ಮುಂಬಯಿ: ಜಯ ಸಿ. ಸುವರ್ಣ ಅಭಿಮಾನಿಗಳು, ಮಹಿಳಾ ಅಭಿಮಾನಿಗಳು, ಯುವ ಅಭಿಮಾನಿಗಳು, ಮುಂಬಯಿ ಬಿಲ್ಲವರು ಹಾಗೂ ಶ್ರೀ ನಾರಾಯಣ ಗುರು ಭಜನಾ ಮಂಡಳಿ (ರಿ.), ಮುಂಬಯಿ ಇವರ ಸಹಯೋಗದೊಂದಿಗೆ ಅಕ್ಟೋಬರ್ 17ರಂದು (ಶನಿವಾರ) ದಸರಾ ಹಬ್ಬದ ಪ್ರಯುಕ್ತ ಗೊರೆಗಾಂವ್ ಪೂರ್ವದ ಲೀಲಾಸ್ ಬ್ಯಾಂಕ್ವೆಟ್ ಹಾಲ್ನಲ್ಲಿ ನವರಾತ್ರಿ ಉತ್ಸವ, ಗರ್ಭಾ ನೃತ್ಯ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಸಂಜೆ 4:00 ರಿಂದ 5:00 ರವರೆಗೆ ಕುಂಕುಮಾರ್ಚನೆ, 5:00 ರಿಂದ 6:00 ರವರೆಗೆ ಲಲಿತಾ ಸಹಸ್ರನಾಮಾರ್ಚನೆ, 6:00 ರಿಂದ 7:00 ರವರೆಗೆ ಶ್ರೀ ನಾರಾಯಣ ಗುರು ಭಜನಾ ಮಂಡಳಿಯ ಎಲ್ಲಾ ಘಟಕದವರಿಂದ ಭಜನೆ, 7:00 ರಿಂದ 9:00 ರವರೆಗೆ ಗರ್ಭಾ ನೃತ್ಯ, ದಾಂಡಿಯಾ ರಾಸ್ ಹಾಗೂ ರಾತ್ರಿ 9:00 ರಿಂದ ಅನ್ನಪ್ರಸಾದ ವಿತರಣೆ ನೆರವೇರಲಿದೆ.
ಈ ಪ್ರಯುಕ್ತ ಜಯ ಸಿ. ಸುವರ್ಣ ಅಭಿಮಾನಿಗಳು, ಯುವ ಅಭಿಮಾನಿಗಳು, ಮಹಿಳಾ ಅಭಿಮಾನಿಗಳು, ಶ್ರೀ ನಾರಾಯಣ ಗುರು ಭಜನಾ ಮಂಡಳಿಯ ಸದಸ್ಯರು, ಸುವರ್ಣ ಸೇತು ಹಾಗೂ ಮುಂಬಯಿ ಬಿಲ್ಲವರೆಲ್ಲರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗಿ ಜಯ ಸಿ. ಸುವರ್ಣ ಅಭಿಮಾನಿಗಳ ಅಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ, ಕಾರ್ಯದರ್ಶಿ ಮೋಹನ್ದಾಸ್ ಜಿ. ಪೂಜಾರಿ; ಶ್ರೀ ನಾರಾಯಣ ಗುರು ಭಜನಾ ಮಂಡಳಿ (ರಿ.), ಮುಂಬಯಿ ಪರವಾಗಿ ಅಧ್ಯಕ್ಷ ಅಶೋಕ್ ಕುಕ್ಯಾನ್, ಕಾರ್ಯದರ್ಶಿ ಕೇಶವ್ ಎಸ್. ಪೂಜಾರಿ; ಜಯ ಸಿ. ಸುವರ್ಣ ಮಹಿಳಾ ಅಭಿಮಾನಿ ಬಳಗದ ಉಪಕಾರ್ಯಾಧ್ಯಕ್ಷೆಯರಾದ ವನಿತಾ ಎ. ಕುಕ್ಯಾನ್, ದೇವಕಿ ಎಸ್. ಕರ್ಕೇರ, ಶಶಿಕಲಾ ಎಸ್. ಕೋಟ್ಯಾನ್, ಭವಾನಿ ಸಿ. ಕೋಟ್ಯಾನ್, ಮಾಲತಿ ಆರ್. ಬಂಗೇರ, ಪ್ರೇಮಾ ಜೆ. ಪೂಜಾರಿ, ಕಾರ್ಯದರ್ಶಿ ಸಬಿತಾ ಜಿ. ಪೂಜಾರಿ, ಖಜಾಂಚಿ ಬಬಿತಾ ಡಿ. ಕೋಟ್ಯಾನ್, ಜೊತೆ ಕಾರ್ಯದರ್ಶಿಗಳಾದ ಲೀಲಾ ಗಣೇಶ್, ಬಬಿತಾ ಜೆ. ಪೂಜಾರಿ; ಹಾಗೂ ಜಯ ಸಿ. ಸುವರ್ಣ ಯುವ ಅಭಿಮಾನಿ ಬಳಗದ ಕಾರ್ಯಾಧ್ಯಕ್ಷ ಗಣೇಶ್ ಡಿ. ಪೂಜಾರಿ, ಕಾರ್ಯದರ್ಶಿ ಗಣೇಶ್ ಎಸ್. ಪೂಜಾರಿ ಮತ್ತು ಪದಾಧಿಕಾರಿಗಳು ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.



