July 23, 2026
Mumbai News Kannada
ಪ್ರಕಟಣೆ

ಫೆ. 11 ರಂದು ಜಗಜ್ಯೋತಿ ಕಲಾವೃಂದ (ರಿ.) ಮುಂಬಯಿ 37ನೇ ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭ.







ಜಗಜ್ಯೋತಿ ಕಲಾವೃಂದ (ರಿ.) ಮುಂಬಯಿ ಇದರ 37ನೇ ವಾರ್ಷಿಕೋತ್ಸವ ಮತ್ತು ಜಗಜ್ಯೋತಿ ಕಲಾವೃಂದದ ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿ ಸ್ಮಾರಕ
ಕಥಾ ಹಾಗೂ ಕಾವ್ಯ ಪ್ರಶಸ್ತಿ ಪ್ರಧಾನ ಸಮಾರಂಭ ರವಿವಾರ ದಿನಾಂಕ 11.02.2024 ಸಾಯಂಕಾಲ 4.30 ಗಂಟೆಗೆ
ಲೇವಾ ಭವನ, ಡಿ. ಎನ್. ಸಿ. ರೋಡ್, ದತ್ತ ನಗರ, ಡೊಂಬಿವಲಿ (ಪೂರ್ವ) ದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶ್ರೀ ದಿವಾಕರ ಟಿ. ಶೆಟ್ಟಿ ಇಂದ್ರಾಳಿ (ಕಾರ್ಯಾಧ್ಯಕ್ಷರು : ಕರ್ನಾಟಕ ಸಂಘ, ಡೊಂಬಿವಲಿ) ವಹಿಸಲಿರುವರು, ಅತಿಥಿಗಳಾಗಿ ಶ್ರೀ ಆನಂದ ಡಿ. ಶೆಟ್ಟಿ ಎಕ್ಕಾ‌ರು ( ಕಾರ್ಯಾಧ್ಯಕ್ಷರು-ಬಂಟ್ಸ್‌ ಸಂಘ ಮುಂಬಯಿ, ಡೊಂಬಿವಲಿ ಪ್ರಾದೇಶಿಕ ಸಮಿತಿ), ಶ್ರೀ ಸುಬ್ಬಯ್ಯ ಎ. ಶೆಟ್ಟಿ ( ಉಪ ಕಾರ್ಯಾಧ್ಯಕ್ಷರು -ಸಮಾಜ ಕಲ್ಯಾಣ ಸಮಿತಿ, ಬಂಟ್ಸ್ ಸಂಘ ಮುಂಬಯಿ), ಶ್ರೀ ಪ್ರಭಾಕರ್ ಆರ್. ಶೆಟ್ಟಿ ( ಉಪ ಕಾರ್ಯಾಧ್ಯಕ್ಷರು -ಬಂಟ್ಸ್ ಸಂಘ ಮುಂಬಯಿ, ಡೊಂಬಿವಲಿ ಪ್ರಾದೇಶಿಕ ಸಮಿತಿ), ಶ್ರೀ ಜಯಂತ್ ಎನ್. ಶೆಟ್ಟಿ ( ಅಧ್ಯಕ್ಷರು – ಕನ್ನಡ ಸಂಘ,ವರ್ತಕ್ ನಗರ, ಥಾಣೆ) ಶ್ರೀಮತಿ ಅಭಿಜ್ಞಾ ಪ್ರಕಾರ ಹೆಗ್ಡೆ(ಭರತ ನಾಟ್ಯ ಕಲಾವಿದೆ) ಉಪಸ್ಥಿತರಿರುವರು.

