24.7 C
Karnataka
April 3, 2025
ಮುಂಬಯಿ

ಜೇಷ್ಠ ನಾಗರಿಕರಿಗಾಗಿ ಆಯೋಜಿಸಿದ ವಿಶಿಷ್ಟ ಕಾರ್ಯಕ್ರಮ ” ಪಿಂದಣಿಗೆದ ತುಪ್ಪೆ”



ಕಳೆದ ನವಂಬರ್ ತಿಂಗಳಲ್ಲಿ ಬಂಟರ ಸಂಘ ಮುಂಬಯಿ, ಜೋಗೇಶ್ವರಿ – ದಹಿಸರ್ ಕಾರ್ಯಕಾರಿ ಸಮಿತಿಯ ಮಹಿಳ ವಿಭಾಗ ವಯಸ್ಕರಿಗಾಗಿ ವಿಶೇಷವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಕೆಲವು ವಯಸ್ಕರು ತಮ್ಮ ಅನಾರೋಗ್ಯ , ದೇಹಸ್ಥಿತಿ ಅಥವಾ ಮನಸ್ಥಿತಿಗಳ ಕಾರಣದಿಂದ, ತಾನು ಬಂದರೆ ಇತರರಿಗೆ ತೊಂದರೆ ಆಗುತ್ತೆ ಎಂಬ ಕಾರಣದಿಂದ ಎಷ್ಟೋ ವರ್ಷಗಳಿಂದ ಸಮಾಜದಿಂದ ದೂರ ಉಳಿದಿದ್ದಾರೆ. ಆ ಹಿರಿಯ ನಾಗರೀಕರನ್ನು ಒಗ್ಗೂಡಿಸಿ, ಅವರಲ್ಲಿ ನವಚೇತನ ಹುಮ್ಮಸು ಮೂಡಿಸುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಕಾಂದಿವಲಿ ಪಶ್ಚಿಮ ದ-ಕಮಲ ವಿಹಾರ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮವು , ಎರ್ಮಾಳುಶ್ರೀ ಹರೀಶ್ ಶೆಟ್ಟಿ ಯವರ ಸಂಪೂರ್ಣ ಸಹಕಾರದಿಂದ ಅರ್ಥ ಪೂರ್ಣವಾಗಿ.
ಕಾರ್ಯಕ್ರಮದ ಮೊದಲು ಕಾರ್ಯಾಧ್ಯಕ್ಷರಾದ ನಿಟ್ಟೆ ಶ್ರೀ ಮುದ್ದಣ್ಣ ಶೆಟ್ಟಿ. ಯವರು ಸರ್ವರನ್ನು ಸ್ವಾಗತಿಸಿದರು. ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಶೈಲಜಾ ಅಮರ್ ನಾಥ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಹಿರಿಯರಿಗಾಗಿ ತನ್ನಲ್ಲಿರುವ ಕಾಳಜಿಯನ್ನು ತೋಡಿಕೊಂಡರು. ಅವರಲ್ಲಿ ವಿಧಿವಶರಾಗಿರುವ ನನ್ನ ತಂದೆ ತಾಯಿಯನ್ನು ಕಾಣುತ್ತಿದ್ದೇನೆ ಎಂದು ಭಾವುಕರಾದರು. ವರುಷ 75 ಕಳೆದ ನಂತರ ವ್ಯಕ್ತಿ ಪುನಃ ಮಕ್ಕಳಂತೆ ವರ್ತಿಸುತ್ತಾರೆ, ಅವರನ್ನು ಸಹನೆಯಿಂದ ,ಮಮತೆಯಿಂದ,ಸಂಯಮದಿಂದ ನಡೆಸಿದರೆ,ಅವರ ಬಾಳು ಬಂಗಾರವಾಗುತ್ತದೆ .ಅವರ ಆಶೀರ್ವಾದವೂ ನಮ್ಮ ಮೇಲಿರುತ್ತದೆ.ಪ್ರತಿ ಒಬ್ಬರು ತನ್ನ ಅಸಹಾಯಕ ವೃದ್ದ ತಂದೆ ತಾಯಿಯನ್ನು ನೋಡಿಕೊಳ್ಳಲೇ ಬೇಕು, ಅದೇನು ಉಪಕಾರ ಅಲ್ಲ ,ಕರ್ತವ್ಯ ಎಂದರು.


