29 C
Mumbai
August 28, 2026
Mumbai News Kannada
ಲೇಖನ

ಕರಾವಳಿಯಿಂದ ಮಾಯಾನಗರಿಯವರೆಗೆ ತುಳು ಕಂಪನ್ನು ಪಸರಿಸುತ್ತಿರುವ ‘ತುಲುವೆರೆ ಕಲ’





ಪಶ್ಚಿಮಘಟ್ಟದ ಮಲೆನಾಡ ತಪ್ಪಲಿನಿಂದ ನೀಲೇಶ್ವರದ ಗಡಿಯವರೆಗೆ ಕೊಡಚಾದ್ರಿಯ ತುದಿಯಿಂದ ಬಾರಕೂರಿನ ಕಡಲಕಿನಾರೆಯವರೆಗೆ ಸಮೃದ್ದವಾಗಿ ಹರಡಿಕೊಂಡಿರುವ ತುಳುನಾಡು ಹಾಗೂ ತುಳುವರ ಭಾಷಾ ಸಂಸ್ಕೃತಿ ಆಚಾರ ವಿಚಾರಗಳು ದೇಶದ ಪರಂಪರೆಯ ಇತಿಹಾಸಕ್ಕೆ ಕೊಟ್ಟ ಕಾಣಿಕೆ ಅಗಾಧ. ತುಳುನಾಡಿನಲ್ಲಿ ಕೃಷಿ ಹಾಗೂ ಋಷಿಪರಂಪರೆ ಅರಸು ಪರಂಪರೆ ಹಾಗೂ ಧಾರ್ಮಿಕ ಪರಂಪರೆಗಳ ಅನುಷ್ಠಾನಗಳ ವರ್ಣನಾತೀತ. ಅದೇ ರೀತಿ ಮಹಾಪುರುಷರು, ಮಾಯಾಪುರುಷರು, ಸ್ವಾತಂತ್ರ್ಯ ಹೋರಾಟಗಾರರು, ಕರಕುಶಲಕರ್ಮಿಗಳು, ಕೆಚ್ಚೆದೆಯ ಗಂಡುಗಲಿಗಳು, ಸಾಹಿತ್ಯ ದಿಗ್ಗಜರು, ದಾರ್ಶನಿಕರು ಸಾಧನೆಯ ಉತ್ತುಂಗವೇರಿದವರು ಅಗಣಿತ ಸಂಖ್ಯೆಗೂ ಮೀರಿ ಇತಿಹಾಸ ನಿರ್ಮಿಸಿದವರಿದ್ದಾರೆ‌. ಶೈಕ್ಷಣಿಕ,ಆರ್ಥಿಕ‌ ಹಾಗೂ ಉದ್ಯಮ ಕ್ಷೇತ್ರದಲ್ಲಿ ತುಳುನಾಡು ತನ್ನದೇ ಪ್ರಾಮುಖ್ಯ ಕೊಡುಗೆಯನ್ನು ದೇಶದ ಅಭಿವೃದ್ದಿಗೆ ನೀಡಿರುವುದು ನಮಗೆಲ್ಲ ಗೊತ್ತಿರುವ ಸಂಗತಿ. ದೃಶ್ಯ ಹಾಗೂ ಮುದ್ರಣ ಮಾದ್ಯಮ ಕ್ಷೇತ್ರದಲ್ಲೂ ಮೇಲುಗೈ ಸಾದಿಸಿರುವ ತುಳುನಾಡು ಇಂದು ವಿಶ್ವ ಭೂಪಟದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವುದು ಗತ ಇತಿಹಾಸ‌. ತುಳುನಾಡಿನ ಪ್ರಾಕೃತಿಕ ಸೌಂದರ್ಯದ ಬಗ್ಗೆ ಬರೆಯುವುದಕ್ಕಿಂತ ಸ್ವತಃ ಅನುಭವಿಸಿದರೆ ಮಾತ್ರ ಅದರ ಮಹತ್ವ ತಿಳಿದುಕೊಳ್ಳಲು ಸಾಧ್ಯ. ತುಳುನಾಡಲ್ಲಿ ಏನಿದೆ ಅನ್ನುವುದಕ್ಕಿಂತ ಏನಿಲ್ಲ ಎಂದು ತಿಳಿದುಕೊಂಡರೆ ಮಾತ್ರ ತುಳುನಾಡಿನ ಆಸ್ಮಿತೆಗೆ ಬಲಸಿಗಲು ಸಾದ್ಯವಿದೆ. ತುಳುನಾಡಿನ ಐಕ್ಯತೆ ಮತ್ತು ಸಾಮರಸ್ಯದ ಬದುಕು ಅನುಕರಣೀಯ ಹಾಗೂ ಆದರ್ಶನೀಯವಾಗಿದೆ. ಇಂತಹ ಸಮೃದ್ದ ಹಾಗೂ ಸಂಪತ್ಬರಿತ ತುಳುನಾಡಿನ ಭಾಷೆ ಮತ್ತು ಸಾಹಿತ್ಯದ ಉಳಿವಿಗಾಗಿ ಹೋರಾಟ ಮಾಡಬೇಕಾದ ಅನಿವಾರ್ಯ ಸ್ಥಿತಿ ಬಂದೊದಗಿರುವುದು