
ಚಿತ್ರ, ವರದಿ : ಜಯ ಪೂಜಾರಿ
ದಕ್ಷಿಣ ಕನ್ನಡದಲ್ಲಿ ತುಳುವರ ಬಿಲ್ಲವ ಸಮಾಜದಲ್ಲಿ ಕೆಲವು ಬರಿ / ಬಲಿ ಗಳೆಂಬ ಅಂದರೆ ಸುವರ್ಣ ಅಂಚನ್ ಸಾಲಿಯಾನ್ ಅಮೀನ್ ಕೋಟಿಯನ್ ಹೀಗೆ ಹಲವಾರು ಬಲಿ / ಬರಿ ಗಳೆಂಬ ಕೇಳಲು ಸಿಗುತ್ತದೆ .ಇದು ಹಲವಾರು ಜಾತಿ ಸಮೂದಾಯದಲ್ಲಿ ತುಳುನಾಡಿನಲ್ಲಿದೆ . ಅದರಲ್ಲಿ ಉಡುಪಿ ಜಿಲ್ಲೆಯ ಕಾಪು ಪರಿಸರದ ಊರಾದ ಮೂಳೂರು ಜಾರಿಗೆದಡಿ ಬಿಲ್ಲವರ ಕೋಟಿಯನ್ ಮೂಲಕ್ಸೆತ್ರವಾದ ಆಧಿಕ್ಷೇತ್ರ ಸೇವಾ ಟ್ರಸ್ಟ್ ಇವರ ಕಾಲಾವಧಿ ಪ್ರತಿವರ್ಷದಂತೆ, ಶ್ರೀ ನಾಗಬ್ರಹ್ಮ್ಮ ಪರಿವಾರ ದೇವರ ಸಾನಿಧ್ಯದಲ್ಲಿ ಈ ವರ್ಷ ತಾರೀಕು 27 1 2024 ಶನಿವಾರ ಬೆಳಿಗ್ಗೆಯಿಂದ ಸ್ಥಳೀಯ ಅರ್ಚಕರಾದ ಶ್ರೀ ಕುಶ ಉಪಾಧ್ಯಾಯರ ಪೌರೋಹಿತ್ಯದಲ್ಲಿ ನವಕ ಕಲಾಭಿಷೇಕ, ಸಾಮೂಹಿಕ ಆಶ್ಲೇಷ ಬಲಿ , ತನು- ತಂಬಿಲ ಮಹಾಪೂಜೆ, ನಾಗದರ್ಶನ ಸೇವೆ ,ಮತ್ತು ಸಾಮೂಹಿಕ ಅನ್ನಸಂತರ್ಪಣೆ ಜರಗಿತು .

ಆ ಪ್ರಯುಕ್ತ ಸಮಸ್ತ ಕೋಟಿಯನ್ ಕುಟುಂಬಸ್ಥರು ಶ್ರೀ ಸಾನಿಧ್ಯಕ್ಕೆ ಸಲ್ಲತಕ್ಕ ಡಬ್ಬ ಕಾಣಿಕೆ ತೆಂಗಿನ ಕಾಯಿ , ಹಾಲು , ಸಿಯಾಳ , ಹೂ ಹಿಂಗಾರದೊಂದಿಗೆ ತಮ್ಮ ಬಂದು – ಮಿತ್ರರೊಡನೆ ಸಕಾಲದಲ್ಲಿ ಆಗಮಿಸಿ ತನು – ಮನ – ಧನದಿಂದ ಸಹಕರಿಸಿ ಸಿರಿಮುಡಿ ಗಂಧ – ಪ್ರಸಾದವನ್ನು ಸ್ವೀಕರಿಸಿ ಶ್ರೀ ನಾಗ ಬ್ರಹ್ಮ್ಮ ಪರಿವಾರ ದೈವ ದೇವರ ಪರಮಾನುಗ್ರಹಕ್ಕೆ ಪಾತ್ರರಾದರು . ಈ ಕಾರ್ಯಕ್ರಮದಲ್ಲಿ ಸರಿ ಸುಮಾರು 1 500 ಸಾವಿರ ಜನರು ಮಹಿಳೆಯರು ಹಾಗೂ ಗಂಡಸರು ಮಕ್ಕಳು ಕೂಡಿ ಕೋಟಿಯನ್ ಕುಟುಂಬಸ್ಥರು ತನು ತಂಬಿಲದ ಪ್ರಸಾದ ಸ್ವೀಕರಿಸಿ ಪಾವನರಾದರು .