November 13, 2026
Mumbai News Kannada
ಪ್ರಕಟಣೆ

ಭಾಂಡೂಪ್‌ನಲ್ಲಿ ಡಿ. 5 ರಂದು 48ನೇ ವಾರ್ಷಿಕ ಮಹಾಪೂಜೋತ್ಸವ





















ಮುಂಬಯಿ: ನಗರದ ಭಾಂಡೂಪ್ (ಪಶ್ಚಿಮ) ಮಿನಿಲ್ಯಾಂಡ್‌ನ ಶ್ರೀ ಪಿಂಪಳೇಶ್ವರ ಮಹಾದೇವ ಮಂದಿರದಲ್ಲಿ, ‘ಶ್ರೀ ಶನೀಶ್ವರ ಭಕ್ತ ವೃಂದ ಮಿತ್ರ ಮಂಡಳಿ (ರಿ.)’ ವತಿಯಿಂದ 48ನೇ ವಾರ್ಷಿಕ ಮಹಾಪೂಜೋತ್ಸವವನ್ನು ನವೆಂಬರ್ 29ರಿಂದ ಡಿಸೆಂಬರ್ 5ರವರೆಗೆ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮಗಳ ವಿವರ:



















  • ನ. 29: ಬೆಳಿಗ್ಗೆ 6.30ಕ್ಕೆ ಗಣಹೋಮ, ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಭಜನಾ ಮಂಗಳೋತ್ಸವ ನಡೆಯಲಿದೆ.
  • ನ. 30: ಬೆಳಿಗ್ಗೆ 8ರಿಂದ ರುದ್ರಾಭಿಷೇಕ ಹಾಗೂ 108 ಕಲಶಾಭಿಷೇಕ ಜರುಗಲಿದೆ.
  • ಡಿ. 1: ಬೆಳಿಗ್ಗೆ 7ರಿಂದ ಗಣಪತಿ ಮಹಾ ನೈವೇದ್ಯ (ಛಪ್ಪನ್ ಭೋಗ್) ನೆರವೇರಲಿದೆ.
  • ಡಿ. 2: ಸಂಜೆ 6ರಿಂದ ಆಶ್ಲೇಷ ಬಲಿ ಪೂಜೆ ನಡೆಯಲಿದೆ (ಆಸಕ್ತ ಭಕ್ತರು ರೂ. 1,000 ಪಾವತಿಸಿ ರಶೀದಿ ಪಡೆಯಬಹುದು).
  • ಡಿ. 3: ಸಂಜೆ 7.30ಕ್ಕೆ ಸಾಯಿಬಾಬಾ ಆರತಿ ಜರುಗಲಿದೆ.
  • ಡಿ. 4: ಭಗವತಿ ಸೇವಾ ದುರ್ಗಾನಮಸ್ಕಾರ ಪೂಜೆ ನಡೆಯಲಿದೆ.
  • ಡಿ. 5 (ಮಹಾಪೂಜೋತ್ಸವ): ಬೆಳಿಗ್ಗೆ 9ರಿಂದ 11ರವರೆಗೆ ಶ್ರೀ ಸತ್ಯನಾರಾಯಣ ಮಹಾಪೂಜೆ ಹಾಗೂ ತೀರ್ಥ ಪ್ರಸಾದ ವಿತರಣೆ, ಮಧ್ಯಾಹ್ನ 12.30ಕ್ಕೆ ಶ್ರೀ ಶನೀಶ್ವರ ಗ್ರಂಥ ಪಾರಾಯಣ, ಸಂಜೆ 6ಕ್ಕೆ ಭಾಂಡೂಪ್‌ನ ಶ್ರೀ ಕೃಷ್ಣ ಪ್ರಸಾದಿತ ಭಜನಾ ಮಂಡಳಿಯವರಿಂದ ಭಜನೆ, ರಾತ್ರಿ 7ರಿಂದ 11ರವರೆಗೆ ಮಹಾಪ್ರಸಾದ (ಅನ್ನಸಂತರ್ಪಣೆ) ಹಾಗೂ ರಾತ್ರಿ 8ಕ್ಕೆ ಶ್ರೀ ಶನೀಶ್ವರ ಮಂಗಳಾರತಿ ನೆರವೇರಲಿದೆ.

ಪ್ರಧಾನ ಅರ್ಚಕ ಶ್ರೀ ಕಿಶೋರ್ ಆರ್. ಸಾಲಿಯಾನ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ಮಂಡಳಿಯ ಕಾರ್ಯಾಧ್ಯಕ್ಷ ಸಿ. ಲಕ್ಷ್ಮಣ್, ಅಧ್ಯಕ್ಷ ಅರುಣ್ ಬಂಗೇರ, ಪ್ರಧಾನ ಕಾರ್ಯದರ್ಶಿ ನವೀನ್ ಅಂಚನ್, ಖಜಾಂಚಿ ದಿನೇಶ್ ಕೆ. ಸಾಲಿಯಾನ್, ಸಂಘಟನಾ ಕಾರ್ಯದರ್ಶಿ ಸತೀಶ್ ಸುವರ್ಣ ಹಾಗೂ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದು ದೇವತಾ ಕೃಪೆಗೆ ಪಾತ್ರರಾಗಬೇಕಾಗಿ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ…

ಅನ್ನದಾನ ಸೇವೆ ಹಾಗೂ ಹೆಚ್ಚಿನ ಮಾಹಿತಿಗಾಗಿ ನವೀನ್ ಅಂಚನ್ (8850598062) ಅಥವಾ ಸತೀಶ್ ಸುವರ್ಣ (9892747878) ಅವರನ್ನು ಸಂಪರ್ಕಿಸಬಹುದು.







































































































.

.



Related posts

ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನ ಇಂದಿನಿಂದ ಜಾತ್ರೆ, ಕುಂಭ ಮಹೋತ್ಸವ,.

Mumbai News Desk

ಸೆ.5 ರಂದು ಅಂಧೇರಿ ಶ್ರೀ ಲಕ್ಷ್ಮೀ ನಾರಾಯಣ ಮಂದಿರದಲ್ಲಿ ತುಳು ಹರಿಕಥೆಯ ನಾದ ಲಹರಿ

Mumbai News Desk

ಮೇ. 10 : ವಿದ್ಯಾವಿಹಾ‌ರ್ ಪಶ್ಚಿಮದ ಗಾಂವ್‌ದೇವಿಯ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿಶ್ರೀ ರಾಮ ಕಥಾ ಹೃದಯಂ ಸರಣಿ ತಾಳಮದ್ದಳೆ, ಸಮ್ಮಾನ

Mumbai News Desk

ಮಾ.7: ಸಸಿಹಿತ್ಲು ಭಗವತಿಗೆ ಕಲಾಸೌರಭದ ಸ್ವರ ಸಂಗೀತಾಭಿಷೇಕಂ

Mumbai News Desk

ಮಧೂರು ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ಕ್ಷೇತ್ರ, ಕಾಸರಗೋಡು, ಮುಂಬೈ ಘಟಕ ಡಿ 21.ಬ್ರಹ್ಮಕಲಶೋತ್ಸವದ ವಿಶೇಷ ಸಭೆ.

Mumbai News Desk

ನವೆಂಬರ್ 28 ರಿಂದ ಬೊಯಿಸರ್ ನಲ್ಲಿ ತುಂಗಾ ಪ್ರೀಮಿಯರ್ ಲೀಗ್ ಅಖಿಲ ಭಾರತೀಯ ವೈದ್ಯರ ಕ್ರಿಕೆಟ್ ಟೂರ್ನಮೆಂಟ್ ಆರಂಭ

Mumbai News Desk