ದುರ್ದೈವದ ಸಂಗತಿ. ತುಳುನಾಡು ಹಾಗೂ ತುಳುನಾಡಿನ ಭಾಷೆ ಮತ್ತು ಸಾಹಿತ್ಯದ ಉಳಿವಿಗಾಗಿ ಹೋರಾಡಿದ ಹೋರಾಡುತ್ತಿರುವ ಸಂಪನ್ಮೂಲ ವ್ಯಕ್ತಿಗಳ ನೇತೃತ್ವದ ಸಂಘಟನೆಗಳು ನೂರಾರಿವೆ. ಅಂತಹ ಸಂಘಟನೆಗಳಲ್ಲಿ ಒಂದಾಗಿರುವ ಮಂಗಳೂರು ತಾಲೋಕಿನ ಕೊಂಚಾಡಿ ಸಮೀಪದ ಶ್ರೀಮತಿ ಗೀತಾಲಕ್ಷ್ಮೀಶ್ ಅವರ ನೇತೃತ್ವದಲ್ಲಿ ಬಾಹ್ಯ ಹಾಗೂ ಆಂತರಿಕವಾಗಿ ಕಾರ್ಯಾಚರಿಸುವ ತುಲುವೆರೆ ಕಲವೂ ಒಂದಾಗಿರುತ್ತದೆ. ಸಾಮಾನ್ಯ ತುಳುವ ಕುಟುಂಬದ ಸದಸ್ಯೆಯಾಗಿರುವ ಗೀತಾಲಕ್ಷ್ಮೀಶ್ ಆರಂಭದಲ್ಲಿ ತುಳುನಾಡು ಸಂಘಟಣೆಯೊಂದಿಗೆ ಗುರುತಿಸಿಕೊಂಡು ತುಳುಲಿಪಿಯ ಶಿಕ್ಷಕಿಯಾಗಿ ಸಹಸ್ರಾರು ವಿದ್ಯಾರ್ಥಿಗಳಿಗೆ ತುಳುಲಿಪಿಯನ್ನ ಕಲಿಸುತ್ತಾ ತನ್ನೊಳಗಿನ ಬರಹಗಾರ್ಥಿಯನ್ನು ತುಳುಭಾಷಾ ಸಾಹಿತ್ಯದ ಬೆಳವಣಿಗೆಗಾಗಿ ಮುಡಿಪಾಗಿಟ್ಟು ಮೌನಹೋರಾಟದಲ್ಲಿ ನಿರತರಾಗಿದ್ದರೂ ಅವರ ಹೋರಾಟದ ತೀವೃತೆ ಬೆಚ್ಚಿ ಬೆರಗುಗೊಳಿಸುವಂತದ್ದು. ತಮ್ಮದೇ ಪರಿಕಲ್ಪನೆಯಲ್ಲಿ ಕೇವಲ ನಾಲ್ಕು ವರ್ಷದ ಹಿಂದೆ ತುಲುವೆರೆ ಕಲ ಎಂಬ ಸಂಘಟನೆ ಆರಂಭಿಸಿದ ಗೀತಾಲಕ್ಷ್ಮೀಶ್ ತುಳುನಾಡಿನ ಹಿರಿಕಿರಿ ಬರಹಗಾರರನ್ನು ಒಟ್ಟು ಸೇರಿಸಿ 25 ಸಾವಿರಕ್ಕೂ ಮೀರಿದ ವಿವಿದ ಪ್ರಕಾರದ ಬರಹಕೃಷಿ ಫಸಲನ್ನು ತೆಗೆಸುವ ಮೂಲಕ ತಮ್ಮದೇ ಸಂಪಾದಕತ್ವದಲ್ಲಿ ಹದಿನಾರು ವಿವಿದ ಮುಖಛಾಯ ಬರಹವುಳ್ಳ ಪುಸ್ತಕಗಳನ್ನು ಪ್ರಕಟಮಾಡಿ ಲೋಕಾರ್ಪಣೆ ಮಾಡುವ ಮೂಲಕ ಸದ್ದಿಲ್ಲದೆ ಸುದ್ದಿ ಮಾಡುತ್ತಿದ್ದಾರೆ. ಅದಲ್ಲದೆ ಹೊಸಬರಹಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಲತಬೊಲ್ಲಿ ಎಂಬ ಗೌರವವನ್ನು ಸಮರ್ಪಿಸಿ ಹೊಸ ಬರಹಗಾರರಿಗೆ ಪ್ರೇರಣೆಯಾಗಿದ್ದಾರೆ. ಈಗಾಗಲೇ ಮಂಗಳೂರು, ಕೊಂಡೆವೂರು, ಒಡಿಯೂರಿನಲ್ಲಿ ಕ್ರಮಾನುಸಾರ ವರ್ಷದ ವಾರ್ಷಿಕೋತ್ಸವವನ್ನು ಸಂಪನ್ನಗೊಳಿಸಿ ಕೊಂಡೆವೂರು ಶ್ರೀಗಳು ಮತ್ತು ಒಡಿಯೂರು ಶ್ರೀಗಳಿಂದ ಸನ್ಮಾನಿತರಾಗಿರುವ ಗೀತಾಲಕ್ಷ್ಮೀಶ್ ತಮ್ಮ ಸಾಮಾಜಿಕ ಜನಪರ ಚಟುವಟಿಕೆಗಾಗಿ ಅಬ್ಬಕ್ಕ ಗೌರವ ರಾಜ್ಯಪುರಸ್ಕಾರವನ್ನು