
ಮೂಡಬಿದ್ರೆ ಜ 2 : ಕೆಲ್ಲಪುತ್ತಿಗೆ ಶ್ರೀ ಧರ್ಮಶಾಸ್ತ ಭಕ್ತವೃಂದ ದ 21ನೇ ವರ್ಷದ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಹಾಗೂ ಯಕ್ಷಗಾನ ಪ್ರದರ್ಶನ, ಗುರುವಂದನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜ 5 ನೇ ಶುಕ್ರವಾರ ದಂದು ಭಕ್ತವೃಂದದ ಸಂಸ್ಥಾಪಕ ಸಂಜೀವ ಗುರುಸ್ವಾಮಿಯವರ ನೇತೃತ್ವದಲ್ಲಿ. ಮಲಾಡ್ ಶ್ರೀ ಮಹಮ್ಮಾಯಿ ದೇವಸ್ಥಾನದ ಶಿಬಿರದ ಮಾರ್ನಾಡು ಉಮೇಶ್ ಅಂಚನ್ ಗುರುಸ್ವಾಮಿ ಉಪಸ್ಥಿತಿಯಲ್ಲಿ ನಡೆಯಲಿದೆ ಅಂದು ಬೆಳಿಗ್ಗೆಬೆಳಿಗ್ಗೆ 4.15ಕ್ಕೆ ಗಣಹೋಮ.ಬೆಳಿಗ್ಗೆ 6.00 ಗಂಟೆಯಿಂದ ವೃತಧಾರಿಗಳಿಗೆ ಅಯ್ಯಪ್ಪ ಸ್ವಾಮಿಯ ಇರುಮುಡಿ ಕಟ್ಟುವುದು.
ಬೆಳಿಗ್ಗೆ 10.00 ಗಂಟೆಯಿಂದ ಪ್ರಶಾಂತ್ ಸಾರಥ್ಯದ ಕಟೀಲೇಶ್ವರೀ ಮೆಲೋಡಿಸ್ ತಂಡದಿಂದ ಭಕ್ತಿಗೀತೆಗಳು
ಮಧ್ಯಾಹ್ನ ಗಂಟೆ 12-00ಕ್ಕೆ ಮಹಾಪೂಜೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ
ಸಂಜೆ ಗಂಟೆ 6.00 ರಿಂದ ಭಜನಾ ಕಾರ್ಯಕ್ರಮ
ರಾತ್ರಿ 8.30 ರಿಂದ ಸಭಾ ಕಾರ್ಯಕ್ರಮ ಅದೇ ದಿನ ರಾತ್ರಿ 9.00 ಗಂಟೆಗೆಕಳವಾರು ಶ್ರೀ ಬೆಂಕಿನಾಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಇವರು
ಸತ್ಯದ ಸ್ವಾಮಿ ಕೊರಗಜ್ಜ ಪುಣ್ಯ ಪಥಾಭಾಗವನ್ನು ನಡೆಯಲಿದೆ.
ಆ ಪ್ರಯುಕ್ತ ಭಕ್ತಾದಿಗಳು ಸಕುಟುಂಟಕರಾಗಿ ಆಗಮಿಸಿ ಶ್ರೀ ದೇವರ ಪ್ರಸಾದವನ್ನು ಸ್ವೀಕರಿಸಿ, ಯಕ್ಷಗಾನ ಬಯಲಾಟವನ್ನು ಚಂದಗಾಣಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕು ಸಂಜೀವ ಗುರುಸ್ವಾಮಿ. ಪರಿವಾರದವರು ಮತ್ತು ಸನತ್ ಪೂಜಾರಿ ಸ್ವಾಮಿ ಮುಂಬೈ.ಹಾಗೂ ಶ್ರೀ ಧರ್ಮಶಾಸ್ತ ಭಕ್ತವೃಂದ ಸರ್ವ ಸದಸ್ಯರು ವಿನಂತಿಸಿಕೊಂಡಿದ್ದಾರೆ.