ಕಾರ್ಯಕ್ರಮ ದೀಪೋಜ್ವಲನೆಯಿಂದ ಆರಂಭವಾಯಿತು. ಹಿರಿಯ ಗಾಯಕಿ ಜಯಂತಿ ಅಕ್ಕ ನವರು ದೇವರನ್ನು ಸ್ತುತಿಸಿದರು.ಹಿರಿಯರ ಮನರಂಜನೆಗಾಗಿ ಕೆಲವೊಂದು ಆಟಗಳನ್ನು ಶ್ರೀಮತಿ ಸರಿತಾ ಮಹೇಶ್ ಶೆಟ್ಟಿ, ಶ್ರೀಮತಿ ಸಹನಾ ದಿವಾಕರ್ ಶೆಟ್ಟಿ, ಶ್ರೀಮತಿ ಶುಭಾಂಗಿ ಶೇಖರ್ ಶೆಟ್ಟಿ ಹಾಗೂ ಶ್ರೀ ಅವಿನಾಶ್ ಶೆಟ್ಟಿ ಯವರು ಆಡಿಸಿದರು. ವಯಸ್ಕರ ಶ್ರವಣ, ನಾಸಿಕ ಇಂದ್ರಿಯಗಳನ್ನು ಚುರುಕಾಗಿಸುವ ಆಟಗಳು ಹಾಗೂ ಸಂವಹನೆಯ ಕುರಿತಾದ ಆಟಗಳನ್ನು ಆಡಿಸಲಾಯಿತು. ಜೊತೆಕಾರ್ಯದರ್ಶಿಯೂ ಕಾರ್ಯಕ್ರಮದ ನಿರೂಪಕರೂ ಆದ ಶ್ರೀ ರಘುನಾಥ್ ಶೆಟ್ಟಿ ಯವರು ಕೆಲವು ಎದುರುಕಥೆ,ಒಗಟುಗಳನ್ನು ಕೇಳಿ ಮನ ರಂಜಿಸಿದರು.ಹಿರಿಯ ನಾಗರಿಕರಿಗೆ ಎಂದೇ ಮೀಸಲಾದ ಈ ಕಾರ್ಯಕ್ರಮದಲ್ಲಿ ಶ್ರೀಮತಿ ಹರಿಣಾಕ್ಷಿ ಶೆಟ್ಟಿ ಶ್ರೀಮತಿ ಸರೋಜಾ ಶೆಟ್ಟಿ ಯವರು ಸುಶ್ರಾವ್ಯವಾದ ಹಾಡುಗಳನ್ನು ಹಾಡಿದರು.
ವಿಶೇಷವಾಗಿ 90 ರಿಂದ ಮೇಲ್ಪಟ್ಟ ವಯಸ್ಸಿನ ವ್ಯಕ್ತಿಗಳಾದ ಶ್ರೀ ಕೃಷ್ಣ ಶೆಟ್ಟಿ ಮತ್ತು ಶ್ರೀ ಜಗನ್ನಾಥ್ ಭಂಡಾರಿ ಯವರನ್ನು ಸಂದರ್ಶಿಸಲಾಯ್ತು. ಸಂಘದ ಕಾರ್ಯದರ್ಶಿಯೂ ಆಗಿದ್ದ ಅಶೋಕ್ ವಿ ಶೆಟ್ಟಿಯವರ ಜೊತೆಗಿನ ಸಂದರ್ಶನ ಆಗಿನ ಕಾಲದ ಒಂದೊಂದು ವಿಷಯ ವಿಶೇಷಗಳಿಗೆ ಕನ್ನಡಿ ಹಿಡಿದಂತಿತ್ತು. ಸಾಂದರ್ಭಿಕವಾಗಿ,ಸಹಜ,ಸಂಕ್ಷಿಪ್ತವಾಗಿ, ಹಾಸ್ಯಮಯವೂ ಆಗಿ ಈವರೆಗೆ ಎಲ್ಲೂ ಕಾಣದ ಸಂದರ್ಶನವಾಗಿ ಜನಮನದಲ್ಲಿ ಉಳಿಯುವಂತಿತ್ತು.ಮುಂಬಯಿ ಮಹಾನಗರಿಯಲ್ಲಿ ಹಿರಿಯ ನಾಗರಿಕರಿಗಾಗಿ ಇಂತಹ ಕಾರ್ಯಕ್ರಮ ಎಲ್ಲಾಕಡೆ ಎಲ್ಲರೂ ಮಾಡಬೇಕೆಂದು ಎಲ್ಲರ ಮನದಲ್ಲಿ ಮೂಡಿದ್ದು ಸಹಜ.
