
ಧಾರ್ಮಿಕ ಶ್ರದ್ಧೆ, ಭಕ್ತಿಭಾವ ಹಾಗೂ ಸಾಂಸ್ಕೃತಿಕ ಸಂಭ್ರಮದ ವಾತಾವರಣದಲ್ಲಿ ಮೊಗವೀರ ವ್ಯವಸ್ಥಾಪಕ ಮಂಡಳಿಯ ನಾಯ್ಗಾಂವ್–ವಿರಾರ್ ಶಾಖೆಯ ವತಿಯಿಂದ ನವೆಂಬರ್ 11, 2026ರಂದು ಶಾಖಾ ಕಚೇರಿ, ವಸಾಯಿ ಪಶ್ಚಿಮದ, ಅಂಬಿಕಾ ನಿವಾಸ್ ಕೋ.ಆಪರೇಟಿವ್ ಹೌಸಿಂಗ್ ಸೊಸೈಟಿಯ, ಮೊದಲ ಮಹಡಿಯ ಫ್ಲಾಟ್ ನಂ.101/A ಇಲ್ಲಿ ಪೂಜೆಯನ್ನು ಅತ್ಯಂತ ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸಲಾಯಿತು. ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿದ ಲಕ್ಷ್ಮೀ ಪೂಜೆಯು ಶಾಖೆಯ ಸದಸ್ಯರು ಹಾಗೂ ಭಕ್ತರಲ್ಲಿ ಆಧ್ಯಾತ್ಮಿಕ ಸಂಭ್ರಮವನ್ನು ಮೂಡಿಸಿತು. ಪೂಜಾ ಕಾರ್ಯಕ್ರಮದ ಬಳಿಕ ಭಕ್ತಿಗೀತೆಗಳು ಮತ್ತು ಭಜನೆಗಳ ಮೂಲಕ ಭಗವಂತನ ನಾಮಸ್ಮರಣೆಯಲ್ಲಿ ಎಲ್ಲರೂ ಪಾಲ್ಗೊಂಡರು. ಭಜನಾ ಕಾರ್ಯಕ್ರಮವು ಇಡೀ ಪರಿಸರದಲ್ಲಿ ಭಕ್ತಿರಸದ ಸಿಂಚನಗೈದು, ಮನಸ್ಸಿಗೆ ಶಾಂತಿ ಮತ್ತು ಸಂತೃಪ್ತಿಯನ್ನು ನೀಡಿತು.

ಈ ಧಾರ್ಮಿಕ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ,
ನವೆಂಬರ್ 1, 2026ರಂದು ಅಂಧೇರಿ ಪಶ್ಚಿಮದ ಎಂವಿಎಂ ಸ್ಕೂಲ್ ಕಾಂಪ್ಲೆಕ್ಸ್ನಲ್ಲಿ ಆಯೋಜಿಸಲಾಗಿದ್ದ ‘ಮೃಗನಯನಿ ಸೀಸನ್ 2’ ಕಾರ್ಯಕ್ರಮದ ನೃತ್ಯ ಸ್ಪರ್ಧೆಯಲ್ಲಿ ನಾಯ್ಗಾಂವ್–ವಿರಾರ್ ಶಾಖೆಯನ್ನು ಪ್ರತಿನಿಧಿಸಿ ಭಾಗವಹಿಸಿದ್ದ ಬಾಲಕಿಯರುಗಳಾದ
ಧನಶ್ರೀ ನಾಯ್ಕ್, ಶ್ರಾವ್ಯ ಸುವರ್ಣ, ಮಾನಸ ನಾಯ್ಕ್,
ವೃದ್ಧಿ, ತನ್ವಿ, ಧನ್ಯಶ್ರೀ, ತನ್ವೀ ಕರ್ಕೇರ, ಸಮೀಕ್ಷಾ ಅವರನ್ನು ಅಭಿನಂದಿಸಲಾಯಿತು.
