35 C
Mumbai
October 3, 2026
Mumbai News Kannada
ಮುಂಬಯಿ

ವಿಜಯ ಕಾಲೇಜು ಮುಲ್ಕಿ ಜಾಗತಿಕ ಹಳೆವಿದ್ಯಾರ್ಥಿಗಳ ಸಂಘ, ಮುಂಬಯಿ ವಾರ್ಷಿಕ ಮಹಾಸಭೆ




ಕಾಲೇಜಿನ ಅಭಿವೃದ್ಧಿಗೆ ಹಳೆ ವಿದ್ಯಾರ್ಥಿಗಳು ಸಹಕಾರ ನೀಡಬೇಕು:ಅಡ್ವೊಕೇಟ್ ಶೇಖರ್ ಭಂಡಾರಿ

ಮುಂಬಯಿ : ಮುಂಬೈ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಟಿತ ಹಳೆ ವಿದ್ಯಾರ್ಥಿ ಸಂಘ,ವಿಜಯ ಕಾಲೇಜು ಮುಲ್ಕಿ ಜಾಗತಿಕ ಹಳೆ ವಿದ್ಯಾರ್ಥಿ ಸಂಘ, ಮುಂಬಯಿ ಇದರ 5 ನೇ ವಾರ್ಷಿಕ ಸದಸ್ಯರ ಮಹಾಸಭೆ ಗೊರೆಗಾವ್ ಪೂರ್ವಾದ ನೆಸ್ಕೋ ದಲ್ಲಿರುವ ಬೈರೂತ್ ಹೋಟೆಲಿನಲ್ಲಿ ಸೆ 28, ಅಡ್ವೊಕೇಟ್ ಶೇಖರ್ ಭಂಡಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯದರ್ಶಿ ಸಿಎ ರೋಹಿತಾಕ್ಷ ದೇವಾಡಿಗ ಅವರು ವಾರ್ಷಿಕ ವರದಿಯನ್ನ ಮಂಡಿಸಿದರು.
ಖಜಾಂಜಿ ಸರಿತಾ ರಾವ್ ಅವರು ವಾರ್ಷಿಕ ಲೆಕ್ಕಪತ್ರ ಗಳನ್ನು ಮಂಡಿಸಿದರು.
ಉಪಾಧ್ಯಕ್ಷ ಭಾಸ್ಕರ್ ಶೆಟ್ಟಿ ಅವರು ಸಂಘದ ಮುಂದಿನ ವಿವಿಧ ಉದ್ದೇಶಗಳನ್ನು ಸಭಿಕರ ಮುಂದೆ ಇಟ್ಟರು.
ಅಧ್ಯಕ್ಷ ಅಡ್ವೊಕೇಟ್ ಶೇಖರ್ ಭಂಡಾರಿ ಅವರು ಮಾತನಾಡುತ್ತ, ಸಂಘ ಪ್ರತಿವರ್ಷವೂ ತನ್ನ ಕಾಲೇಜಿಗೆ ಬಡವಿದ್ಯಾರ್ಥಿಗಳ ವಿದ್ಯಾರ್ಜನೆಯ ನೆರವಿಗಾಗಿ 5 ಲಕ್ಷ ರೂಪಾಯಿ ಯನ್ನು ಕೊಡುತ್ತಾ ಬರುತ್ತಿದೆ.
ಮುಂದಿನ ವರ್ಷಗಳಲ್ಲಿ, ಕಾಲೇಜಿನಲ್ಲಿ ಕುಂದುತ್ತಿರುವ ವಿದ್ಯಾರ್ಥಿ ಸಂಖ್ಯೆಯನ್ನ ಹೆಚ್ಚಿಸುವ ವಿವಿಧ ರೂಪುರೇಖೆಗಳನ್ನ ಕಾಲೇಜಿನ ಆಡಳಿತ ಮಂಡಳಿ, ಊರಿನಲ್ಲಿರುವ ಹಳೆವಿದ್ಯಾರ್ಥಿ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸುವ ಉದ್ದೇಶವನ್ನು ಮಾಡಬೇಕು ಎಂದರು.
ಸಭೆಯಲ್ಲಿ ಕಾಲೇಜಿನ ಹೆಚ್ಚಿನ ಬಡವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ,ಮತ್ತು ಕಲಿಸುವ ಉಪನ್ಯಾಸಕರಿಗೆ ಪ್ರೊಸ್ತಾವ ನೀಡುವುದಕ್ಕಾಗಿ ಸಂಘದ ಧನ ಸಂಗ್ರಹದ ಸಮಿತಿಯನ್ನು ರಚಿಸಲಾಯಿತು ವಾಸುದೇವ ಸಾಲಿಯಾನ್ ಅವರು ಧನ ಸಂಗ್ರಹ ಸಮಿತಿಯ ಅಧ್ಯಕ್ಷರಾಗಿಯೂ ಹಾಗು ಭಾಸ್ಕರ್ ಶೆಟ್ಟಿ ಅವರನ್ಮು ಉಪಾಧ್ಯಕ್ಷರಾಗಿಯೂ ನೇಮಕ ಮಾಡಲಾಯಿತು.