ವಯಸ್ಸು 75ರ ಮೇಲ್ಪಟ್ಟ 6 ಜೊಡಿ ಹಿರಿಯ ನಾಗರಿಕರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೆ ಡಾ।ಹರೀಶ್ ಶೆಟ್ಟಿಯವರ ಸಂವಾದಾತ್ಮಕ ವಿಚಾರಗೋಷ್ಟಿ ಓಲ್ಡ್ ಗೋಲ್ಡ್ ಬೋಲ್ಡ್ ವಿಶೇಷ ಮೆರುಗನ್ನು ನೀಡಿ ಎಲ್ಲರನ್ನು ತನ್ನ ಮಾತಿನ ಮೋಡಿಯಲ್ಲಿ ತೇರಿ ಬಿಟ್ಟರು .ಸಭಿಕರು ಪ್ರತಿ ಒಬ್ಬರನ್ನೂ ತನ್ನ ಮಾತುಗಳ ಮದ್ಯೆ ತೊಡಗಿಸಿಕೊಂಡು ಅಪೂರ್ವವಾದ ಕ್ಷಣಗಳನ್ನು ಕಳೆದ ಆ ಎರಡು ಗಂಟೆಗಳ ಅವಧಿಯನ್ನು ಯಾರೂ ಮರೆಯುವಂತಿರಲಿಲ್ಲ .
ಮಕ್ಕಳ ಮದುವೆ ಇತ್ಯಾದಿ ಮುಗಿದ ನಂತರ ನಮ್ಮ ಜವಾಬ್ದಾರಿ ಮುಗಿಯಿತು, ಅವರವರ ಜೀವನ ಅವರವರು ನೋಡಿಕೊಳ್ಳುತ್ತಾರೆ. ನೀವು ನಿಮ್ಮ ಜೀವನಕ್ಕೆ ಆದ್ಯತೆ ಕೊಡಬೇಕು , ಹೇಗೆ ಕೊಡಬೇಕು ಎನ್ನುವುದನ್ನು, ಉದಾಹರಣೆಗಳ ಮೂಲಕ, ಸಭಿಕರನ್ನು ಪ್ರಶ್ನಿಸುವ ಮೂಲಕ ವಿಸ್ತಾರವಾಗಿ ವಿಚಾರ ಮಂಡನೆ ಮಾಡಿದರು. ಈ ಕಾರ್ಯಕ್ರಮ ಹಿರಿಯ ನಾಗರಿಕರಿಗೆ ಸ್ಫೂರ್ತಿ ತುಂಬಿದ್ದಲ್ಲದೆ, ನವ ಚೇತನ ತುಂಬುವಲ್ಲಿಯೂ ಯಶಸ್ವಿಯಾಯಿತು ಎಂದರೆ ತಪ್ಪಾಗಲಾರದು. ಕಾರ್ಯಕ್ರಮದ ಕೊನೆಯ ಘಟ್ಟದಲ್ಲಿ ಬಂಟ ಸಂಘ ಮುಂಬೈ ಯ ಜೊತೆ ಕೋಶಾಧಿಕಾರಿಯಾದ ಶ್ರೀ ಮುಂಡಪ್ಪ ಎಸ್ ಪಯ್ಯಡೆ ಯವರು ಮಾತನಾಡುತ್ತ ಸಂಸ್ಕಾರ ಹೇಗೆ ನಮಗೆ ಹಿರಿಯರಿಂದ ಬರುತ್ತದೆ,ಅದನ್ನು ಹೇಗೆ ಮುಂದುವರಿಸುತ್ತ ಹೋಗಬೇಕು. ತಂದೆ ತಾಯಿ ದೇವರಿಗೆ ಸಮಾನ, ಎಂದು ಹಿತನುಡಿಗೈದರು.
ಕಾರ್ಯಕ್ರಮದಲ್ಲಿ ಇನ್ನೊಂದು ವಿಶೇಷವೆಂದರೆ ಬಂಟ ಸಂಘ ಮುಂಬೈ ಯುವ ವಿಭಾಗ ಆಯೋಜಿಸಿದ ಆಕಾಂಕ್ಷ ಮಿಸ್ಟರ್ ಅಂಡ್ ಮಿಸ್ಸೆಸ್ ಬಂಟ ಆಗಿ ವಿಜೇತರಾದ ಧ್ರುವ್ ಶೆಟ್ಟಿ ಮತ್ತು ವಂಶ ಶೆಟ್ಟಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು ಪ್ರೀತಿ ಭೋಜನದೊಂದಿಗೆ ಮನಸಾರೆ ನಕ್ಕು , ಮನಸು ಹಗುರವಾಗಿಸಿ ಹೊಸ ಯೋಚನೆಗೆ ಮುಕ್ತಾಯದ ಪರದೆ ಎಳೆಯಲಾಯ್ತು . ಮಹಿಳಾ ವಿಭಾಗದ ಈ ಹೊಸ ಯೋಜನೆ ಯೋಚನೆ ಮುಂಬಯಿ ತುಳು ಕನ್ನಡಿಗರ ಮನಸ್ಸು ಎಲ್ಲ ಹಿರಿಯ ನಾಗರಿಕರಿಗಾಗಿ ಹೀಗೆ ಸ್ಪಂದಿಸಲಿ ಅನ್ನುವಂತ ಸಾರ ಎಲ್ಲರ ಮುಖದಲ್ಲು ಎದ್ದು ಕಾಣುತಿತ್ತು.

