
ದೇವರ ಅನುಗ್ರಹ, ಸದಸ್ಯರೆಲ್ಲರ ಪರಿಶ್ರಮದಿಂದ ಸುವರ್ಣ ಮಹೋತ್ಸವ ಕಾರ್ಯವು ಯಶಸ್ಸಿಯಾಗುವುದು – ಶ್ರೀನಿವಾಸ್ ಸಾಫಲ್ಯ
ಚಿತ್ರ ವರದಿ : ದಿನೇಶ್ ಕುಲಾಲ್
ಮುಂಬಯಿ : ಸುಮಾರು 50 ವರುಷಗಳ ಹಿಂದೆ ಮಲಾಡ್ ಪರಿಸರದಲ್ಲಿ ನೆಲೆಸಿರುವ ತುಳು ಕನ್ನಡಿಗರು ಮಲಾಡ್ ಪೂರ್ವ ಲಕ್ಷ್ಮಣ ನಗರ ಕುರಾರ್ ವಿಲೇಜ್ ನಲ್ಲಿ ಸ್ಥಾಪಿಸಿದ ಧಾರ್ಮಿಕ ಸಂಸ್ಥೆ ಮಲಾಡ್ ಮಹತೋಭಾರ ಶ್ರೀ ಶನೀಶ್ವರ ದೇವಸ್ಥಾನ ಸುವರ್ಣ ಮಹೋತ್ಸವ ಸಮಾರಂಭವು ಎ. 7 ರಂದು ನಡೆಯಲಿದ್ದು 50ನೇ ವಾರ್ಷಿಕ ಮಹಾಪೂಜೆ ಹಾಗೂ ದೇವಸ್ಥಾನ ಸುವರ್ಣ ಮಹೋತ್ಸವ ಸಮಾರಂಭದ ಕಾರ್ಯಕ್ರಮಗಳ ಪೂರ್ವ ಸಿದ್ದತೆ ನಿಮಿತ್ತ ಸಮಾಲೋಚನಾ ಸಭೆಯು ಫೆ. ೪ ರಂದು ಶ್ರೀ ಶನಿಮಹಾತ್ಮ ಪೂಜಾ ಸಮಿತಿಯ ಅಧ್ಯಕ್ಸರಾದ ಶ್ರೀನಿವಾಸ್ ಸಾಫಲ್ಯ ಇವರ ಅಧ್ಯಕ್ಷತೆಯಲ್ಲಿ ಮಲಾಡ್ ಪೂರ್ವ ಉತ್ಕರ್ಶ ಶಾಲೆಯ ಸಭಾಗೃಹದಲ್ಲಿ ನಡೆಯಿತು.
ಸಭೆಯಲ್ಲಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು ಶ್ರೀನಿವಾಸ್ ಸಾಫಲ್ಯರು ಮಾತನಾಡುತ್ತಾ ಕಳೆದ ವರ್ಷ ದೇವಸ್ಥಾನದ ಸುವರ್ಣ ಮಹೋತ್ಸವ ಉದ್ಘಾಟನೆಯಿಂದ ಮುಂದಿನ ತಿಂಗಳುಗಳ ಕಾಲ ಒಂದು ವರ್ಷದ ಹನ್ನೆರಡು ತಿಂಗಳಲ್ಲಿ ಹನ್ನೆರಡು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ದೇವರ ಅನುಗ್ರಹದಿಂದ 18 ಕಾರ್ಯಕ್ರಮವನ್ನು ಕಾರ್ಯರೂಪಕ್ಕೆ ತರುತ್ತಿದ್ದು ಈ ಬಗ್ಗೆ ವಿವರವನ್ನು ನೀಡಿದರು. ಸುವರ್ಣ ಮಹೋತ್ಸವ ಆಚರಿಸುವ ಬಗ್ಗೆ ಕಾರ್ಯಕಾರಿ ಸಮಿತಿ ಹಾಗೂ ಮಹಾಸಭೆಯಲ್ಲಿ ಸೂಕ್ತ ನಿರ್ಣಯವನ್ನು