
ಡೊಂಬಿವ್ಲಿ: ಶ್ರೀ ರಜಕ ಸಂಘ ಮುಂಬೈ (ಡೊಂಬಿವ್ಲಿ ವಲಯ) ವತಿಯಿಂದ ವಾರ್ಷಿಕ ಹೊರೆಕಾಣಿಕೆ ಮೆರವಣಿಗೆಯು ಭಾನುವಾರ ಸಂಜೆ 4:00 ಗಂಟೆಗೆ ವಿಜೃಂಭಣೆಯಿಂದ ಜರುಗಿತು. ಡೊಂಬಿವ್ಲಿಯ ದೇವಿ ಚೌಕ್‌ನಲ್ಲಿರುವ 5, ಭಾರತ್ ಜೋಶಿ ಕಟ್ಟಡದ ಸಂಘದ ವಲಯ ಕಚೇರಿಯಿಂದ ಆರಂಭಗೊಂಡ ಮೆರವಣಿಗೆಯು ಡೊಂಬಿವ್ಲಿ ಪಶ್ಚಿಮದಲ್ಲಿರುವ ಜಗದಂಬಾ ದೇವಸ್ಥಾನದವರೆಗೆ ಸಾಗಿತು. ಸಂಘದ ಸದಸ್ಯರು ಅತ್ಯಂತ ಉತ್ಸಾಹದಿಂದ ಇದರಲ್ಲಿ ಪಾಲ್ಗೊಂಡರು.
ಮೆರವಣಿಗೆಯಲ್ಲಿ ವಲಯ ಅಧ್ಯಕ್ಷರಾದ ಶ್ರೀ ಜಯರಾಜ ಬಂಗೇರ, ಉಪಾಧ್ಯಕ್ಷರಾದ ಶ್ರೀ ಬಿ. ಕೆ. ಜಗನ್ನಾಥ್, ಕಾರ್ಯದರ್ಶಿ ಶ್ರೀ ನಿತೀಶ್ ಸಾಲ್ಯಾನ್, ಶ್ರೀ ಬಾಲಕೃಷ್ಣ ಸಾಲ್ಯಾನ್, ಶ್ರೀ ಭುಜಂಗ ಡಿ. ಸಾಲ್ಯಾನ್, ಶ್ರೀ ಚಂದ್ರಹಾಸ್, ಶ್ರೀ ಹರೀಶ್ ಮಡಿವಾಳ ಹಾಗೂ ಯುವ ಘಟಕದ ಅಧ್ಯಕ್ಷರಾದ ಶ್ರೀಜಿತ್ ಜೆ. ಕುಂದರ್, ರೀತ್ ಆರ್. ಕುಂದರ್, ಸಾನಿಕಾ ಮಡಿವಾಳ, ರಕ್ಷಿತ್ ಜೆ. ಕುಂದರ್, ಶ್ರೀ ಜಗದೀಶ್ ಎಸ್. ಸಾಲ್ಯಾನ್, ಶ್ರೀ ಪ್ರಕಾಶ್ ಜೆ. ಸಾಲ್ಯಾನ್, ಶ್ರೀ ಜಗದೀಶ್ ಸಾಲ್ಯಾನ್ ಸೇರಿದಂತೆ ಇತರ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದು ಮುನ್ನಡೆಸಿದರು.

ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಗೀತಾ ರೂಪೇಶ್ ಕುಂದರ್, ಉಪಾಧ್ಯಕ್ಷೆ ಶ್ರೀಮತಿ ಉಷಾ ನಾರಾಯಣ್ ಹಾಗೂ ಕಾರ್ಯದರ್ಶಿ ಶ್ರೀಮತಿ ಶಾಂತಿ ಹರೀಶ್ ಮಡಿವಾಳ ಅವರ ನೇತೃತ್ವದಲ್ಲಿ ಮಹಿಳಾ ಘಟಕವು ಮೆರವಣಿಗೆಯ ಆಯೋಜನೆ ಮತ್ತು ವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ವಹಿಸಿತು. ಪ್ರಮುಖರಾದ ಶ್ರೀಮತಿ ಪುಷ್ಪಾ ಬಂಗೇರ, ಶ್ರೀಮತಿ ಗೀತಾ ಬಿ. ಸಾಲ್ಯಾನ್, ಶ್ರೀಮತಿ ನೈನಾ ಆರ್. ಸಾಲ್ಯಾನ್, ಶ್ರೀಮತಿ ಲಕ್ಷ್ಮಿ ಬಾಲಕೃಷ್ಣ ಸಾಲ್ಯಾನ್, ಶ್ರೀಮತಿ ಜಯಶ್ರೀ ಪಿ. ಕುಂದರ್, ಶ್ರೀಮತಿ ಗೀತಾ ಕೆ. ಕುಂದರ್, ಶ್ರೀಮತಿ ಪೂರ್ಣಿಮಾ ರಾಜೇಶ್ ಕುಂದರ್, ಶ್ರೀಮತಿ ಸುಜಾತಾ ಎ. ಸಾಲ್ಯಾನ್, ಶ್ರೀಮತಿ ಶಾರದಾ ಎನ್. ಸಾಲ್ಯಾನ್, ಶ್ರೀಮತಿ ಶಾಂತಾ ಜೆ. ಕುಂದರ್ ಸೇರಿದಂತೆ ನೂರಾರು ಸದಸ್ಯರು ಸಕ್ರಿಯವಾಗಿ ಭಾಗವಹಿಸಿದರು.
ವಾರ್ಷಿಕ ಸಂಪ್ರದಾಯದ ಅಂಗವಾಗಿ, ನವರಾತ್ರಿ ಉತ್ಸವದ ಒಂಬತ್ತು ದಿನಗಳ ಕಾಲ ನಡೆಯಲಿರುವ ಅನ್ನಸಂತರ್ಪಣೆ (ಸಾಮೂಹಿಕ ಅನ್ನದಾನ ಸೇವೆ) ಕಾರ್ಯಕ್ರಮಕ್ಕಾಗಿ ಭಕ್ತರು ಹಾಗೂ ಸದಸ್ಯರು ಅಗತ್ಯ ಆಹಾರ ಧಾನ್ಯಗಳು, ದಿನಸಿ ಸಾಮಗ್ರಿಗಳು ಮತ್ತು ತರಕಾರಿಗಳನ್ನು ಹೊರೆಕಾಣಿಕೆಯಾಗಿ ಸಮರ್ಪಿಸಿದರು.
ಶ್ರೀ ರಜಕ ಸಂಘ ಮುಂಬೈನ ಸದಸ್ಯರಲ್ಲಿ ಭಕ್ತಿ, ಏಕತೆ, ಉದಾರತೆ ಮತ್ತು ಸಮಾಜಸೇವೆಯ ಮನೋಭಾವವನ್ನು ಈ ಮೆರವಣಿಗೆ ಪ್ರತಿಬಿಂಬಿಸಿತು. ವಾರ್ಷಿಕ ಹೊರೆಕಾಣಿಕೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಿದ ಸಮಸ್ತ ಭಕ್ತವೃಂದ, ಸದಸ್ಯರು ಹಾಗೂ ಹಿತೈಷಿಗಳಿಗೆ ಸಂಘವು ಈ ಸಂದರ್ಭದಲ್ಲಿ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿತು.