ತಮ್ಮ ಮುಡಿಗೇರಿಸಿಕೊಂಡು ಯುವಬರಹಗಾರರಿಗೆ ಚೇತನಾಮಯಿ ಆಗಿದ್ದುಕ್ಕೊಂಡು ತನ್ನ ಸಂಘಟನೆಯನ್ನು ವಿಸ್ತರಿಸುವ ಸಲುವಾಗಿ ಮುಂಬೈಯ ಬರಹಾಸಕ್ತ ತುಳುವರನ್ನು ಒಟ್ಟುಸೇರಿಸಿ ಅಲ್ಲಿ ನೆಲೆಸಿರುವ ಕ್ರೀಯಾಶೀಲ ಬರಹಗಾರ್ಥಿ ಶ್ರೀಮತಿ ಪ್ರಫುಲ್ಲ ದಿನೇಶ್ ಶೆಟ್ಟಿ ಪಡುಕುಡೂರು ಇವರ ನೇತೃತ್ವಕ್ಕೆ ಜವಬ್ದಾರಿ ಕೊಟ್ಟು ತುಲುವೆರೆ ಕಲ ಬೊಂಬೆ ಎಗ್ಗೆ ಎಂಬ ಮೂಲ ಸಂಘಟನೆಯ ಸಹಸಂಸ್ಥೆಯನ್ನು ರಚಿಸಿ ಮುಂಬೈಯ ಹೊಸ ಬರಹಗಾರರಿಗೆ ವೇದಿಕೆ ಕಲ್ಪಿಸಿಕೊಡುವ ಮೂಲಕ ಸಂಸ್ಥೆಯ ಮೊದಲ ವಾರ್ಷಿಕೋತ್ಸವವನ್ನು ಸಾಹಿತ್ಯ ಸಾಂಸ್ಕೃತಿಕ ವಿಚಾರದಾರೆಯಡಿಯಲ್ಲಿ ಮುಂಬೈಯ ಡೊಂಬಿವಲಿಯಲ್ಲಿ ಇದೇ ಬರುವ ತಾ:30/08/2026 ಮಾಡುವ ಯೋಜನೆಯಲ್ಲಿರುವ ನಿರತರಾಗಿರುವ ಗೀತಾಲಕ್ಷ್ಮೀಶ್ ಈ ಕಾರ್ಯಕ್ರಮದಲ್ಲಿ ತುಳುನಾಡು ಕಂಡ ಖ್ಯಾತ ನಿರೂಪಕ,ಬರಹಗಾರ, ನಾಟಕ ರಚನೆಕಾರ,ಕಲಾವಿದ ಶ್ರೀ ಹರೀಶ್ ಕುಲಾಲ್ ನಯನಾಡು( ಎಚ್ಕೆ ನಯನಾಡು) ಮತ್ತು ದ್ವಿಭಾಷಾ ಕವಯತ್ರಿ ಮುಂಬೈ ನಿವಾಸಿ ಶ್ರೀಮತಿ ಕುಮುದ ಡಿ ಶೆಟ್ಟಿ ಇವರನ್ನು ಕಲತ ಬೊಲ್ಲಿ ಎಂಬ ಗೌರವದ ಬಿರದನ್ನಿತ್ತು ಸನ್ಮಾನಿಸುವ ಕನಸನ್ನು ಹೊಂದಿರುತ್ತಾರೆ. ತುಳು ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗಾಗಿ ಆಹೋರಾತ್ರಿ ಶ್ರಮವಹಿಸಿ ಕನಿಷ್ಠ ಅವದಿಯಲ್ಲಿ ಗರಿಷ್ಠ ಸಾಧನೆಯನ್ನು ಮಾಡಿರುವ ಶ್ರೀಮತಿ ಗೀತಾಲಕ್ಷ್ಮೀಶ್ ಅವರನ್ನು ಆಡಾಳಿತಾರೂಡ ಸರ್ಕಾರ ಮತ್ತು ತುಳುನಾಡಿನ ಸಂಘ ಸಂಸ್ಥೆಗಳು ಗುರುತಿಸಿ ಬಲ ತುಂಬುವ ಮುಖೇನ ಹೆಣ್ಮಗಳ ಸಾದನೆಯ ಕ್ಲಿಷ್ಠಕರ ಹಾದಿಗೆ ಸುಗಮ ರಹದಾರಿಯ ಮಾಡಿಕೊಡುವಲ್ಲಿ ಸಹಕರಿಸಿದರೆ ತುಳು ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆ ಮಗದಷ್ಠು ಹೆಚ್ಚಾಗಲು ಸಾದ್ಯವಿದೆ ಎಂಬ ನಿಲುವಿನೊಂದಿಗೆ ಶ್ರೀಮತಿ ಗೀತಾಲಕ್ಷ್ಮೀಶ್ ಅವರ ಕಾರ್ಯಸಾಧನೆಯಿಂದ ಪ್ರಭಾವಿತನಾದ ನಾನು ಅವರ ಅಭಿಮಾನಿಯೆಂಬ ನೆಲೆಯಲ್ಲಿ ಈ ಲೇಖನವ ಬರೆದು ನಿಮ್ಮ ಮುಂದಿಡುತ್ತಿದ್ದೇನೆ..🙏