ಕೈಗೊಂಡಿದ್ದು, ಆರಂಭದಲ್ಲಿ ದೇವಸ್ಥಾನದಲ್ಲಿ ಗಣಹೋಮ ಮಹಾಮೃತ್ಯುಂಜಯ ಹೋಮ ಮಾಡಿ ನಂತರ ಸುವರ್ಣ ಮಹೋತ್ಸವದ ಉದ್ಘಾನೆಯನ್ನು ಮಾಡಿರುವೆವು, ಆ ಸಂದರ್ಭದಲ್ಲಿ ಇಂದಿರುವ ಎಲ್ಲಾ ಗಣ್ಯರು ಉಪಸ್ಥಿತರಿದ್ದು ನಮ್ಮ ಒಗ್ಗಟ್ಟನ್ನು ಸೂಚಿಸುತ್ತದೆ. ಅ ನಂತರ ದೇವಸ್ಥಾನದಲ್ಲಿ ತಿಲದೀಪೋತ್ಸವ ನಡೆದಿದೆ. ನಂತರ ಹರಿಕಥೆ , ಯಕ್ಷಗಾನ ತಾಳೆಮದ್ದಳೆ, ಬದ್ರಿನಾಥ, ಹರಿದ್ವಾರ ಹಾಗು ಋಷಿಕೇಶ್ ಪ್ರಾಯಾಣಿಸಿ ಅಲ್ಲಿ ಭಜನೆ, ಕುಣಿತ ಭಜನೆ, ದೇವಸ್ಥನದಲ್ಲಿ ಸತ್ಯನಾರಾಯಣ ಪೂಜೆ, ನಿಧಿ ಸಂಗ್ರಹಕ್ಕಾಗಿ ಶಿವಧೂತ ಗುಳಿಗೆ ನಾಟಕ ವನ್ನು ಬಂಟರ ಸಂಘದ ಸಭಾಗ್ರಹದಲ್ಲಿ ಪ್ರದರ್ಶನ, ಯಕ್ಷಗಾನ, ಅಖಂಡ ಹರಿನಾಮ ಸಂಕೀರ್ತನೆ, ಶನಿಕಥೆ, ಧಮಸ್ಥಳ ಕ್ಷೇತ್ರ ದರ್ಶನ ಆ ನಂತರ ದೇವಸ್ಥಾನದಲ್ಲಿ ಶನಿಕಥೆ, ಶನಿಪೂಜೆ 50 ನೇ ವರ್ಷದ ಮಹಾಪೂಜೆ ಹಾಗೂ ಅನ್ನದಾನ ಫೆ. 8 – 10 ರ ತನಕ ಜರಗಿದೆ. ಮಾಸಾಂತ್ಯದಲ್ಲಿ ತಿರುಪತಿ ಹಾಗೂ ವೆಲ್ಲೂರಿಗೆ ಹೋಗಿ ಅಲ್ಲಿ ಭಜನ ಹಾಗೂ ಸಂಕೀರ್ತನೆ ಕಾರ್ಯಕ್ರಮ ನಡೆಯಲಿದೆ ಎನ್ನುತ್ತಾ ಎ. 7 ರಂದು ದಹಿಸರ್ ನ ಲತಾ ಮಂಗೇಸ್ಕರ್ ಸಭಾಗೃಹದಲ್ಲಿ ದಿನ ಪೂರ್ತಿ ನಡೆಯಲಿರುವ ಸುವರ್ಣ ಮಹೋತ್ಸವ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡುತ್ತಾ ಈ ಎಲ್ಲಾ ಕಾರ್ಯಕ್ರಮಗಳು ದೇವರ ಆಶ್ರೀರ್ವಾದ ಹಾಗೂ ನಿಮ್ಮೆಲ್ಲರ ಪ್ರಯತ್ನದಿಂದ ನಡೆದಿದ್ದು ಸುವರ್ಣ ಮಹೋತ್ಸವ ಸಮಾರಂಭವನ್ನು ಅದ್ದೂರಿಯಾಗಿ ನಡೆಸಲು ಎಲ್ಲರೂ ಧನಬಲ, ಜನಬಲ ಹಾಗೂ ಒಗ್ಗಟ್ಟಿನಿಂದ ಹಿಂದಿನಂತೆ ಸಹಕರಿಸಬೇಕು ಎಂದರು.