ಅವರು ನೃತ್ಯಪ್ರತಿಭೆ, ಕಲಾಸಕ್ತಿ ಮತ್ತು ಆತ್ಮವಿಶ್ವಾಸದ ಮೂಲಕ ಶಾಖೆಗೆ ಹೆಮ್ಮೆ ತಂದಿದ್ದರು. ಪುಟ್ಟ ವಯಸ್ಸಿನಲ್ಲಿಯೇ ವೇದಿಕೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಈ ಬಾಲಕಿಯರ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಗೌರವ ಸಮರ್ಪಿಸಲಾಯಿತು. ಮಕ್ಕಳ ಪ್ರತಿಭೆಯ ಹಿಂದೆ ಪೋಷಕರ ಪ್ರೋತ್ಸಾಹ, ಸಹಕಾರ ಮತ್ತು ನಿರಂತರ ಬೆಂಬಲವೂ ಮಹತ್ವದ ಪಾತ್ರ ವಹಿಸಿರುವುದರಿಂದ ಅವರನ್ನೂ ಗೌರವಿಸಿದ್ದು ಕಾರ್ಯಕ್ರಮದ ವಿಶೇಷತೆಯಾಗಿತ್ತು.

ಸಂಸ್ಥೆಯ ಕಾರ್ಯಧ್ಯಕ್ಷ ಪಿ.ವಿ. ಕಾಂಚನ್, ಉಪ ಕಾರ್ಯಧ್ಯಕ್ಷ ರೋಷನ್ ಸುವರ್ಣರ, ಕಾರ್ಯದರ್ಶಿ ಶೇಖರ್ ಕರ್ಕೇರ , ಜತೆ ಕಾರ್ಯದರ್ಶಿ ರಾಜೇಶ್ ಕೋಟ್ಯಾನ್, ಮೋಹನ್ ಪುತ್ರನ್ ಹಾಗೂ ಖಜಾಂಚಿ ವಿಶ್ವನಾಥ್ ಬಂಗೇರ , ಸದಸ್ಯರುಗಳಾದ ಕಿರಣ್ ಮೆಂಡನ್,ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮೋಹಿನಿ ಮಲ್ಪೆ, ಉಪ ಕಾರ್ಯಾಧ್ಯಕ್ಷೆ ಯಶೋಧ ಬಂಗೇರ, ಜತೆ ಕೋಶಾಧಿಕಾರಿ ಮಾಲತಿ ಮೊಗವೀರ, ಕಾರ್ಯದರ್ಶಿ ಯಶವಂತಿ ಕುಂದರ್, ಪ್ರೇಮಾ ನಾಯಕ್, ಪಲ್ಲವಿ ಪುತ್ರನ್, ಪ್ರಮೋದಿನಿ ಸಾಲ್ಯಾನ್, ಮಾಲತಿ ನಿಗಂಧಿ ಹಾಗೂ ನಾರ್ಸು ಕರ್ಕೇರ ಉಪಸ್ಥಿತರಿದ್ದರು.
ಒಟ್ಟಿನಲ್ಲಿ, ಲಕ್ಷ್ಮೀ ಪೂಜೆಯ ಪಾವಿತ್ರ್ಯ, ಭಜನೆಯ ಭಕ್ತಿರಸ, ಮಕ್ಕಳ ಪ್ರತಿಭೆಗೆ ದೊರೆತ ಗೌರವ ಹಾಗೂ ಪೋಷಕರಿಗೆ ಸಲ್ಲಿಸಿದ ಅಭಿನಂದನೆಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು. ಧಾರ್ಮಿಕ ಆಚರಣೆಗಳ ಮೂಲಕ ಆಧ್ಯಾತ್ಮಿಕ ಮೌಲ್ಯಗಳನ್ನು ಬೆಳೆಸುವುದರೊಂದಿಗೆ, ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಕಲೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ಉಳಿಸಿ ಬೆಳೆಸುವ ಎಂವಿಎಂ ನಾಯ್ಗಾಂವ್–ವಿರಾರ್ ಶಾಖೆಯ ಈ ಪ್ರಯತ್ನವು ಶ್ಲಾಘನೀಯವಾಗಿತ್ತು. ಭಕ್ತಿ, ಸಂಸ್ಕಾರ, ಸಾಂಸ್ಕೃತಿಕ ಅಭಿಮಾನ ಮತ್ತು ಪ್ರತಿಭಾ ಪ್ರೋತ್ಸಾಹದ ಸುಂದರ ಸಮ್ಮಿಲನವಾಗಿ ಈ ಕಾರ್ಯಕ್ರಮ ಸ್ಮರಣೀಯವಾಗಿ ಮೂಡಿಬಂದಿತು.
.
.
.
.
.








































