ಪಿಂದಣಿಗೆದ ತುಪ್ಪೆ ಹಿರಿಯರ ಕಾರ್ಯಕ್ರಮದಲ್ಲಿ ನನ್ನದು ಒಂದು ಅಳಿಲ ಸೇವೆ ಅದುವೇ ಮಾತಿನ ಸೇತುವೆ ’ಓಲ್ಡ್ ಗೋಲ್ಡ್ ಬೋಲ್ಡ್’ . ಒಬ್ಬರನ್ನೊಬ್ಬರು ಅರಿತು ನಕ್ಕು ನಲಿದು ಮಾತಿನ ಸೇತುವೆ ಕಟ್ಟೋದೇ ನನ್ನ ನಮ್ಮ ಕೆಲಸ . ಮಕ್ಕಳ ಮದುವೆ ಇತ್ಯಾದಿ ಮುಗಿದ ನಂತರ ನಮ್ಮ ಜವಾಬ್ದಾರಿ ಮುಗಿಯಿತು, ಅವರವರ ಜೀವನ ಅವರವರು ನೋಡಿಕೊಳ್ಳುತ್ತಾರೆ. ಆದರೆ ನೀವು ನಿಮ್ಮ ಜೀವನಕ್ಕೆ ಆದ್ಯತೆ ಕೊಡಬೇಕು ಈ ಕಾರ್ಯಕ್ರಮ ಹಿರಿಯ ನಾಗರಿಕರಿಗೆ ಸ್ಫೂರ್ತಿ ತುಂಬುತ್ತೆ , ನವ ಚೇತನ ತುಂಬುತ್ತೆ,ಜೀವನದ ಯಶಸ್ಸಿಗು ಮತ್ತು ಕಾರ್ಯಕ್ರಮದ ಯಶಸ್ವಿಗೂ ಅದೇ ಕಾರಣವಾಗುತ್ತೆ
ಪಿಂದಣಿಗೆದ ತುಪ್ಪೆ ಕಾರ್ಯಕ್ರಮದ ಅದ್ಯಕ್ಷರು-ಡಾ।ಹರೀಶ್ ಶೆಟ್ಟಿ