ಶ್ರೀ ಶನೀಶ್ವರ ದೇವಸ್ಥಾನದ ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರೇಮನಾಥ್ ಎಸ್ ಸಾಲ್ಯಾನ್ ಮಾತನಾಡುತ್ತಾ ಈಗಾಗಲೇ ಕಳೆದ ಹತ್ತು ತಿಂಗಳಿಂದ ಈ ತನಕದ ಕಾರ್ಯಕ್ರಮದ ವಿವರಣೆಯನ್ನು ಅಧ್ಯಕ್ಷರು ಹೇಳಿದ್ದು ಎಪ್ರಿಲ್ ನಲ್ಲಿ ನಡೆಯಲಿರುವ ಸಮಾರೋಪ ಸಮಾರಂಭಕ್ಕೆ ಮೊದಲಿನಂತೆ ಎಲ್ಲರೂ ಸಹಕರಿಸಬೇಕು. ಅಂದಿನ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ಈಗಾಗಲೇ ಮಹಿಳೆಯರು ಪೂರ್ವ ತಯಾರಿಯಲ್ಲಿರುವುದು ಅಭಿಮಾನದ ಸಂಗತಿಯಾಗಿದೆ ಅಲ್ಲದೆ ಹೆಚ್ಚಿನ ಕಾರ್ಯಕ್ರಮದಲ್ಲಿ ನನ್ನ ಉಪಸ್ಥಿತಿ ಇಲ್ಲದಿದ್ದರೂ ಎಲ್ಲಾ ಕಾರ್ಯಕ್ರಮದಲ್ಲಿ ಸದಸ್ಯರೆಲ್ಲರೂ ಬಹಳ ಪರಿಶ್ರಮದಿಂದ ದುಡಿಯುತ್ತಿರುವುದು ಮಾತ್ರವಲ್ಲದೆ ಎಲ್ಲರ ಒಗ್ಗಟ್ಟು ಹಾಗೂ ಉತ್ಸಾಹವನ್ನು ನೋಡುವಾಗ ಸಂತೋಷವಾಗುತ್ತಿದೆ. ಎಲ್ಲದಕ್ಕೂ ಮಿಗಿಲಾಗಿ ೫೦ ವರ್ಷವನ್ನಾಚರಿಸುವ ಈ ಧಾರ್ಮಿಕ ಸಂಸ್ಥೆಗೆ ಒರ್ವ ದಕ್ಷ ಅಧ್ಯಕ್ಷರು ದೊರಕಿದ್ದಾರೆ. ಸುವರ್ಣ ಮಹೋತ್ಸವ ಸಮಾರಂಭಕ್ಕೆ ನನ್ನಿಂದಾಗುವ ಎಲ್ಲಾ ಸಹಕಾರವನ್ನು ನೀಡುವೆನು ಎಂದರು.
ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷರಾದ ನ್ಯಾಯವಾದಿ ಜಗನ್ನಾಥ ಶೆಟ್ಟಿಯವರು ಮಾತನಾಡುತ್ತಾ ಈ ಸಂದರ್ಭದಲ್ಲಿ ನಾವು ನಿಮ್ಮೊಂದಿಗೆದ್ದೇವೆ. ಎಲ್ಲರೂ ಅವರವರ ಜಾಗದಲ್ಲಿ ದೇವರ ಕೆಲಸವನ್ನು ಮಾಡುತ್ತಿದ್ದಾರೆ. ಈ ಕ್ಷೇತ್ರಕ್ಕೆ ೫೦ ವರ್ಷಕ್ಕಿಂತಲೂ ಹೆಚ್ಚಿನ ಇತಿಹಾಸವಿರಬಹುದು. ಮಹಾನಗರದಲ್ಲಿ ಕೆಲವು ಶನಿ ಮಂದಿರಗಳಿದ್ದು ಕುರಾರ್ ನ ಶನಿ ಮಂದಿರಕ್ಕೆ ಒಂದು ವಿಶೇಷವಾದ ಕಲೆ ಇದೆ. ಇದು ಕೇವಲ ದೇವಸ್ತಾನವಾಗಿರದೆ ಒಂದು ಪುಣ್ಯ ಕ್ಷೇತ್ರವಾಗಿದೆ ಎಂದರು.
