Mumbai News Kannada
ಸುದ್ದಿ

ಮಾನವೀಯತೆಗೆ ಸಾಕ್ಷಿಯಾದ ಮಹಾದಾನ, ಮಸ್ಕತ್‌ನಲ್ಲಿ 10ನೇ ‘ಜೀವಧಾರೆ’ ಸ್ವಯಂಪ್ರೇರಿತ ರಕ್ತದಾನ ಶಿಬಿರ ಯಶಸ್ವಿ



ಮಸ್ಕತ್, ಅಕ್ಟೋಬರ್ 2, 2026: ಗಾಂಧಿ ಜಯಂತಿಯ ಅಂಗವಾಗಿ ಮಾನ್ಯ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಪ್ರತಿಷ್ಠಾನ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಮತ್ತು ಕರ್ನಾಟಕ ಜಾನಪದ ಪರಿಷತ್ತು ಮಸ್ಕತ್–ಓಮಾನ್ ಘಟಕದ ಸಹಯೋಗದಲ್ಲಿ ಆಯೋಜಿಸಲಾದ 10ನೇ ‘ಜೀವಧಾರೆ’ ಸ್ವಯಂಪ್ರೇರಿತ ರಕ್ತದಾನ ಶಿಬಿರ ಮಸ್ಕತ್‌ನ ಗಾಲಾ ಹೆಲ್ತ್ ಸೆಂಟರ್‌ನಲ್ಲಿ ಯಶಸ್ವಿಯಾಗಿ ನಡೆಯಿತು. ಓಮಾನ್‌ನ ವಿವಿಧ ಭಾಗಗಳಿಂದ ಆಗಮಿಸಿದ ನೂರಕ್ಕೂ ಹೆಚ್ಚು ರಕ್ತದಾನಿಗಳು ಉತ್ಸಾಹದಿಂದ ಪಾಲ್ಗೊಂಡರು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಡಾ. ನಾಗರಾಜು ಜಿ.ಬಿ., “ಮಾನವನ ರಕ್ತದ ಪ್ರತಿಯೊಂದು ಹನಿಯೂ ಅಮೂಲ್ಯ. ರಕ್ತಕ್ಕೆ ಪರ್ಯಾಯವಿಲ್ಲ; ಆದ್ದರಿಂದ ಸ್ವಯಂಪ್ರೇರಿತ ರಕ್ತದಾನ ಅತ್ಯಂತ ಮಹತ್ವದ್ದು” ಎಂದು ಹೇಳಿದರು. ಡಾ. ದ್ವಾರಕನಾಥ್ ತುರ್ತು ಸಂದರ್ಭಗಳಲ್ಲಿ ರಕ್ತದ ಕೊರತೆಯಿಂದ ಎದುರಾಗುವ ಸಂಕಷ್ಟಗಳನ್ನು ವಿವರಿಸಿ, ಆರೋಗ್ಯವಂತರು ರಕ್ತದಾನಕ್ಕೆ ಮುಂದಾಗಬೇಕೆಂದು ಕರೆ ನೀಡಿದರು. ಡಾ. ಮಂಜುನಾಥ್ ರಕ್ತದಾನಿಗಳನ್ನು ಅಭಿನಂದಿಸಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಈ ಜೀವದಾನ ಕಾರ್ಯದಲ್ಲಿ ಭಾಗವಹಿಸಬೇಕೆಂದು ಪ್ರೋತ್ಸಾಹಿಸಿದರು.
ಕಾರ್ಯಕ್ರಮದಲ್ಲಿ ಡಾ. ಪ್ರಕಾಶ್, ಅಂತಾರಾಷ್ಟ್ರೀಯ ಬೈಕರ್ ಶ್ರೀ ಶರತ್, ಕರ್ನಾಟಕದಿಂದ ಆಗಮಿಸಿದ್ದ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಶ್ರೀ ಸತೀಶ್ ಸಲ್ಯಾನ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಗಣ್ಯರು ಉಪಸ್ಥಿತರಿದ್ದರು. ಶಿಬಿರದ ಶಿಸ್ತುಬದ್ಧ ಆಯೋಜನೆ ಮತ್ತು ದಾನಿಗಳ ಉತ್ಸಾಹವನ್ನು ಸತೀಶ್ ಸಲ್ಯಾನ್ ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಶಿಬಿರದ ಸಂಘಟಕರಾದ ಶ್ರೀ ಶಿವಾನಂದ ಕೋಟ್ಯಾನ್ ಕಟಪಾಡಿ ಅವರ ರಕ್ತದಾನದ ಮಹತ್ವ ಹಾಗೂ ಓಮಾನ್‌ನ ಹತ್ತು ವರ್ಷಗಳ ರಕ್ತದಾನ ಸೇವಾ ಪಯಣವನ್ನು ದಾಖಲಿಸಿರುವ ‘ಜೀವಧಾರೆ – ಜೀವನದ ಕಿರಣ’ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.
ಸಮಾಜಸೇವೆ, ತುರ್ತು ರಕ್ತ ಪೂರೈಕೆ ಹಾಗೂ ರಕ್ತದಾನ ಸೇವೆಯಲ್ಲಿ ಸಲ್ಲಿಸಿರುವ ಕೊಡುಗೆಯನ್ನು ಗುರುತಿಸಿ ಶ್ರೀ ಸತೀಶ್ ಸಲ್ಯಾನ್ ಅವರಿಗೆ ‘ಮಾನ್ಯ ಸೇವಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶಿಬಿರದ ಯಶಸ್ಸಿಗೆ ಸಹಕರಿಸಿದ ವೈದ್ಯಕೀಯ ಸಿಬ್ಬಂದಿ, ರಕ್ತದಾನಿಗಳು, ಸ್ವಯಂಸೇವಕರು, ಪ್ರಾಯೋಜಕರು ಹಾಗೂ ವಿವಿಧ ಸಂಘಟನೆಗಳಿಗೆ ಶ್ರೀ ಯುವರಾಜ್ ಸಲ್ಯಾನ್ ಕೃತಜ್ಞತೆ ಸಲ್ಲಿಸಿದರು. ಶ್ವೇತಾ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.
‘ರಕ್ತಕ್ಕೆ ಒಂದೇ ಬಣ್ಣ – ಮಾನವೀಯತೆ’ ಎಂಬ ಸಂದೇಶದೊಂದಿಗೆ ನಡೆದ ಈ 10ನೇ ರಕ್ತದಾನ ಶಿಬಿರವು ಓಮಾನ್‌ನ ಕನ್ನಡಿಗರು ಹಾಗೂ ಭಾರತೀಯ ಸಮುದಾಯದ ಒಗ್ಗಟ್ಟು ಮತ್ತು ಮಾನವೀಯ ಸೇವೆಗೆ ಸಾಕ್ಷಿಯಾದ ಸಾರ್ಥಕ ಕಾರ್ಯಕ್ರಮವಾಯಿತು.