ಸಂಸ್ಕಾರ ನಮಗೆ ಹಿರಿಯರಿಂದಲೇ ದಕ್ಕಿದ್ದು ಅದನ್ನು ಜೋಪಾನವಾಗಿಡಬೇಕು ,ಅದುವೇ ನಮ್ಮ ಜೀವನದ ಅಡಿಪಾಯ, ಆಸ್ತಿ . ಅದನ್ನು ನಾವು ಮುಂದುವರಿಸುತ್ತ ಹೋಗಬೇಕು. ತಂದೆ ತಾಯಿ ದೇವರಿಗೆ ಸಮಾನ, ಅವರ ಆಶಿರ್ವಾದ ಜಗತ್ತಿನ ಎಲ್ಲಾ ಆಶಿರ್ವಾದಕ್ಕಿಂತ ಮಿಗಿಲಾಗಿದೆ

        ಜೊತೆ ಕೋಶಾಧಿಕಾರಿ ಮುಂಬಯಿ ಬಂಟರ ಸಂಘ -ಶ್ರೀ ಮುಂಡಪ್ಪ ಎಸ್ ಪಯ್ಯಡೆ

ಹಿರಿಯರ ಕಾಳಜಿ ವಿಹಿಸೋದು ನಮ್ಮ ಧರ್ಮ, ಕರ್ತವ್ಯ , ಹಿರಿಯರೆಲ್ಲರಲ್ಲಿ ವಿಧಿವಶರಾಗಿರುವ ನನ್ನ ತಂದೆ ತಾಯಿಯನ್ನು ಕಾಣುತ್ತಿದ್ದೇನೆ. 75 ವರುಷ ಪ್ರಾಯ ಕಳೆದ ನಂತರ ವ್ಯಕ್ತಿ ಪುನಃ ಮಕ್ಕಳಂತೆ ವರ್ತಿಸುತ್ತಾರೆ, ಅವರನ್ನು ಸಹನೆಯಿಂದ ,ಮಮತೆಯಿಂದ,ಸಂಯಮದಿಂದ ನಡೆಸಿದರೆ,ಅವರ ಬಾಳು ಬಂಗಾರವಾಗುತ್ತದೆ .ಅವರ ಆಶೀರ್ವಾದವೂ ನಮ್ಮ ಮೇಲಿರುತ್ತದೆ.ಪ್ರತಿ ಒಬ್ಬರು ತನ್ನ ಅಸಹಾಯಕ ವೃದ್ದ ತಂದೆ ತಾಯಿಯನ್ನು ನೋಡಿಕೊಳ್ಳಲೇ ಬೇಕು, ಅದೇನು ಉಪಕಾರ ಅಲ್ಲ ,ಕರ್ತವ್ಯ.

ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಸಮಿತಿಯ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಶೈಲಜಾ ಅಮರ್ ನಾಥ್ ಶೆಟ್ಟಿ

            

Related posts

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ. ರಿಷಿತಾ ಹರಿಶ್ಚಂದ್ರ ಕುಲಾಲ್ ಶೇಕಡಾ: 90% ಅಂಕ.

Mumbai News Desk

ಮುಂಬಯಿ ಕನ್ನಡ ಸಂಘದ ಆಶ್ರಯದಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ

Mumbai News Desk

ಕುಲಾಲ ಸಂಘ ಮುಂಬಯಿ, ಚರ್ಚ್ ಗೇಟ್ – ದಹಿಸರ್  ಸ್ಥಳೀಯ ಸಮಿತಿ, ವಾರ್ಷಿಕ ಸ್ನೇಹ ಮಿಲನ.

Mumbai News Desk

ಕಾಪು ಮೊಗವೀರ ಮಹಿಳಾ ಮಂಡಳಿ : ಹಳದಿ ಕುಂಕುಮ ಕಾರ್ಯಕ್ರಮ

Mumbai News Desk

2023/24 ಎಚ್ ಎಸ್ ಸಿ .ಪರೀಕ್ಷೆಯಲ್ಲಿ   ಸಾಧಿಕಾ ಅಮಿತ್ ಶೆಟ್ಟಿ ಶೇ.89.17%

Mumbai News Desk

ಗೋರೆಗಾವ್ ಶ್ರೀ ಶಾಂತ ದುರ್ಗಾ ದೇವಿ ದೇವಸ್ಥಾನ. ಬ್ರಹ್ಮಕಳಸೋತ್ಸವದ ಪ್ರಯುಕ್ತ ಮಂಡಲ ಭಜನೆ ಸಂಪನ್ನ.

Mumbai News Desk