
ಡೊಂಬಿವಲಿ ಪಶ್ಚಿಮದ ಯಶವಂತ ನಗರದಲ್ಲಿರುವ ಮುಂಬ್ರಾ ಮಿತ್ರ ಭಜನಾ ಮಂಡಳಿ (ರಿ) ಇದರ ಸಂಚಾಲಕತ್ವದ ಶ್ರೀ ಮಹಾವಿಷ್ಣು ಮಂದಿರದಲ್ಲಿ ವೈ. ಅನಂತ ಪದ್ಮನಾಭ ಭಟ್ ಇವರಿಂದ ಪುರಂದರ ದಾಸರಾ ಆರಾಧನಾ ಮಹೋತ್ಸವದ ನಿಮಿತ್ತ “ದಶಾವತಾರ ” ಹರಿನಾಮವಳಿ – ಶುಭ ಚಿಂತನ ” ಕಾರ್ಯಕ್ರಮವು ಫೆ.19 ರಂದು ಸೋಮವಾರ ಸಂಜೆ 7 ರಿಂದ 10 ರ ತನಕ ಮಂದಿರದ ಸಭಾಗ್ರಹದಲ್ಲಿ ನೆರವೇರಿತು.




ಈ ಸಂದರ್ಭದಲ್ಲಿ ಹರಿದಾಸರಾದ ವಿದ್ವಾನ್ ವೈ. ಅನಂತಪದ್ಮನಾಭ ಭಟ್ ಹಾಗು ಅವರೊಂದಿಗೆ ಹಾರ್ಮೋನಿಯಂ ವಾದಕರಾದ ಶ್ರೀ ಶಿವರಾಮ ಭಾಗವತ್ ಯೆಲ್ಲಾಪುರ ಹಾಗೂ ಮಾನಸ್ ಬಂಗೇರ ರವರಿಗೆ ಮಂದಿರದ ವತಿಯಿಂದ ಗೌರವಿಸಲಾಯಿತು.
ಮಂದಿರದ ಅಧ್ಯಕ್ಷರಾದ ಶ್ರೀ ಇಂದುಶೇಖರ್ ಸುವರ್ಣ , ಗೌರವ ಅಧ್ಯಕ್ಷರಾದ ಶ್ರೀಯುತ ನಿತಿನ್ ಪ್ರಕಾಶ್ ಪುತ್ರನ್ ಉಪಾಧ್ಯಕ್ಷರಾದ ಅರವಿಂದ್ ಪದ್ಮಶಾಲಿ, ಜೊತೆ ಕಾರ್ಯದರ್ಶಿ ಚಂದ್ರಶೇಖರ್ ಸಾಲಿಯಾನ್ , ಮಹಿಳಾ ವಿಭಾಗದ ಕಾರ್ಯದ್ಯೆಕ್ಷೆ ಶ್ರೀಮತಿ ಸವಿತಾ ಸಾಲಿಯಾನ್ ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗದ ಸದಸ್ಯೆಯರು , ಹಾಗು ತುