸರರಾದ ಶ್ರೀ ದುಗ್ಗಣ್ಣ ಸಾವಂತರು, ಮೂಲ್ಕಿ ಹರಿಹರ ಕ್ಷೇತ್ರ ಕಣಸಾಲೆಯ ಆಡಳಿತ ಮೊಕ್ತೇಸರರಾದ ಶ್ರೀ ಅರವಿಂದ ಪೂಜಾರಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ, ಮೂಲ್ಕಿ ಬಿಲ್ಲವ ಮಹಾಮಂಡಲದ ಅಧ್ಯಕ್ಷರಾದ ಶ್ರೀ ಸೂರ್ಯಕಾಂತ ಜಿ. ಸುವರ್ಣ, ಯುಗ ಪುರುಷ ಕಿನ್ನಿಗೋಳಿಯ ಸಂಚಾಲಕರಾದ ಶ್ರೀ ಭುವನಾಭಿರಾಮ ಉಡುಪ, ಮೂಲ್ಕಿ ಬಪ್ಪನಾಡು ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಸುನಿಲ್ ಆಳ್ವ, ಹಿರಿಯ ನ್ಯಾಯವಾದಿಗಳಾದ ಶ್ರೀ ಭಾಸ್ಕರ ಹೆಗ್ಡೆ, ಮೂಲ್ಕಿ ಸಾಂಸ್ಕೃತಿಕ ಟ್ರಸ್ಟ್ ಮಾಜಿ ಅಧ್ಯಕ್ಷರಾದ ಶ್ರೀ ಮೊಹಮ್ಮದ್ ಹಬೀಬುಲ್ಲಾ ಹಾಗೂ ಬಪ್ಪನಾಡು ಕೆಂಪು ಸುಬ್ರಾಯ ಧರ್ಮ ಚಾವಡಿಯ ಅಧ್ಯಕ್ಷರಾದ ಶ್ರೀ ವಾಸು ಪೂಜಾರಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 
ಈ ಶುಭ ಸಂದರ್ಭದಲ್ಲಿ ಹೊಸಅಂಗಣ ರಾಜ್ಯ ಪ್ರಶಸ್ತಿ ಸಾಧಕರಾಗಿ ಮೂಲ್ಕಿ ರೋಟರಿ ಕ್ಲಬ್ ಹಾಗೂ ತುಳುವೆರ್ ಫೌಂಡೇಶನ್ ಕಟೀಲು ಅಧ್ಯಕ್ಷರಾದ ಶ್ರೀಮತಿ ಭಾನುಮತಿ ಶೆಟ್ಟಿ ಕಕ್ವಗುತ್ತು, ಮೂಲ್ಕಿ ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಸರೋಜಿನಿ ಸುವರ್ಣ, ಮೂಲ್ಕಿಯ ಸಮಾಜ ಸೇವಕರಾದ ಶ್ರೀ ಸುರೇಂದ್ರ ಬಿ. ಶೆಟ್ಟಿ, ಲೇಖಕರಾದ ಶ್ರೀ ಎ. ಕೃಷ್ಣಾನಂದ ಶೆಟ್ಟಿ ಐಕಳ, ಸುರತ್ಕಲ್ ಸುರಕ್ಷಾ ಕೆಟರರ್ಸ್ ಮಾಲೀಕರಾದ ಶ್ರೀ ಕೇಶವ ಸುನಿಲ್, ಹಳೆಯಂಗಡಿ ಪೂರ್ಣ ಎಂಟರ್ಪ್ರೈಸಸ್ ಮಾಲೀಕರಾದ ಶ್ರೀ ಜಯಕೃಷ್ಣ ಬಿ. ಕೋಟ್ಯಾನ್, ಮೂಲ್ಕಿ ಸುರಭಿ ಎಲೆಕ್ಟ್ರಾನಿಕ್ಸ್ ಮಾಲೀಕರಾದ ಶ್ರೀ ಜೋನ್ ಕ್ವಾಡ್ರಸ್, ಸಮಾಜ ಸೇವಕರಾದ ಶ್ರೀ ವಾಸು ಪೂಜಾರಿ ಚಿತ್ರಾಪು, ಮೂಲ್ಕಿ ಶಾಂಭವಿ ಜೋಶಿ ಟ್ರಸ್ಟ್ ಅಧ್ಯಕ್ಷರಾದ ಶ್ರೀ ದಿನೇಶ್ ಕೆ. ಶೆಟ್ಟಿ ಹಾಗೂ ಮೂಲ್ಕಿ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ಸಂಚಾಲಕರಾದ ಶ್ರೀ ಪುನೀತ್ ಕೃಷ್ಣ ಅವರು ಗೌರವಿಸಲ್ಪಡಲಿದ್ದಾರೆ.
​ಅಲ್ಲದೆ, ದಶಮಾನೋತ್ಸವದ ಸಂದರ್ಭದಲ್ಲಿ ಪತ್ರಿಕೆಯ ಗೌರವ ಸಲಹೆಗಾರರಾದ ಶ್ರೀ ವಿಶ್ವನಾಥ ಕಾಮತ್, ಶ್ರೀ ರವಿಚಂದ್ರ ಮೂಲ್ಕಿ, ಶ್ರೀ ವಿಜಯ ಕುಮಾರ್ ಕುಬೆವೂರು, ಮುಂಬಯಿಯ ಡಾ| ರವಿರಾಜ್ ಸುವರ್ಣ, ಮುಂಬಯಿಯ ಶ್ರೀ ರಾಮಚಂದ್ರ ಸಾಲ್ಯಾನ್, ವಕೀಲರಾದ ಶ್ರೀ ಜಯಪಾಲ ಶೆಟ್ಟಿ, ಶ್ರೀ ಚಿತ್ರಾಪು ಕೆ.ಎಂ. ಕೋಟ್ಯಾನ್, ಶ್ರೀ ವೈ. ಎನ್. ಸಾಲ್ಯಾನ್, ಹಳೆಯಂಗಡಿಯ ಶ್ರೀ ಗಂಗಾಧರ ಅಮೀನ್, ಚಿತ್ರಾಪು ಶ್ರೀ ಕೇಶವಾನಂದ ಗುರೂಜಿ, ಮೂಲ್ಕಿಯ ಶ್ರೀ ಸತೀಶ್ ಭಂಡಾರಿ, ಮುಂಬಯಿಯ ಶ್ರೀ ಉಮೇಶ್ ಕೆ. ಅಂಚನ್, ಶ್ರೀ ಮನೋಹರ್ ಕೋಟ್ಯಾನ್, ಐಕಳ ಶ್ರೀಮತಿ ಶರೋನ್ ಶೆಟ್ಟಿ, ಡಾ| ಮುರಲೀ ಮೋಹನ್ , ಪುತ್ತೂರಿನ ಶ್ರೀಮತಿ ಮಲ್ಲಿಕಾ ಜಿ.ಆರ್.ರೈ, ಪಡುಬಿದ್ರಿಯ ಶ್ರೀ ಪುರುಷೋತ್ತಮ ಪೂಜಾರಿ ಹಾಗೂ ಮೂಡಬಿದ್ರಿಯ ಶ್ರೀ ಎಂ. ಬಾಲಕೃಷ್ಣ ನಾಯಕ್ ಅವರನ್ನು ಸನ್ಮಾನಿಸಲಾಗುವುದು.
ಇದೇ ವೇಳೆ ಪತ್ರಿಕಾ ಪ್ರತಿನಿಧಿಗಳಾದ ಶ್ರೀ ಪ್ರಕಾಶ್ ಸುವರ್ಣ, ಶ್ರೀ ಹರೀಶ್ ಹೆಜಮಾಡಿ, ಶ್ರೀ ಸರ್ವೋತ್ತಮ ಅಂಚನ್, ಶ್ರೀ ನಿಶಾಂತ್ ಕಿಲೆಂಜೂರು, ಶ್ರೀ ಪುನೀತ್ ಕೃಷ್ಣ, ಶ್ರೀ ಭಾಗ್ಯವಾನ್ ಸನಿಲ್, ಶ್ರೀ ಯಶೋಧರ, ಶ್ರೀ ಪುನೀತ್ ಸಾಲ್ಯಾನ್ ಮತ್ತು ಶ್ರೀ ಗಣೇಶ್ ದೇವಾಡಿಗ ಅವರನ್ನು ಗೌರವಿಸಲಾಗುವುದು.
ಈ ಸಂಭ್ರಮದ ಜತೆಗೆ ಬೆಳಿಗ್ಗೆ 11:30ಕ್ಕೆ ಮಂಗಳೂರಿನ ‘ರಂಗಮಿಶ್ರಣ ಗ್ರೂಪ್’ ಇವರಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ. 

ಸಮಾರೋಪ ಸಮಾರಂಭವು ಅಂದು ಮಧ್ಯಾಹ್ನ 12:30ಕ್ಕೆ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನ್ನಪೂರ್ಣ ಸಭಾಂಗಣದಲ್ಲಿ ನಡೆಯಲಿದೆ. ಕಾಪು ವಿಧಾನಸಭಾ ಕ್ಷೇತ್ರದ ಸನ್ಮಾನ್ಯ ಶಾಸಕರಾದ ಗುರ್ಮೆ ಶ್ರೀ ಸುರೇಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಲಿದೆ. ಈ ಶುಭ ಸಮಾರಂಭದಲ್ಲಿ ಮೆಸ್ಕಾಂ ಮಂಗಳೂರು ಅಧ್ಯಕ್ಷರಾದ ಶ್ರೀ ಹರೀಶ್ ಕುಮಾರ್, ಮೂಲ್ಕಿ ವಿಜಯಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ರಂಗನಾಥ್ ಶೆಟ್ಟಿ, ಮೂಲ್ಕಿ ಬಂಟರ ಸಂಘದ ಅಧ್ಯಕ್ಷರಾದ ಶ್ರೀ ಅಶೋಕ್ ಕುಮಾರ್ ಶೆಟ್ಟಿ, ಮೂಲ್ಕಿ ಶ್ರೀ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ ಶ್ರೀ ಹರೀಂದ್ರ ಸುವರ್ಣ, ಮೂಲ್ಕಿ ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ಸತೀಶ್ ಅಂಚನ್, ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷರಾದ ಶ್ರೀ ಮೋಹನ್‌ದಾಸ್ ಹೆಜಮಾಡಿ ಹಾಗೂ ಕಣ್ಣಂಗಾರ್ ಹೆಜಮಾಡಿಯ ಶ್ರೀ ಬ್ರಹ್ಮಬೈದರ್ಕಳ ಗರಡಿಯ ಅಧ್ಯಕ್ಷರಾದ ಶ್ರೀ ಸೀನ ಪೂಜಾರಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಹೊಸ ಅಂಗಣ ಮಾಸಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀ ಹರಿಶ್ಚಂದ್ರ ಪಿ. ಸಾಲ್ಯಾನ್ ಮತ್ತು ಗೌರವ ಸಂಪಾದಕರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅವರು ಕಾರ್ಯಕ್ರಮಕ್ಕೆ ಸರ್ವರನ್ನೂ ಪ್ರೀತಿಪೂರ್ವಕವಾಗಿ ಆಹ್ವಾನಿಸಿದ್ದಾರೆ. 



