ಮುಂಬಯ ಪೆ 23. ನಗರದ ಪ್ರತಿಷ್ಠಿತ ಜಾತಿಯ ಸಂಘಟನೆ ಕುಲಾಲ ಸಂಘದ ಯುವ ವಿಭಾಗದ ವತಿಯಿಂದ ಕ್ರೀಡೋತ್ಸವ ವು ಪೆ 25 ರಂದು ಬೆಳಿಗ್ಗೆ ಗಂಟೆ 7-30ರಿಂದ ಸಂಜೆ 6-30ರ ವರೆಗೆ ಕರ್ನಾಲ ಸ್ಪೋರ್ಟ್ಸ್ ಅಕಾಡೆಮಿ ಪನ್ವೆಲ್, ಸೆಕ್ಟರ್ -16 ಕಾಲ್ ಶೇಖರ್ ಕಾಲೇಜ್ ನ ಹತ್ತಿರ ಇಲ್ಲಿ ನಡೆಯಲಿದೆ,
ಕುಲಾಲ ಸಂಘ ಮುಂಬಯಿ ಇದರ ಅಧ್ಯಕ್ಷರಾದ ರಘು ಮೂಲ್ಯ ಇವರ ಅಧ್ಯಕ್ಷತೆಯಲ್ಲಿ ಮತ್ತು ಗೌ .ಅಧ್ಯಕ್ಷರಾದ ದೇವದಾಸ್ ಕುಲಾಲ್ ಇವರ ಉಪಸ್ಥಿತಿಯಲ್ಲಿ ಕುಲಾಲ ಕ್ರೀಡೋತ್ಸವ – 2024 ಬಹಳ ವಿಜೃಂಭಣೆಯಿಂದ ಜರಗಿಸಲಾಗುವುದು.
ಅಂದಿನ ಕ್ರೀಡೋತ್ಸವದ ಉಧ್ಘಟನಾ ಸಮಾರಂಭದ ಮುಖ್ಯ ಅತಿಥಿಯಾಗಳಗಿ ಬಂಟರ ಸಂಘ ನವಿ ಮುಂಬಯಿ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷರಾದ
ಭಾಸ್ಕರ್ ಶೆಟ್ಟಿ(ದಕ್ಷಿಣ). .ಅರ್ಯಲ್ಯಾಕ್ ಕೋಟಿಂಗ್ ಪ್ರೈ . ಲಿ. ನಿರ್ದೇಶಕ ಸಂದೀಪ್ ಸುಭಾಷ್ ಪವರ್ : ಭಾಗವಹಿಸಲಿರುವರು.
ಸಂಜೆ ನಡೆಯಲಿರುವ ಸಮಾರೋಪದ ಸಮಾರಂಭದ ಮುಖ್ಯ ಅತಿಥಿಯಾಗಳಗಿ ಪನ್ವೇಲ್ ಮುನ್ಸಿಪಾಲಿಟಿ ಕಾರ್ಪೊರೇಷನ್ ಕಾರ್ಪೊರೇಟರ್,
ಕರ್ನಾಟಕ ಸಂಘ ಪನ್ವೆಲ್. ಕಾರ್ಯಾಧ್ಯಕ್ಷ
ಸಂತೋಷ್ ಜಿ ಶೆಟ್ಟಿ , ನವಿ ಮುಂಬಯಿ ಹೊಟೇಲ್ ಓನರ್ಸ್ ಎಸೋಸಿಯೇಷನ್ ಕಾರ್ಯದರ್ಶಿ ಮಹೇಶ್ ಶೆಟ್ಟಿ ,ಗೌರವ ಅತಿಥಿಯಾಗಿ ಜ್ಯೋತಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯ ಧ್ಯಕ್ಷ ಗಿರೀಶ್ ಬಿ ಸಾಲಿಯಾನ್, ಕುಲಾಲ ಸಂಘ ಮುಂಬೈಯ ಕಟ್ಟಡ ನಿರ್ಮಾಣ ಸಮಿತಿಯ ಉಪ ಕಾರ್ಯ ಧ್ಯಕ್ಷ
ಸುನಿಲ್ ಆರ್ ಸಾಲಿಯಾನ್ , ಅಂಬರ್ನಾಥ್ ಜೈದೀಪ್ ಕನ್ಸ್ಟ್ರಕ್ಷನ್ ಆಡಳಿತ ನಿರ್ದೇಶಕ ಜಗದೀಶ್ ಆರ್ ಬಂಜನ್ ಇವರು ಭಾಗವಹಿಸಲಿದ್ದಾರೆ.
ಈ ಕ್ರೀಡೋತ್ಸವದಲ್ಲಿ 5ಸ್ಥಳೀಯ ಸಮಿತಿ ಮತ್ತು ಕೇಂದ್ರ ಸಮಿತಿಯ ಕ್ರಿಕೆಟ್ ಲೀಗ್. 50 ವರ್ಷ ಮೇಲಿನವರಿಗೆ ಬಾಕ್ಸ್ ಕ್ರಿಕೆಟ್ ಪಂದ್ಯ ,ವನಿತೆಯರ ಬಾಕ್ಸ್ ಕ್ರಿಕೆಟ್ ಪಂದ್ಯ .ಮಹಿಳೆಯರ ಥ್ರೋ -ಬಾಲ್ ಪಂದ್ಯಾಟ, ಜರಗಲಾಗುವುದು.
ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿಸಂಘದ ಉಪಾಧ್ಯಕ್ಷರು ಡಿ ಐ ಮೂಲ್ಯ ,ಕಾರ್ಯದರ್ಶಿ ಕರುಣಾಕರ್ ಸಾಲಿಯಾನ್,ಕೋಶಾಧಿಕಾರಿ ಜಯ ಅಂಚನ್ .ಮಹಿಳಾ ವಿಭಾಗದ. ಕಾರ್ಯಾಧ್ಯಕ್ಷೆ ಮಮತಾ ಗುಜರನ್ ,ಕ್ರೀಡೆ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯ ಧ್ಯಕ್ಷ ಸಂಜೀವ ಬಂಗೇರ ಹಾಗೂ ಸಮಿತಿಯ ಎಲ್ಲ ಸದಸ್ಯರು ವಿನಂತಿಸಿ . ಎಲ್ಲ ಸ್ಥಳೀಯ ಸಮಿತಿಯ ಮಹಿಳಾ ವಿಭಾಗ ,ಯುವ ವಿಭಾಗ ,ಮತ್ತು ಎಲ್ಲ ಸ್ಥಳೀಯ ಸಮಿತಿಯ ಸದಸ್ಯರು ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಯಶಸ್ವಿಯಾಗಿ ನೆರವೇರಿಸಬೇಕೆಂದು ವಿನಂತಿಸಿಕೊಂಡಿದ್ದಾರೆ,,