ಸುವರ್ಣ ಮಹೋತ್ಸವ ಸಮಿತಿಯ ಕಾರ್ಯದರ್ಶಿ ಪತ್ರಕರ್ತ ದಿನೇಶ್ ಕುಲಾಲ ಮಾತನಾಡುತ್ತಾ ದೇವಸ್ಥಾನದ ಇತಿಹಾಸದ ಬಗ್ಗೆ ಇಲ್ಲಿನ ಗಣ್ಯರಿಗೆ ಹೆಚ್ಚಿನ ಮಾಹಿತಿ ಇದೆ. ದೇವಸ್ಥಾನ ದ ಅಭಿವೃದ್ದಿಗೆ ಪುರುಷರಂತೆ ಮಹಿಳೆಯರೂ ಭಕ್ತಿ ಯಿಂದ ಸೇವೆ ಮಾಡುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ಇಲ್ಲಿನ ಕಾರ್ಯಕರ್ತರ ಕೆಲಸ ನೋಡುವಾಗ ಇದು ತಮ್ಮ ಕರ್ತವ್ಯವೆಂಬತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಲಾಡ್ ತೊರೆದು ದೂರದಲ್ಲಿ ನೆಲೆಸಿರುವ ದೇವಸ್ಥಾನದ ಸದಸ್ಯರು ಇಲ್ಲಿಗೆ ಬಂದು ಮೊದಲಿನಂತೆ ಕಾರ್ಯ ನಿರ್ವಹಿಸುವುದನ್ನು ನೋಡುವಾಗ ಸಂತೋಷವಾಗುತ್ತದೆ. ದೇವರ ಕೆಲಸಕ್ಕೆ ಯಾವತ್ತೂ ಹಣದ ತೊಂದರೆಯಾಗದು. ಸಮಿತಿಯಲ್ಲಿ ಉತ್ತಮ ಕಾರ್ಯಕರ್ತರು ಇದ್ದಾರೆ. ಅದೇ ರೀತಿ ಅಧ್ಯಕ್ಷರಲ್ಲಿಎಲ್ಲರನ್ನು ಒಂದಾಗಿ ಮುಂದಕ್ಕೆ ಕೊಂಡುಹೋಗುವ ಒಂದು ವಿಶೇಷ ಗುಣವಿದೆ. ಈ ಕ್ಷೇತ್ರದಲ್ಲಿ ಒಂದು ವಿಶೇಷವಾದ ಶಕ್ತಿ ಇದೆ. ಎಲ್ಲಾ ಕಾರ್ಯಕ್ಕೆ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಸಹಕಾರವಿದೆ. ಆದುದರಿಂದ ದೇವಸ್ಥಾನದ ಸುವರ್ಣ ಮಹೋತ್ಸವ ದೇವರ ದಯೆಯಿಂದ ಉತ್ತಮವಾಗಿ ನೆರವೇರುದರಲ್ಲಿ ಸಂದೇಹವಿಲ್ಲ.
ಬಿಲ್ಲವರ ಅಸೋಷಿಯೇಶನ ಮಲಾಡ್ ನ್ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ, ಭಾರತ ಬ್ಯಾಂಕಿನ ನಿರ್ದೇಶಕರೂ ಆದ ಸಂತೋಷ್ ಪೂಜಾರಿಯವರು ಮಾತನಾಡುತ್ತಾ ಎಲ್ಲರನ್ನೂ ಏಕತೆಯಿಂದ ಕೊಂಡೊಯ್ಯುವ ಒಂದು ವಿಶೇಷ ಶಕ್ತಿ ಯನ್ನು ದೇವರು ನಮ್ಮ ಅಧ್ಯಕ್ಷರಿಗೆ ನೀಡಿದ್ದಾರೆ. ದೇವರು ಖಂಡಿತವಾಗಿ ನಮ್ಮೆಲ್ಲರಿಗೆ ಕೊಡುವಂತ ಶಕ್ತಿಯನ್ನು ನೀಡುತ್ತಾರೆ ಆದರೆ ಮನಸ್ಸು ಮಾತ್ರ ಬೇಕು ಅಷ್ಟೇ. ಈ ಕ್ಷೇತ್ರ ಮುಂಬೈ ಮಹಾನಗರದಲ್ಲಿ ಶನಿದೇವರ ಪ್ರಸಿದ್ದ ಕ್ಷೇತ್ರವಾಗಿದ್ದು ಇಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಈ ಕ್ಷೇತ್ರದ ಸುವರ್ಣ ಮಹೋತ್ಸವ ಸಮಾರಂಭ ಸಂಭ್ರಮದ ಕಾರ್ಯಕ್ರಮಕ್ಕೆ ನನ್ನಿಂದಾಗುವ ಎಲ್ಲಾ ಪ್ರೋತ್ಸಾಹವನ್ನು ನೀಡುತ್ತೇನೆ ಎಂದರು.