ಜೈ ತುಳುನಾಡು..✊

✍️ಆರ್ಯನ್ ಸವನಾಲ್
ಸವಣಾಲು, ಬೆಳ್ತಂಗಡಿ
8105196987



Related posts

ಶ್ರೀ ಉಮಾಮಹೇಶ್ವರಿ ಭಜನಾ ಮಂಡಳಿ ಜೆರಿಮರಿ – ತಿರುಪತಿಯಲ್ಲಿ ಹತ್ತು ವರ್ಷಗಳಿಂದ ನಿರಂತರ ಭಜನಾ ಸೇವೆ.

Mumbai News Desk

ಕುಲಾಲ ಸಂಘ, ಮುಂಬಯಿ.  ನ 23: ಮಂಗಳೂರಿನ ಮಂಗಳ ದೇವಿ ಬಳಿ ಕುಲಾಲ ಭವನ ಲೋಕಾರ್ಪಣೆ

Mumbai News Desk

ಉಡುಪಿ ಜಿಲ್ಲೆಯ ಗರೋಡಿಗಳಲ್ಲಿ ಅಗೆಲು ಸೇವೆ ದಿವಸ ಹೌಂದೆ ರಾಯನ ಓಲಗ ವಿಶೇಷ.

Mumbai News Desk

ದೀಪಾವಳಿ: ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವ ದೀಪಗಳ ಹಬ್ಬ

Mumbai News Desk

ಸುನಿತಾ ವಿಲಿಯಮ್ಸ್ ಗೂ ಭಾರತಕ್ಕೂ ಇರುವ ಸಂಬಂಧ

Mumbai News Desk

ಸಿಯಾಚಿನ್ ಗಡಿಯಿಂದ ಕೊಂಕಣ ರೈಲ್ವೆಯವರೆಗೆ: ಕ್ರಾಂತಿಪುರುಷ, ಶೋಷಿತರ ಧ್ವನಿ ಜಾರ್ಜ್ ಫೆರ್ನಾಂಡಿಸ್ ಅವರ 97ನೇ ಜನ್ಮದಿನದ ಸ್ಮರಣೆ

Mumbai News Desk