30.9 C
Mumbai
June 16, 2026
Mumbai News Kannada
ಪ್ರಕಟಣೆ

ಮೇ. 10 : ವಿದ್ಯಾವಿಹಾ‌ರ್ ಪಶ್ಚಿಮದ ಗಾಂವ್‌ದೇವಿಯ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿಶ್ರೀ ರಾಮ ಕಥಾ ಹೃದಯಂ ಸರಣಿ ತಾಳಮದ್ದಳೆ, ಸಮ್ಮಾನ





ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗ ಮುಂಬಯಿ ವತಿಯಿಂದ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಹಕಾರದೊಂದಿಗೆ ಪ್ರಭು ರಾಮಚಂದ್ರ ದೇವರ ಅವತಾರದ ಆರಂಭದಿಂದ ಶ್ರೀ ದೇವರ ನಿರ್ಯಾಣದವರೆಗಿನ ಸಂಪೂರ್ಣ ಶ್ರೀ ರಾಮ ಚರಿತ್ರೆ – ಶ್ರೀ ರಾಮ ಕಥಾ ಹೃದಯಂ ಪುಣ್ಯಪ್ರದ ಇಪ್ಪತ್ನಾಲ್ಕು ಕಂತುಗಳ ಸರಣಿ ತಾಳಮದ್ದಳೆ ಕಾರ್ಯಕ್ರಮದ ಏಳನೇಯ
ಪ್ರಸ್ತುತಿ ಸೀತಾಪಹಾರ-ಜಟಾಯು ಮೋಕ್ಷ ಮತ್ತು ಸಮ್ಮಾನ ಕಾರ್ಯಕ್ರಮವು ಮೇ 10ರಂದು ಅಪರಾಹ್ನ 2.15 ರಿಂದ ವಿದ್ಯಾವಿಹಾ‌ರ್ ಪಶ್ಚಿಮದ ಗಾಂವ್‌ದೇವಿಯ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ.

ಇದೇ ಸಂದರ್ಭದಲ್ಲಿ ಶ್ರೀ ಉಮಾ ಮಹೇಶ್ವರಿ ಭಜನಾ ಮಂಡಳಿ ಜರಿಮೆರಿ ಇವರಿಂದ ಶ್ರೀರಾಮ ಸಂಕೀರ್ತನೆ ನಡೆಯಲಿದೆ. ಪೂಜ್ಯ ಹರಿದಾಸ ಭಟ್ ಪೆರ್ಣಂಕಿಲ ಅವರ ಶುಭಾಶೀರ್ವಾದದೊಂದಿಗೆ, ಶ್ರೀ ಅಂಬಿಕಾ ಆದಿನಾಥೇಶ್ವರ ದೇವಸ್ಥಾನ ವಿದ್ಯಾವಿಹಾರ್ ಇದರ ಆಡಳಿತ ಮೊತ್ತೇಸರ ಹರಿದಾಸ ಗೋಪಾಲ್ ಶೆಟ್ಟಿ ಅವರ ಸಂಪೂರ್ಣ ಸಹಕಾರದೊಂದಿಗೆ ನಡೆಯಲಿರುವ ಸಮಾರಂಭದಲ್ಲಿ ಪ್ರಸಿದ್ಧ ಯಕ್ಷಗಾನ ಭಾಗವತ ನಾದಲೋಲ ಪೊಲ್ಯ ಲಕ್ಷ್ಮೀ
ನಾರಾಯಣ ಶೆಟ್ಟಿ ದಂಪತಿಯನ್ನು ಪರಮಪೂಜ್ಯ ವೇ। ಮೂ| ಪೆರ್ಣಂಕಿಲ  ಹರಿದಾಸ ಭಟ್ ಇವರ ಆಶಯದಂತೆ ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಲಾಗುವುದು. ಕಲಾಭಿಮಾನಿಗಳು, ಕಲಾಪೋಷಕರುಹೆಚ್ಚಿನಸಂಖ್ಯೆಯಲ್ಲಿಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಕಲಾವಿದರು, ಕಲಾ ಸಂಘಟಕರಾದ ವಾಸು ಮಾರ್ನಾಡ್ ಮತ್ತು ಸುರೇಶ್ ನಂದೊಳ್ಳಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.



Related posts

ಸೆ.14 ರಂದು ಕಲ್ವಾ ಸ್ಥಳೀಯ ಸಮಿತಿಯ ವತಿಯಿಂದ 171ನೇ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ ಸಮಾರಂಭ

Mumbai News Desk

ಶ್ರೀ ಸದ್ಗುರು ಶನೀಶ್ವರ ಸೇವಾ ಸಮಿತಿ ಕಾಂದಿವಲಿ ಪೂರ್ವ : ನ. 15ರಂದು, 51ನೇ ವಾರ್ಷಿಕ ಶ್ರೀ ಶನೇಶ್ವರ ಗ್ರಂಥ ಪಾರಾಯಣ ಮಹೋತ್ಸವ ಮತ್ತು ಭಂಡಾರ

Mumbai News Desk

ಶ್ರೀ ಮಂತ್ರ ದೇವಿ ಚಾರಿಟೇಬಲ್ ಟ್ರಸ್ಟ್, ಸಾಂತಾಕ್ರೂಸ್: ಡಿ  26 ರಂದು  ವಾರ್ಷಿಕ  ಮಹಾಪೂಜೆ.

Mumbai News Desk

ಜ. ‌26 ರಂದು” ‘ಮುಲುಂಡ್  ಪಶ್ಚಿಮದಲ್ಲಿ *ಲಗ್ನಾ  ಪಿಶ್ಶ್ಯೆ’  ,ಕೊಂಕಣಿ ನಾಟಕ

Mumbai News Desk

ಪನ್ವೇಲ್  ನಗರಸೇವಕ  ಸಂತೋಷ್ ಜಿ. ಶೆಟ್ಟಿಯವರ ಮುಂದಾಳುತ್ವದಲ್ಲಿ, ಎ. 7: ಥಾಣೆ ಯಲ್ಲಿ  ತುಳು – ಕನ್ನಡಿಗರ ಮಹಾ ಸಮಾವೇಶ

Mumbai News Desk

ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್‌ ಮುಂಬೈ : ಜ. 4ರಂದು, 80ನೇ ವಾರ್ಷಿಕೋತ್ಸವ ಸಂಭ್ರಮ

Mumbai News Desk