ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನ ಮತ್ತು ಕದಿಕೆ ಭಂಡಾರ ಮಂದಿರದಲ್ಲಿ ಅಕ್ಟೋಬರ್ 11 ರಿಂದ ಅಕ್ಟೋಬರ್ 21 ರವರೆಗೆ ಶ್ರೀ ದೇವಿಯ ನವರಾತ್ರಿ ಮಹೋತ್ಸವ ಹಾಗೂ ಅಕ್ಟೋಬರ್ 27 ರಂದು ಅತ್ಯಂತ ಶ್ರದ್ಧಾಭಕ್ತಿಗಳಿಂದ ಹೊಸಕ್ಕಿ ನಡಾವಳಿ ಮಹೋತ್ಸವ ಜರುಗಲಿದೆ.
ಉತ್ಸವದ ಅವಧಿಯಲ್ಲಿ ಲಲಿತಾ ಪಂಚಮಿ (ಅ. 15), ಮೂಲ ನಕ್ಷತ್ರ (ಅ. 17), ದುರ್ಗಾಷ್ಟಮಿ (ಅ. 19), ಮಹಾನವಮಿ (ಅ. 20) ಮತ್ತು ವಿಜಯದಶಮಿ (ಅ. 21) ವಿಶೇಷ ದಿನಗಳಾಗಿರಲಿವೆ. ನವರಾತ್ರಿ ಮಹೋತ್ಸವದ ಅಂಗವಾಗಿ ದಿನಂಪ್ರತಿ ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆ ವಿವಿಧ ಭಜನಾ ಮಂಡಳಿಗಳು, ಸಾಂಸ್ಕೃತಿಕ ತಂಡಗಳಿಂದ ಭಜನಾ ಕಾರ್ಯಕ್ರಮಗಳು, ಹರಿಕಥಾ ಪ್ರಸಂಗಗಳು ನೆರವೇರಲಿವೆ.
ಅಕ್ಟೋಬರ್ 11ರ ಭಾನುವಾರ ಬೆಳಿಗ್ಗೆ 10:00ರಿಂದ ಸಸಿಹಿತ್ಲು ಶ್ರೀ ಭಗವತೀ ಭಜಕ ವೃಂದದಿಂದ ಭಜನೆ, 10:30ಕ್ಕೆ ಕೀರ್ತನ ಕಲಾಮಣಿ ಶ್ರೀ ತೋನ್ಸೆ ಪುಷ್ಕಲಕುಮಾರ್ ಅವರಿಂದ ‘ಭಕ್ತ ಕನಕದಾಸ’ ಹರಿಕಥಾ ಪ್ರಸಂಗ, ಮಧ್ಯಾಹ್ನ 12:25ಕ್ಕೆ ಕಲಶ ಪ್ರತಿಷ್ಠೆ, 12:30ಕ್ಕೆ ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಸಿಹಿತ್ಲು ಘಟಕ ಹಾಗೂ ಶ್ರೀ ಲಕ್ಷ್ಮೀನಾರಾಯಣ ಭಜನಾ ಮಂಡಳಿಯಿಂದ ಭಜನೆ ಮತ್ತು ರಾತ್ರಿ 8:00ಕ್ಕೆ ಮಹಾಪೂಜೆ ನೆರವೇರಲಿದೆ.