ಗೌರವ ಅಧ್ಯಕರಾದ ವಾಸುದೇವ ಸಾಲಿಯಾನ್ ಅವರು ಮಾತನಾಡುತ್ತಾ ಸಂಘವು ಕಾಲೇಜಿನ ವಿದ್ಯಾರ್ಥಿ ಸಂಖ್ಯೆ ಕಡಿಮೆಯಾಗುವುದು ಚಿಂತಾಜನಕ ವಿಷಯ.ಅದಕ್ಕಾಗಿ ಸಂಘವು ನಮ್ಮ ಕಾಲೇಜಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಡ ವಿದ್ಯಾರ್ಥಿಗಳನ್ನು ಸೇರಿಸಲು ಮೆರಿಟ್ ಅಂಕಗಳ ಲಕ್ಷ್ಮಣರೇಖೆಯನ್ನು ತೆಗೆದುಹಾಕಿದೆ.ಮುಂದಿನ ವರ್ಷಗಳಲ್ಲಿ ಕಾಲೇಜಿಗೆ ಹೆಚ್ಚಿನ ಸಹಾಯಧನ ಕೊಡುವ ಉಪಾಯವನ್ನ ಮಾಡುತ್ತಿದೆ ಎಂದರು.

ಸಂಘದ ಸ್ಥಾಪಕ ಅಧ್ಯಕ್ಷ ರಾದ ಶಿರ್ವ ನಿತ್ಯಾನಂದ ಹೆಗ್ಡೆ ಅವರು ಮಾತನಾಡಿ,ನಾವು ಕಲಿತ ಕಾಲೇಜನ್ನು ಹಳೆವಿದ್ಯಾರ್ಥಿಗಳು ಮರೆಯಬಾರದು ಮತ್ತು ಕಾಲೇಜಿನಲ್ಲಿ ಕಲಿತ ಎಲ್ಲಾ ಹಳೆವಿದ್ಯಾರ್ಥಿಗಳು ತನಗೆ ಸಾಧ್ಯವಿದ್ದಷ್ಟು ಸಂಘಕ್ಕೆ ಅನುದಾನ ಮಾಡಬೇಕು, ನಮ್ಮಕಾಲೇಜಿನ ಹೆಸರನ್ನು ಉಳಿಸಬೇಕು ಎಂದರು.
ಲಾವರೆನ್ಸ್ ಡಿಸೋಜಾ ಮಾತನಾಡಿ ನಾವು ಮುಂದಿನ ತಿಂಗಳಲ್ಲಿ ಮಾಡುವ ಅಡ್ವೈಸರಿ ಬೋರ್ಡ್ ಮೀಟಿಂಗೆಗೆ ಎಲ್ಲಾ ಬೋರ್ಡ್ ಸದಸ್ಯರು ಹಾಜರಿ ಇರಬೇಕು ಹಾಗು ಸಹಾಯ ಹಸ್ತವನ್ನ ನೀಡಬೇಕು ಎಂದರು.
ಪೂರ್ವ ಅಧ್ಯಕ್ಷರಾದ ಸಿಎ ಸೋಮನಾಥ್ ಕುಂದರ್ ಹಾಗು ಆನಂದ್ ಶೆಟ್ಟಿ ಮತ್ತು ಕೆ ಎನ್ ಸುವರ್ಣ,ಸಿಎ ಕಿಶೋರ್ ಸುವರ್ಣ,ಗುಣೇಶ್ ಶೆಟ್ಟಿ,ಪೇಟೆಮನೆ ಪ್ರಕಾಶ್ ಶೆಟ್ಟಿ, ಅವರು ತಮ್ಮ ತಮ್ಮ ಅನಿಸಿಕೆಗಳನ್ನು ಸಭೆಯ ಮುಂದೆ ಇಟ್ಟರು.
ಸಭೆಯಲ್ಲಿ ಶಿರ್ವ ನಿತ್ಯಾನಂದ ಹೆಗ್ಡೆ,ಪೇಟೆಮನೆ ಪ್ರಕಾಶ್ ಶೆಟ್ಟಿ ಹಾಗು ಸುನಿಲ್ ಶೆಟ್ಟಿ ಇವರನ್ನ ಮ್ಯಾನೇಜಿಂಗ್ ಕಮಿಟಿ ಗೆ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಸದಸ್ಯರಾದ ಜೀತೇಂದ್ರ ಶೆಟ್ಟಿ,ಶಂಕರ್ ಸುವರ್ಣ, ಉಷಾ ಶೇಖರ್,ಸ್ವರ್ಣ ಜ್ಯೋತಿ ಮತ್ತು ಹಲವರು ಉಪಸ್ಥಿತರಿದ್ದರು.

