24.7 C
Karnataka
April 3, 2025
ಸುದ್ದಿ

ಸಾರಸ್ಬತ ವೈದಿಕ ಸೇವಾ ಪ್ರತಿಷ್ಟಾನಮ್ (ರಿ) ಸಂಸ್ಥೆಯ ಉದ್ಘಾಟನೆ



ಲಕ್ಷ್ಮೀಪುರ : ಕಾರ್ಕಳ ತಾ.29.02.2024

 “ವಿಪ್ರ ಸಂಘಟನೆಯು ತನ್ನ ಮೂಲ ಧ್ಯೇಯೋದ್ದೇಶಗಳನ್ನು ಅನುಸರಿಸುತ್ತಾ ತಮಗಿರುವ ಗುರುತರ ಜವಾಬ್ದಾರಿಗಳಾದ   ಸಮಾಜದಲ್ಲಿನ ಸಂಸ್ಕಾರ  , ಸಂಸ್ಕೃತಿಯ ರಕ್ಷಣೆ ಮತ್ತು ಬೆಳವಣಿಗೆಯನ್ನು ಮಾಡುವಲ್ಲಿ ಯಶಸ್ಸನ್ನು ಸಾಧಿಸಲಿ ” ಹೀಗೆಂದು ಹಿರಿಯ ವೈದಿಕರಾದ ವೇದಮೂರ್ತಿ ಹರಿ ಭಟ್ ಸಗ್ರಿ ಇವರು ಕರೆಯಿತ್ತರು.  ಕಾರ್ಕಳದ ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಜರಗಿದ ‘ಸಾರಸ್ಬತ ವೈದಿಕ  ಸೇವಾ  ಪ್ರತಿಷ್ಟಾನಮ್ (ರಿ) ಸಂಸ್ಥೆಯನ್ನು ಉದ್ಘಾಟಿಸಿ   ಅವರು   ಮಾತನಾಡುತ್ತಿದ್ದರು. 

ಸಂಸ್ಥಾನ   ಗೌಡಪಾದಾಚಾರ್ಯ ಶ್ರೀ ಶಿವಾನಂದ ಸರಸ್ವತೀ ಸ್ವಾಮೀಜಿಯವರ ಆಶೀರ್ವಾದದಿಂದ ಕಾರ್ಕಳದ ಲಕ್ಶ್ಮೀಪುರದ ಪಾವನ ಕ್ಷೇತ್ರದಲ್ಲಿ ಸಾರಸ್ವತ ವೈದಿಕರ ಸಂಘಟನೆಯ ಶುಭಾರಂಭವಾಗಿದ್ದು  ಈ ಸಂಸ್ಥೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಹೊಣೆಗಾರಿಕೆ ಎಲ್ಲರ ಮೇಲಿದೆ ” ಎಂದು ಅಭಿಪ್ರಾಯ ಪಟ್ಟರು. ಸಭಾದ್ಯಕ್ಷತೆಯನ್ನು  ಸುರೇಶ್ ಭಟ್ ಮುಂಬೈ ವಹಿಸಿದ್ದರು.

  ಮುಖ್ಯ ಅತಿಥಿಗಳಾಗಿ ಯೋಗ ಶಿಕ್ಷಕ ಸದಾಶಿವ ನಾಯಕ್ ವಿಟ್ಲ  ಹಾಗೂ ಹರಿಹರಪುರಮ್ ಪ್ರಭೋದಿನಿ ಗುರುಕುಲಮ್ ನ ಪ್ರಧಾನಾಚಾರ್ಯ ಡಾ. ಕಾರ್ತಿಕ್ ವಾಗ್ಳೆ ಆಗಮಿಸಿದ್ದು 

ವೇದಿಕೆಯಲ್ಲಿ ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್ ನಾಯಕ್ , ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಶಶಿಧರ ವಾಗ್ಳೆ , ನರಸಿಂಗೆ ಶ್ರೀ ನರಸಿಂಹ ದೇವಸ್ಥಾನದ ಆಡಳಿತ ಮೊಕ್ತೇಸರ ರಮೇಶ ಸಾಲ್ವಣ್ ಕರ್ , ಮೊಂತಿಮಾರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಎಸ್.ಆರ್.ಸತೀಶಚಂದ್ರ , ಮೊಗೇರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅಧ್ಯಕ್ಷ ರವೀಂದ್ರನಾಥ ನಾಯಕ್ ಉಪಸ್ಥಿತರಿದ್ದು ಶುಭ ಹಾರೈಸಿದರು.