Related posts

ಶಿವ ಸೇನಾ ನೇತಾರ, ಮಾಜಿ ಶಾಸಕ ಶ್ರೀಕಾಂತ್ ಸರ್ಮಳ್ಕರ್ ನಿಧನ

Mumbai News Desk

ಭವಾನಿ ಗಿರಿಯಾ ಪೂಜಾರಿ (ಭವಾನಿ ಟೀಚರ್) ನಿಧನ

Mumbai News Desk

ಉಡುಪಿ : 70ನೇ ಕನ್ನಡ ರಾಜ್ಯೋತ್ಸವ ಆಚರಣೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ: ಪ್ರಶಸ್ತಿ ಸ್ವೀಕರಿಸಿದ ಮುಂಬೈಯ ಸಮಾಜ ಸೇವಕ, ಕಲಾ ಪೋಷಕ ನವೀನ್ ಎಮ್ ಪೂಜಾರಿ ಪಡು ಇನ್ನಾ

Mumbai News Desk

ಕೊಂಡೆವೂರು ಶ್ರೀಗಳ 21 ನೇ ಚಾತುರ್ಮಾಸ್ಯ ವ್ರತಾಚರಣೆಉಪ್ಪಳ ಜು:    ಕೊಂಡೆವೂರು

Mumbai News Desk

ಮೂಲ್ಕಿ ಲಯನ್ಸ್ ಕ್ಲಬ್ ನ ನೂತನ ಅಧ್ಯಕ್ಷರಾಗಿ ಹರ್ಷರಾಜ್ ಶೆಟ್ಟಿ ಜಿ ಎಂ ಆಯ್ಕೆ

Mumbai News Desk

ಮಲಾಡ್ ಕುರಾರ್ ಶನೇಶ್ವರ ಮಂದಿರದ ವತಿಯಿಂದ ಉಳ್ಳಾಳ ಸೋಮೇಶ್ವರದಲ್ಲಿ, ಶ್ರೀ ಶನಿ ಮಹಾಪೂಜೆ.

Mumbai News Desk