ಸಾಂಸ್ಕೃತಿಕ ಸಮಿತಿಯ ಕಾರ್ಯಧ್ಯಕ್ಷ ನಾರಾಯಣಶೆಟ್ಟಿ ಮಾತನಾಡುತ್ತಾ ಒಂದು ವರ್ಷದಲ್ಲಿ12 ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಿದ್ದು. ನಾವು ನಮ್ಮ ಅಧ್ಯಕ್ಷರ ಹಾಗೂ ಸಮಿತಿಯ ಎಲ್ಲರ ಪರಿಶ್ರಮದ ಫಲದಿಂದ ಕೆಲಸಗಳು ಉತ್ತಮವಾಗಿ ನೆರವೇರಿತಿದ್ದು ಇದೇ ರೀತಿ ಮುಂದೆಯೂ ಸಹಕರಿಸೋಣ ಎಂದರು.
ಸ್ಮರಣ ಸಂಚಿಕೆ ಸಮಿತಿಯ ಕಾರ್ಯಧ್ಯಕ್ಷ ಸುರೇಶ್ ಶೆಟ್ಟಿ ನಮ್ಮ ಅಧ್ಯಕ್ಷರು ದೀರ್ಘಕಾಲದಿಂದ ಉನ್ನತ ಜವಾಬ್ದಾರಿಯನ್ನು ಹೊತ್ತು ಶ್ರೀ ಕ್ಷೇತ್ರದ ಎಲ್ಲರನ್ನು ಸೇರಿಸಿ ಕಾರ್ಯನಿರ್ವಹಿಸುತ್ತಿದ್ದು ಇಂತಹ ಅಧ್ಯಕ್ಷರು ನಮಗೆ ಸಿಕ್ಕಿದ್ದು ನಮ್ಮೆಲ್ಲರ ಸೌಭಾಗ್ಯ ಅಂತ ಹೇಳ್ಬೇಕು. ಅವರಿಗೆ ಶನಿ ದೇವರ ಆಶೀರ್ವಾದ ಇದೆ. ಎನ್ನುತ್ತಾ ಸ್ಮರಣ ಸಂಚಿಕೆಗೆ ಎಲ್ಲರ ಸಹಕಾರವನ್ನು ಅಪೇಕ್ಷಿಸಿದರು.
ಉಪಾಧ್ಯಕ್ಷರಾದ ಪೇತ್ರಿ ವಿಶ್ವನಾಥ್ ಶೆಟ್ಟಿ ಮಾತನಾಡುತ್ತಾ ಸ್ಮರಣ ಸಂಚಿಕೆಗೆ ಎಲ್ಲರೂ ಸಾಧ್ಯವಾದಷ್ಟು ಜಾಹೀರಾತು ಸಂಗ್ರಹಿಸಬೇಕಾಗಿದೆ. ಮೊದಲು ಮಲಾಡ್ ಪರಿಸರದಲ್ಲಿ ಇದ್ದಂತಹ ನಮ್ಮ ಅಧ್ಯಕ್ಷರಾದ ಶ್ರೀನಿವಾಸ ಸಾಫಲ್ಯರು ಇಂದು ಬಹಳ ಉನ್ನತ ಮಟ್ಟಕ್ಕೇರಿದ್ದು ಸಾವಿರಾರು ಮಂದಿಗೆ ಸಹಕರಿಸುತ್ತಿದ್ದಾರೆ ಮಾತ್ರವಲ್ಲದೆ ಕಲಾಕ್ಷೇತ್ರದಲ್ಲಿ ಯಶಸ್ವಿಯನ್ನು ಪಡೆದಿದ್ದಾರೆ. ಶನಿ ದೇವರ ಆಶೀರ್ವಾದ ಅವರಿಗೆ ಯಾವತ್ತೂ ಇದೆ. ಇಲ್ಲಿ ದುಡಿದವರಿಗೆ ಯಾವ ರೀತಿಯಲ್ಲಿಯೂ ಕಡಿಮೆ ಎಂಬುದು ಆಗಲಿಲ್ಲ. ದೇವರ ಆಶೀರ್ವಾದ ಎಲ್ಲರಿಗಿದೆ. ಪ್ರತಿದಿನ ಕ್ಷೇತ್ರಕ್ಕೆ ಬಂದು ನಾವು ಸುವರ್ಣ ಮಹೋತ್ಸವ ಕಾರ್ಯಕ್ರಮದ ಬಗ್ಗೆ ಚರ್ಚಿಸೋಣ. ಎಲ್ಲಿ ಮಹಿಳಾ ಶಕ್ತಿ ಇದೆ ಅಲ್ಲಿ ಸಮಾರಂಭಗಳು ಖಂಡಿತವಾಗಿಯೂ ನಿರೀಕ್ಷೆಗಿಂತಲೂ ಮೀರಿ ಯಶಸ್ಸನ್ನು ಪಡೆಯುತ್ತದೆ ಎಂದರು.
