34 C
Mumbai
October 7, 2026
Mumbai News Kannada
ಪ್ರಕಟಣೆ

ಅ. 11ರಿಂದ 20ರ ತನಕ ಜೋಗೇಶ್ವರಿ ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನದಲ್ಲಿ ಶರನ್ನವರಾತ್ರಿ, ವಿಜಯದಶಮಿ ಮಹೋತ್ಸವ



ಮುಂಬಯಿ: ಜೋಗೇಶ್ವರಿ ಪೂರ್ವದ ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನ (ರಿ.) ದಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಮಹೋತ್ಸವವು ದಿನಾಂಕ 11-10-2026 ರವಿವಾರದಿಂದ 20-10-2026 ಮಂಗಳವಾರದವರೆಗೆ 10 ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

  • ಅ.11 ರವಿವಾರ: ಬೆಳಿಗ್ಗೆ 9.30ಕ್ಕೆ ಪ್ರಾರ್ಥನೆ, ಪುಣ್ಯಾಹವಾಚನ, ಘಟಸ್ಥಾಪನೆ, ನವಕ ಕಲಶ, ನವಕ ಪ್ರಧಾನ ಹೋಮ, ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ದ್ವಾದಶ ನಾರಿಕೇಳ ಗಣಯಾಗ, ಮಹಾಪೂಜೆ.
  • ಅ.12 ಸೋಮವಾರ: ಬೆಳಿಗ್ಗೆ 10 ಗಂಟೆಗೆ ಪಂಚಬ್ರಹ್ಮ ಮಂತ್ರಯಾಗ, ಮಹಾಪೂಜೆ.
  • ಅ.13 ಮಂಗಳವಾರ: ಬೆಳಿಗ್ಗೆ 10 ಗಂಟೆಗೆ ಸ್ವಯಂವರ ಪಾರ್ವತಿ ಮಂತ್ರಯಾಗ, ಮಹಾಪೂಜೆ.
  • ಅ.14 ಬುಧವಾರ: ಬೆಳಿಗ್ಗೆ 10 ಗಂಟೆಗೆ ಭಾಗ್ಯಸೂಕ್ತ, ಮನ್ಯುಸೂಕ್ತ ಯಾಗ, ಮಹಾಪೂಜೆ.
  • ಅ.15 ಗುರುವಾರ: ಬೆಳಿಗ್ಗೆ 8.30ಕ್ಕೆ ಲಲಿತಾ ಪಂಚಮಿ ಪ್ರಯುಕ್ತ ಸಾಮೂಹಿಕ ಚಂಡಿಕಾ ಯಾಗ, ಮಧ್ಯಾಹ್ನ 12ಕ್ಕೆ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ.
  • ಅ.16 ಶುಕ್ರವಾರ: ಬೆಳಿಗ್ಗೆ 10 ಗಂಟೆಗೆ ಲಕ್ಷ್ಮೀಹೃದಯ, ನಾರಾಯಣಹೃದಯ ಮಂತ್ರಯಾಗ, ಮಹಾಪೂಜೆ.
  • ಅ.17 ಶನಿವಾರ: ಬೆಳಿಗ್ಗೆ 10 ಗಂಟೆಗೆ ವಾಯುಸ್ತುತಿ ಪುರಶ್ಚರಣ ಯಾಗ, ಮಹಾಪೂಜೆ.
  • ಅ.18 ರವಿವಾರ: ಬೆಳಿಗ್ಗೆ 10 ಗಂಟೆಗೆ ಶ್ರೀಸೂಕ್ತ ಯಾಗ, ಮಹಾಪೂಜೆ.
  • ಅ.19 ಸೋಮವಾರ: ಬೆಳಿಗ್ಗೆ 10 ಗಂಟೆಗೆ ನವಾಕ್ಷರೀ ಮಂತ್ರಯಾಗ, ಮಹಾಪೂಜೆ.
  • ಅ.20 ಮಂಗಳವಾರ (ವಿಜಯದಶಮಿ): ಬೆಳಿಗ್ಗೆ 10 ಗಂಟೆಗೆ ಶ್ರೀ ದುರ್ಗಾ ಹೋಮ, ಮಧ್ಯಾಹ್ನ 12ಕ್ಕೆ ಪೂರ್ಣಾಹುತಿ, 12.30ಕ್ಕೆ ಮಹಾಪೂಜೆ. ರಾತ್ರಿ 7.30ಕ್ಕೆ ಕಾಲಭೈರವ ದೇವರಿಗೆ ರಂಗಪೂಜೆ ನಡೆಯಲಿದೆ. ಪ್ರತಿದಿನ ಮಧ್ಯಾಹ್ನ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ಜರಗಲಿದೆ.