   ಈ ಸಂದರ್ಭದಲ್ಲಿ ಮಂದಿರಕ್ಕೆ ಆಗಮಿಸಿದ ಶಾಸಕರಾದ ಸುನೀಲ್ ಕುಮಾರ್ ” ಆದಿಶಕ್ತಿಯ ಈ ಕ್ಷೇತ್ರದಲ್ಲಿ ಆರಂಭಗೊಂಡ ವೈದಿಕರ ಸಂಘಟನೆಯು ಸಮಾಜದಲ್ಲಿ ಉತ್ತಮ ಕಾರ್ಯಗಳನ್ನುನಿರ್ವಹಿಸಿ ಯಶಸ್ವಿಯಾಗಲಿ ” ಎಂದು ಶುಭಹಾರೈಸಿದರು.

     ವೈದಿಕ ಸಮೂಹದ ವೇದಘೋಷದೊಂದಿಗೆ ಕಾರ್ಯಕ್ರಮ ಆರಂಭವಾಗಿದ್ದು ಕರ್ನಾಟಕ ಹಾಗೂ ಮಹಾರಾಷ್ಟ್ರದ ವಿವಿಧ ಭಾಗಗಳಿಂದ ಆಗಮಿಸಿದ ಸಾರಸ್ವತ ವೈದಿಕರು ಭಾಗವಹಿಸಿದ್ದರು.

ಚಿತ್ರ ಹಾಗೂ ವರದಿ :

ಪಿ.ಆರ್.ರವಿಶಂಕರ್ 8483980035

Related posts

ತೊಕ್ಕೊಟ್ಟು ಸಾಯಿ ಪರಿವಾರ್ ನ ಆಹಾರ ಸಾಮಗ್ರಿ‌ ಕಿಟ್ ಸ್ವೀಕರಿಸಿದ ನಿಜವಾದ ಅಶಕ್ತ ಬಂದುಗಳು, ಧನ್ಯತಾ ಭಾವ, ಸಾಯಿ ಸೇವೆಗೆ ಕೃತಜ್ಞತೆ. ತೆನೆಗೆ ಹಾಲೆರೆದು ಉದ್ಘಾಟಿಸಿದ ಜೀವ ರಕ್ಷಕ ಈಶ್ವರ್ ಮಲ್ಪೆ

Mumbai News Desk

ಲಂಡನ್ ವಿಶ್ವ ಶೃಂಗಸಭೆಯಲ್ಲಿ ಐಕಾನಿಕ್ ಮಹಿಳಾ ವಿಶ್ವ ನಾಯಕಿ” ಪ್ರಶಸ್ತಿಗೆ ಡಾ. ವಿಜೇತಾ ಎಸ್. ಶೆಟ್ಟಿಆಯ್ಕೆ.

Mumbai News Desk

ದಿ. ದಾಮೋದರ್ ಸುವರ್ಣ ಜನ್ಮಶತಾಬ್ದಿ ಆಚರಣೆ : ಡಾ. ಮೋಹನ್ ಬಿ ಅವರಿಗೆ ಗಣ್ಯರ ಸಮ್ಮುಖದಲ್ಲಿ ಗೌರವ

Mumbai News Desk

ಉದ್ಯಮಿ ಎನ್. ಟಿ.ಪೂಜಾರಿ ಅವರಿಗೆ ಪಿತೃ ವಿಯೋಗ

Mumbai News Desk

ಮೈಸೂರು ದಸರಾ -2023 ರ  ಪ್ರಧಾನ ಕವಿಗೋಷ್ಟಿಯಲ್ಲಿ ಶ್ರೀನಿವಾಸ ಜೋಕಟ್ಟೆ ಕವನ ವಾಚನ

Mumbai News Desk

ಬೊಳ್ನಾಡು ಶ್ರೀ ಚಿರುಂಭ ಭಗವತಿ ಕ್ಷೇತ್ರದ ಬ್ರಹ್ಮಕಲಶೋತ್ಸವ, ಧಾರ್ಮಿಕ ಸಭೆ

Mumbai News Desk