ಉತ್ಸವದ ಪ್ರತಿದಿನವೂ ಅಂದರೆ ಅಕ್ಟೋಬರ್ 12ರಿಂದ 21ರವರೆಗೆ ಶ್ರೀ ಸೀತಾರಾಮ ಮಹಿಳಾ ಭಜನಾ ಮಂಡಳಿ ಚಿತ್ರಾಪು, ಮಹಿಳಾ ಮಂಡಲ ಕುಲಾಯಿ, ಶ್ರೀ ವಿಷ್ಣು ಭಜನಾ ಮಂಡಳಿ ಎಮ್ಆರ್ಪಿಎಲ್ ಬಡಾ, ಬ್ರಹ್ಮಶ್ರೀ ನಾರಾಯಣ ಗುರು ಭಜನಾ ಮಂಡಳಿ ಅಗ್ನಿದಳಯ, ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಮಾತೃ ಭಜನಾ ಮಂಡಳಿ ಪಾವಂಜಿ, ಶ್ರೀ ನವಶಕ್ತಿ ಭಜನಾ ಮಂಡಳಿ ವಿದ್ಯಾನಗರ, ಶ್ರೀ ರಾಮ ಭಜನಾ ಮಂಡಳಿ ಲಚ್ಚಿಲ್, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ಸೇವಾ ಯುವಕ ವೃಂದ, ಶ್ರೀ ಶಾರದಾ ಭಜನಾ ವೃಂದ ಮಾರುತಿನಗರ ಹೊಸಬೆಟ್ಟು, ರಾಮಕ್ಷತ್ರಿಯ ಸಂಘ ಮುಲ್ಕಿ-ಸುರತ್ಕಲ್, ಶ್ರೀನಿವಾಸ ಸಂಗೀತ ಶಾಲೆ ಎಸ್ಕೋಡಿ, ಶ್ರೀಮದ್ಧರಿನಾಮ ಸಂಕೀರ್ತನೋಪಾಸನಾ ಸಂಘ ಬಾಲ, ಶ್ರೀ ಲಕ್ಷ್ಮೀ ವೆಂಕಟೇಶ ಪ್ರಾರ್ಥನಾ ಮಂದಿರ ಹೊಸಬೆಟ್ಟು, ಶುಭಂ ಭಜನಾ ತಂಡ ಮುಲ್ಕಿ, ಶ್ರೀ ಮಾತಾ ಸುರತ್ಕಲ್, ಶ್ರೀ ಮಹಾಮಾಯಿ ಭಜನಾ ಮಂಡಳಿ ನಿಡ್ಡೋಡಿ, ಭಗವತೀ ತೀಯಾ ಸಮಾಜ ಉದ್ಯಾವರ, ಶ್ರೀ ನವಶಕ್ತಿ ಭಜನಾ ಮಂಡಳಿ ಪಡ್ಡೆನೇರ್ಗ ಕೊಡಪೂರು ಮುಲ್ಕಿ, ನಾದಬಿಂದು ಭಜನಾ ಮಂಡಳಿ ಸುರತ್ಕಲ್, ಆರಾಧನಾ ಭಜನಾ ತಂಡ ಎಸ್ಕೋಡಿ, ಎಸ್ಎನ್ಡಿಪಿ ಬಿಲ್ಲವರ ಮಹಿಳಾ ಸಂಘ ಕೋಡಿಕಲ್, ಸಪ್ತಸ್ವರ ಭಜನಾ ಮಂಡಳಿ ಅಗರ್ಮೇಲು, ಶ್ರೀ ಭಗವತೀ ತೀಯಾ ಭಕ್ತ ವೃಂದ ಕಂಗಾಣಿಬೆಟ್ಟು, ಶ್ರೀ ರಾಧಾಕೃಷ್ಣ ಭಜನಾ ಮಂಡಳಿ ಕದಿಕೆ, ಬ್ರಹ್ಮಶ್ರೀ ನಾರಾಯಣ ಗುರು ಭಜನಾ ಮಂಡಳಿ ಇಡ್ಡಾ, ಕದಿಕೆ ಶ್ರೀ ಭಗವತೀ ಭಜನಾ ಮಂಡಳಿ, ಮೊಗವೀರ ಮಹಿಳಾ ಸಂಘ ದೊಡ್ಡಕೊಪ್ಲ, ಹರಿಜನ ಚಾರಂಡಾಯ ಯುವಕ ಮಂಡಲ ಪಂಜ, ಕುದ್ರೋಳಿ ಮಹಿಳಾ ಭಜನಾ ಮಂಡಳಿ, ಶ್ರೀ ರಾಘವೇಂದ್ರ ಭಜನಾ ಮಂಡಳಿ ಪಡು ಪೆರಾರ, ಮಹಿಳಾ ಮತ್ತು ಯುವತಿ ಮಂಡಲ ಸಸಿಹಿತ್ಲು, ಶ್ರೀ ದುರ್ಗಾ ಭಜನಾ ಮಂಡಳಿ ಎಕ್ಕಾರು, ಶಂಕರ ಭಜನಾ ಮಂಡಳಿ ಮುಲ್ಕಿ, ನೇತ್ರಾವತಿ ಮಾತೃ ಭಜನಾ ಮಂಡಳಿ ನೇತ್ರಾವತಿಕೆರೆ, ಶ್ರೀ ವಿಶ್ವಕರ್ಮ ಭಜನಾ ಮಂಡಳಿ ಹಳೆಅಂಗಡಿ, ಶ್ರೀ ರಾಮ ಭಜನಾ ಮಂಡಳಿ ಗುಡ್ಡೆಕೊಪ್ಲ, ನಂದಿನಿ ಭಗಿನಿಯರು ಚೆಲ್ಯಾರು ಹಾಗೂ ಶ್ರೀ ಭಗವತೀ ಭಕ್ತ ವೃಂದ ಸಸಿಹಿತ್ಲು ತಂಡಗಳಿಂದ ನಿರಂತರ ಭಜನಾ ಸೇವೆ ಜರುಗಲಿದೆ.
ಪ್ರತಿದಿನ ಮಧ್ಯಾಹ್ನ 12:30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ ಹಾಗೂ ರಾತ್ರಿ 8:00ಕ್ಕೆ ಮಹಾಪೂಜೆ ನಡೆಯಲಿದ್ದು, ಅಕ್ಟೋಬರ್ 21ರ ವಿಜಯದಶಮಿಯಂದು ಮಧ್ಯಾಹ್ನ ಮಹಾಪೂಜೆಯ ನಂತರ ಕಲಶ ವಿಸರ್ಜನೆ ನೆರವೇರಲಿದೆ.
ಈ ಎಲ್ಲಾ ಪೂಜಾ ಮಹೋತ್ಸವಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಪ್ರಸಾದ ಸ್ವೀಕರಿಸಿ ಶ್ರೀ ಭಗವತೀ ಮಾತೆಯ ಕೃಪೆಗೆ ಪಾತ್ರರಾಗಬೇಕಾಗಿ ದೇವಸ್ಥಾನದ ಗೌರವಾಧ್ಯಕ್ಷ ರೋಹಿದಾಸ್ ಬಂಗೇರ (ಮುಂಬಯಿ), ಆನುವಂಶಿಕ ಮೊಕ್ತೇಸರರು ಮತ್ತು ಕೋಶಾಧಿಕಾರಿ ಶ್ರೀನಿವಾಸ ಯಾನೆ ಅಪ್ಪ ಪೂಜಾರಿ, ಆಡಳಿತ ಮೊಕ್ತೇಸರ ಚಂದ್ರಶೇಖರ ಚೆಲ್ಲಡ ಕಟೀಲು, ಅಧ್ಯಕ್ಷ ವಾಮನ ಇಡ್ಡಾ, ಜತೆ ಕೋಶಾಧಿಕಾರಿ ಸುರೇಶ್ ಬಂಗೇರ, ಕಾರ್ಯದರ್ಶಿ ರಮೇಶ್ ಬಂಗೇರ, ಏಳೂರು ಗುರಿಕಾರರಾದ ಆಚಾರಪಟ್ಟವರು, ಜತೆ ಕಾರ್ಯದರ್ಶಿಗಳಾದ ರಾಜೇಂದ್ರ ಪ್ರಸಾದ್ ಎಕ್ಕಾರು, ಶಿವಣ್ಣ ಅಂಚನ್ ಕಾಪು, ಆಡಳಿತ ಸಮಿತಿ, ಅಭಿವೃದ್ಧಿ ಸಮಿತಿ ಹಾಗೂ ಸಸಿಹಿತ್ಲು ಗ್ರಾಮಸ್ಥರು ಮತ್ತು ಹತ್ತು ಸಮಸ್ತರು ವಿನಂತಿಸಿದ್ದಾರೆ.