ಉಪ ಅಧ್ಯಕ್ಷ ಭಾಸ್ಕರ್ ಶೆಟ್ಟಿ ಅವರ ಧನ್ಯವಾದಗಳೊಂದಿಗೆ ಸಭಾ ಕಾರ್ಯಕ್ರಮ ಮುಕ್ತಾಯಗೊಂಡಿತು.



Related posts

ಬೃಹನ್ಮುಂಬೈ ಮಹಾನಗರಪಾಲಿಕೆಯ ಚುನಾವಣೆಯಲ್ಲಿ ವಾರ್ಡ್ ಸಂಖ್ಯೆ 188ರಲ್ಲಿ ಭಾಸ್ಕರ್ ಆರ್ ಶೆಟ್ಟಿ ವಿಜಯ

Mumbai News Desk

ನವರಾತ್ರಿ ವೈಭವ: ‘ಓಂ ಶಕ್ತಿ ಮಹಿಳಾ ಸಂಸ್ಥಾ’ದ ಗರ್ಬಾ ನೃತ್ಯೋತ್ಸವ – ಸೇವಾ ಪಥಕ್ಕೆ ದುರ್ಗೆಯ ಆಶೀರ್ವಾದ

Mumbai News Desk

ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಹಿಳಾ ವಿಭಾಗದ ‘ಹಳದಿ ಕುಂಕುಮ’ ಕಾರ್ಯಕ್ರಮ: ಸ್ತ್ರೀ ಶಕ್ತಿಯ ಸೌಹಾರ್ದ ಸಮಾಗಮ

Mumbai News Desk

ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ಡೊಂಬಿವಲಿ 32 ನೇ ವಾರ್ಷಿಕ ಸಾರ್ವಜನಿಕ ಶನಿಶ್ವರ ಪೂಜೆ ಸಂಪನ್ನ

Mumbai News Desk

ಬಿಲ್ಲವ ಸೇವಾ ಸಂಘ ಕುಂದಾಪುರ, ಮುಂಬಯಿ: ನೂತನ ಗೌರವಾಧ್ಯಕ್ಷರಾಗಿ ಮಂಜುನಾಥ್ ಎ. ಬಿಲ್ಲವ ಆಯ್ಕೆ

Mumbai News Desk

ಶಹಾಡ್‌ ಶ್ರೀ ಮೂಕಾಂಬಿಕಾ ದೇವಸ್ಥಾನದ ಶರನ್ನವರಾತ್ರಿ ಮಹೋತ್ಸವ ವಿಜೃಂಭಣೆಯಿಂದ ಸಂಪನ್ನ

Mumbai News Desk