25 C
Karnataka
April 5, 2025
ಮುಂಬಯಿ

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಇದರ ಡೊಂಬಿವಲಿ ಸ್ಥಳೀಯ ಸಮಿತಿಯ ವತಿಯಿಂದಸಮಾಜದ ವಿದ್ಯಾರ್ಥಿಗಳಿಗಾಗಿ ಏರ್ಪಟ್ಟ ಚಿತ್ರಕಲಾ ಸ್ಪರ್ಧೆ :



ಮೊಗವೀರ ಮಹಾಜನ ಸೇವಾ ಸಂಘ ಡೊಂಬಿವಲಿ ಸ್ಥಳೀಯ ಸಮಿತಿಯ ಮೊಗವೀರ ವಿದ್ಯಾರ್ಥಿಗಳಿಗಾಗಿ ಫೆ 4 ರಂದು ಚಿತ್ರಕಲಾ ಸ್ಪರ್ಧೆ ಏರ್ಪಟ್ಟಿತು.

ಬೆಳಿಗ್ಗೆ 9 ಗಂಟೆಗೆ ಕುಲಮಾತೆ ಶ್ರೀ ಮಹಿಷಾಸುರ ಮರ್ದಿನಿ ದೇವಿಗೆ ಪೂಜೆ ಸಲ್ಲಿಸಿ, ಸಂಘದ ಗೌರವ ಅಧ್ಯಕ್ಷರಾದ ಭಾಸ್ಕರ್ N ಕಾಂಚನ್ ಹಾಗೂ ಅಧ್ಯಕ್ಷರಾದ ರಾಜು A ಮೊಗವೀರ ತಗ್ಗರ್ಸೆ ರವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸುಮಾರು 60 ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದರು.


ಚಿತ್ರಕಲಾ ಸ್ಪರ್ಧೆಯ ಮುಂದಾಳತ್ವವನ್ನು ಸಂಘದ ಮಹಿಳಾ ವಿಭಾಗದ ನಿಶಾ ಮೆಂಡನ್ ರವರು ವಹಿಸಿ ನಡೆಸಿಕೊಟ್ಟರು.
ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಕಿರು ಬಹುಮಾನ ಹಾಗೂ ಪ್ರಮಾಣ ಪತ್ರಿಕೆಯನ್ನು ವಿತರಿಸಲಾಯಿತು. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಸಹಕರಿಸಿದರು. ಚಿತ್ರಕಲಾ ಸ್ಪರ್ಧೆಯ ಫಲಿತಾಂಶವನ್ನು ಪಾಲಕರಿಗೆ ಮುಂಗಡವಾಗಿ ತಿಳಿಸಲಾಗುವುದು ಮತ್ತು ಬಹುಮಾನವನ್ನು ಮಾರ್ಚ್ 3, 2024 ಆದಿತ್ಯವಾರ ನಡೆಯಲಿರುವ ಕುಂದರಂಜನಿ 2024 ಕಾರ್ಯಕ್ರಮದಲ್ಲಿ ನೀಡಲಾಗುವುದು ಎಂದು ಸಭೆಗೆ ತಿಳಿಸಲಾಯಿತು.
ವೇದಿಕೆಯಲ್ಲಿ ಗೌರವ ಅಧ್ಯಕ್ಷರಾದ ಭಾಸ್ಕರ್ N ಕಾಂಚನ್, ಅಧ್ಯಕ್ಷರಾದ ರಾಜು A ಮೊಗವೀರ ತಗ್ಗರ್ಸೆ, ಉಪಾಧ್ಯಕ್ಷರಾದ ಬಾಬು ಕೆ ಮೊಗವೀರ, ಕಾರ್ಯದರ್ಶಿ ಸಂತೋಷ B ಪುತ್ರನ್ ಹಾಗೂ ಪ್ರೋಗ್ರಾಮ್ ಸಮಿತಿಯ ಅಧ್ಯಕ್ಷರಾದ ಭಾಸ್ಕರ್ ಶ್ರೀಯಾನ್ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ
ಮೊಗವೀರ ಮಹಾಜನ ಸೇವಾ ಸಂಘದ ಮುಖ್ಯ ಕಚೇರಿಯ ಸೇವಾ ದಳದ ಶೇಖರ್ ಮೊಗವೀರರನ್ನು ಪುಷ್ಪಗುಚ್ಚವನ್ನು ನೀಡಿ ಗೌರವಿಸಲಾಯಿತು.
ಹಾಗೇನೇ ಕಾರ್ಯಕ್ರಮದ ನಿರೂಪಣೆಯನ್ನು ಡೊಂಬಿವಲಿ ಪರಿಸರದ ಉತ್ತಮ ಸಂಘಟಕ ವಸಂತ್ ಸುವರ್ಣ ರವರು ಬಹಳ ಅಚ್ಚು ಕಟ್ಟಾಗಿ ಮಾಡಿದರು.
ದಿನೇಶ ಮೊಗವೀರ ಅವರು ವಿದ್ಯಾರ್ಥಿಗಳಿಗೆ ಹಾಗೂ ಅವರ ಪಾಲಕರಿಗೆ ಲಘು ಉಪಹಾರ ವ್ಯವಸ್ಥೆ ಮಾಡಿದರು. ಕೊನೆಗೆ ಕಾರ್ಯದರ್ಶಿ ಸಂತೋಷ ಪುತ್ರನ್ ರವರ ಧನ್ಯವಾದಗಳೊಂದಿಗೆ ಸಭೆಯು ಮುಕ್ತಾಯಗೊಂಡಿತು

Related posts

ಎನ್ಲೈಟನ್ ಫೌಂಡೇಶನ್ ಧಾರವಿ, ಏಳನೆ ವಾರ್ಷಿಕೋತ್ಸವ:

Mumbai News Desk

ಶ್ರೀ ನಿತ್ಯಾನಂದ ಸೇವಾ ಸಂಸ್ಥೆ, ಮೀರಾ ಭಾಯಂದರ್ 16ನೇ ವಾರ್ಷಿಕ ಪಾದಯಾತ್ರೆ.

Mumbai News Desk

ಪುತ್ರನ್ ಮೂಲಸ್ಥಾನ ಮುಂಬಯಿ- ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ.

Mumbai News Desk

ಮಲಾಡ್ ಪೂರ್ವ  ಶನಿ ಮಂದಿರದ ಚಾರಿಟೇಬಲ್ ಸೊಸೈಟಿ ವತಿಯಿಂದ ವಿದ್ಯಾರ್ಥಿಗಳಿಗೆ   ಪುಸ್ತಕ,   ಸಾಮಗ್ರಿಗಳ  ವಿತರಣೆ,

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟ ದ ಸಮಾಜ ಕಲ್ಯಾಣ ಸಹಾಯಹಸ್ತ

Mumbai News Desk

ಭಾರತ್ ಕೋ-ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಕೋಪರಖೈರನೆ ಶಾಖೆಯಲ್ಲಿ ವಿಜೃಂಭಣೆಯಿಂದ ಜರಗಿದ 46ನೇ ಸಂಸ್ಥಾಪನಾ ದಿನಾಚರಣೆ

Mumbai News Desk