ಪ್ರಶಸ್ತಿ ವಿಜೇತರು :
ಕಥಾ ಪ್ರಶಸ್ತಿ – ಶ್ರೀಮತಿ ದಾಕ್ಷಾಯಣಿ ಯಡಹಳ್ಳಿ, ಡೊಂಬಿವಲಿ.
ಕಾವ್ಯ ಪ್ರಶಸ್ತಿ – ಶ್ರೀಮತಿ ಮಿಲನ ಕೆ. ಭರತ್, ಕೊಡಗು, ಕರ್ನಾಟಕ

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿವಿಧ ಸಂಘ ಸಂಸ್ಥೆಗಳ ಸದಸ್ಯರಿಂದ ನೃತ್ಯ ಕಾರ್ಯಕ್ರಮ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರಾದ ಪವಿ ಆರ್ಟ್ಸ್ ಇದರ ಸಂಚಾಲಕರಾದ ಗುರು ಶ್ರೀ ಪವಿತ್ರ ಭಟ್ ಮತ್ತು ಶ್ರೀಮತಿ ಅಪರ್ಣ ಶಾಸ್ತ್ರಿ ಭಟ್ ಅವರ ತಂಡದಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.

ಸಾಹಿತ್ಯಾಭಿಮಾನಿಗಳು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಅಧ್ಯಕ್ಷರಾದ ರಮೇಶ್‌ ಎ. ಶೆಟ್ಟಿ, ಗೌ.ಪ್ರ. ಕಾರ್ಯದರ್ಶಿ ಸಂತೋಷ ಪಿ. ಶೆಟ್ಟಿ, ಕೋಶಾಧಿಕಾರಿ ಚಂದ್ರ ಎನ್. ನಾಯ್ಕ್, ಸಂಘಟನಾ ಕಾರ್ಯದರ್ಶಿ ಬಾಬು ಕೆ. ಮೊಗವೀರ, ಸಲಹೆಗಾರರಾದ ಶ್ರೀ ಸುಕುಮಾರ ಎನ್. ಶೆಟ್ಟಿ, ಪ್ರಶಸ್ತಿ ಸಮಿತಿಯ ಸಲಹೆಗಾರರಾದ ಶ್ರೀ ಶೇಖರ ಆರ್. ಶೆಟ್ಟಿ, ಇನ್ನ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.



Related posts

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು : ಎ. 27ಕ್ಕೆ ವಿದ್ಯಾರ್ಥಿಗಳ ವಿಶ್ರಾಂತಿ ಕೊಠಡಿ ಲೋಕಾರ್ಪಣೆ

Mumbai News Desk

ಶ್ರೀ ಅಯ್ಯಪ್ಪ ಭಕ್ತ ಮಂಡಳಿ ಮೀರಾ ರೋಡ್ : ಡಿ. 22ರಂದು 28ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ

Mumbai News Desk

ಫೆ. 02 ರಂದು ಮಹಾವಿಷ್ಣು ಮಂದಿರ ಡೊಂಬಿವಲಿ, ಇದರ ವತಿಯಿಂದ ರಕ್ತದಾನ ಹಾಗೂ ಉಚಿತ ವೈದ್ಯಕೀಯ ಆರೋಗ್ಯ ತಪಾಸಣಾ ಶಿಬಿರ

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ.) – ಸೆ. 5ರಂದು ಮುಂಬಯಿಯಲ್ಲಿ ವೈಭವದ ಸಂಸ್ಥಾಪನಾ ದಿನಾಚರಣೆ – 25 ಸಂಘ ಸಂಸ್ಥೆಗಳಿಗೆ ಗೌರವ ಪುರಸ್ಕಾರ

Mumbai News Desk

ಜ. 24 ಮತ್ತು 25 ; ಗೋರೆಗಾಂವ್ (ಪೂರ್ವ)ದ ಸಹಕಾರವಾಡಿ ಶ್ರೀ ಸದ್ಗುರು ನಿತ್ಯಾನಂದ ಆಶ್ರಮದಲ್ಲಿ 61ನೇ ವಾರ್ಷಿಕ ಮಹೋತ್ಸವ ಹಾಗೂ ಗುರುಮೂರ್ತಿ ಅಭಿಷೇಕ

Mumbai News Desk

ಶ್ರೀ ಮೂಕಾಂಬಿಕಾ ಶಾಂತದುರ್ಗಾ ಸೇವಾ ಸಮಿತಿ ಭಾಯಂದರ್ ಪೂರ್ವ : ಎ. 12ರಂದು ವಾರ್ಷಿಕ ಶ್ರೀ ಮಹಾದೇವಿ ಮಹಾಪೂಜೆ

Mumbai News Desk