ಎಲ್ಲಾ ಪೂಜಾ ಕಾರ್ಯಗಳು ಪ್ರಧಾನ ಅರ್ಚಕರಾದ ಪಾದೂರು ಶ್ರೀ ನರಹರಿ ತಂತ್ರಿ ಅವರ ಪೌರೋಹಿತ್ಯದಲ್ಲಿ ನಡೆಯಲಿದ್ದು, ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಅಧ್ಯಕ್ಷರು ಹಾಗೂ ಆಡಳಿತ ಮೊಕ್ತೇಸರರಾದ ಮುಂಡ್ಕೂರು ಸುರೇಂದ್ರ ಸಾಲ್ಯಾನ್, ಟ್ರಸ್ಟಿ ಹಾಗೂ ಗೌರವ ಕಾರ್ಯದರ್ಶಿ ದೇವದಾಸ್ ಎಸ್. ಸುವರ್ಣ, ಟ್ರಸ್ಟಿ ಹಾಗೂ ಉಪಾಧ್ಯಕ್ಷ ಎಚ್. ಬಾಬು ಪೂಜಾರಿ, ಟ್ರಸ್ಟಿ ಹಾಗೂ ಗೌರವ ಕೋಶಾಧಿಕಾರಿ ಡಿ. ಟಿ. ಕುಂದರ್, ಟ್ರಸ್ಟಿಗಳಾದ ಎಂ. ಸಿ. ಸುವರ್ಣ, ಜಿ. ಟಿ. ಆಚಾರ್ಯ, ಸಂಜೀವ ಪಿ. ಪೂಜಾರಿ, ಸುಂದರ್ ಸಿ. ಪೂಜಾರಿ, ಶೇಖರ ಕರ್ಕೇರ, ಸಂತೋಷ್ ಜಿ. ಶೆಟ್ಟಿ, ಲಕ್ಷ್ಮಣ್ ಪೂಜಾರಿ, ನವೀಕರಣ ಸಮಿತಿಯ ಕಾರ್ಯಾಧ್ಯಕ್ಷ ಸಂಜೀವ ಪಿ. ಪೂಜಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವನಿತಾ ಜಯಕರ್ ಶೆಟ್ಟಿ, ಭಜನಾ ಭುವಾಜಿ ಲವಕುಶ್ ಗುಪ್ತ, ಸೇವಾ ಸಮಿತಿ, ಭಜನಾ ಮಂಡಳಿ ಮತ್ತು ಮಹಿಳಾ ವಿಭಾಗದವರು ವಿನಂತಿಸಿದ್ದಾರೆ.



Related posts

ಬ್ರಹ್ಮಕಲಶ ಸಂಭ್ರಮದಲ್ಲಿ ಕಾರ್ನಾಡು ಶ್ರೀ ಹರಿಹರ ಕ್ಷೇತ್ರದ ಶ್ರೀ ಮೂರ್ತಿ ದೇವಸ್ಥಾನ

Mumbai News Desk

  ಜುಲೈ 12:ರಜಕ ಸಂಘ ಮುಂಬಯಿಯ ವಾರ್ಷಿಕ ಮಹಾಸಭೆ

Mumbai News Desk

ಶ್ರೀ ಅಯ್ಯಪ್ಪ ಸೇವಾ ಸಮಿತಿ ಕಿಸನ್ ನಗರ : ಅ. 11 ರಂದು ರಕ್ತದಾನ ಶಿಬಿರ.

Mumbai News Desk

ಸಾಫಲ್ಯ ಸೇವಾ ಸಂಘ ಮುಂಬೈ (ರಿ.): ಜುಲೈ 26ರಂದು ಬಂಟರ ಭವನದಲ್ಲಿ ಮಹಿಳಾ ವಿಭಾಗದ ವತಿಯಿಂದ ‘ಆಟಿಡ್ ಒಂಜಿ ದಿನ’

Mumbai News Desk

ಜುಲೈ 20 : ವೀರ ಕೇಸರಿ ಸಂಘ ಮೀರಾ -ಭಾಯಂದರ್ ವತಿಯಿಂದ ಭಗವದ್ಗೀತಾ ಪರೀಕ್ಷಾ ಸ್ಪರ್ಧೆ

Mumbai News Desk

     ಜೂ  ೧೬ :  ಶನಿ ಮಹಾತ್ಮ ಚಾರಿಟೇಬಲ್ ಸೊಸೈಟಿ ವತಿಯಿಂದ ವಿದ್ಯಾರ್ಥಿಗಳಿಗೆ   ಪುಸ್ತಕ,   ಸಾಮಗ್ರಿಗಳ  ವಿತರಣೆ

Mumbai News Desk