ನಿಧಿ ಸಂಗ್ರಹ ಸಮಿತಿಯ ಕಾರ್ಯಾಧ್ಯಕ್ಷ ಪ್ರಭಾಕರ ಶೆಟ್ಟಿ ಅವರು ಮಾತಾಡುತ್ತಾ ಹಣ ಎಷ್ಟಿದ್ದರೂ ಕಡೆಮೆ. ನಿಧಿ ಸಂಗ್ರಹದ ಬಗ್ಗೆ ನಮ್ಮ ಗುರಿಯನ್ನು ತಲುಪುವ ಪ್ರಯತ್ನವನ್ನು ನಾವು ಮಾಡಬೇಕಾಗಿದೆ. ಹಣ ಸಂಗ್ರಹಿಸಿದಂತೆನ ಖರ್ಚು ಕೂಡ ಅಷ್ಟೇ ಇದೆ. ನಮ್ಮ ಅಧ್ಯಕ್ಷರು, ನಾವೆಲ್ಲರೂ ಸೇರಿ ಹೆಚ್ಚಿನ ನಿಧಿ ಸಂಗ್ರಹ ಮಾಡಿ ದೊಡ್ಡ ಮಟ್ಟದ ಉಳಿತಾಯವನ್ನು ಮಾಡಬೇಕಾಗಿದೆ ಎಂದು ಹೇಳಿದರು.
ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ರಾಘವೇಂದ್ರ ತುಂಗಾ ಭಟ್ ಅರ್ಚಕರಾದ ನಾರಾಯಣ ಭಟ್ ಸಭೆಯಲ್ಲಿ ಉಪಸ್ಥಿತರಿದ್ದರು.
ಸುವರ್ಣ ಮಹೋರ್ಸವದ ಸವಿ ನೆನಪಿಗಾಗಿ ದೇವರ ಚಿತ್ರ ಭಾವಚಿತ್ರವಿರುವ ಬೆಳ್ಳಿಯ ನಾಣ್ಯವನ್ನು ನೀಡುವ ಬಗ್ಗೆ ಅಧ್ಯಕ್ಷರು ತಿಳಿಸಿದರು.
ಉಪಾಧ್ಯಕ್ಷರಾದ ರಮೇಶ ಆಚಾರ್ಯ ಅವರು ಧನ್ಯವಾದ ಸಮರ್ಪಿಸಿದರು.
ವೇದಿಕೆಯಲ್ಲಿ ಗೌ. ಕೋಶಾಧಿಕಾರಿ ಹರೀಶ್ ಜೆ. ಸಾಲ್ಯಾನ್, ಗೌ. ಪ್ರಧಾನ ಕಾರ್ಯದರ್ಶಿ ಸಂತೋಷ್ ಎಸ್. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೀತಲ್ ಎನ್ ಕೋಟ್ಯಾನ್, ಮತ್ತು ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ ಸದಸ್ಯರು ಹಾಗೂ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.