Related posts

ಬೊಳ್ನಾಡು ಶ್ರೀ ಚಿರುಂಭ ಭಗವತಿ ಕ್ಷೇತ್ರದ ಬ್ರಹ್ಮಕಲಸೋತ್ಸವ, ಧಾರ್ಮಿಕ ಸಭೆ;

Mumbai News Desk

ಮುಲ್ಕಿ ಅರಸು ಕಂಬಳದಲ್ಲಿ ಗುತ್ತಿನಾರ್ ರವೀಂದ್ರ ಶೆಟ್ಟಿಯವರಿಗೆ ಸನ್ಮಾನ :

Mumbai News Desk

ಸುರತ್ಕಲ್‌ನಲ್ಲಿ ನಶಾ ಮುಕ್ತ ಸಮಾಜ ನಿರ್ಮಾಣ ಜಾಗೃತಿ ಕಾರ್ಯಕ್ರಮ

Mumbai News Desk

ಮೂಲತ್ವ ಫೌಂಡೇಶನ್‌ನಿಂದ ‘ಆಟಿದೊಂಜಿ ದಿನ’ ಆಚರಣೆ: ಶಾಸಕ ವೇದವ್ಯಾಸ ಕಾಮತ್ ಉದ್ಘಾಟನೆ, ‘ಮೂಲತ್ವ ಲೋಕ ಪೊರ್ಲು’ ಅನಾವರಣ

Mumbai News Desk

ಕಾಪು ಮೂರನೇ ಮಾರಿಯಮ್ಮ ದೇವಸ್ಥಾನ ರಜತ ಗದ್ದುಗೆ ವಿಜ್ಞಾಪನ ಪತ್ರ ಬಿಡುಗಡೆ.

Mumbai News Desk

ಮೂಲ್ಕಿ ಲಯನ್ಸ್ ಕ್ಲಬ್ ಹಾಗೂ ಸಿ.ಎಸ್.ಐ ಶಾಲೆಯ ಸಂಯುಕ್ತ ಆಶ್ರಯದಲ್ಲಿ ರಾಜ್ಯಮಟ್ಟದ ಪಿಯುಸಿ ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಭವ್ಯ ಸನ್ಮಾನ

Mumbai News Desk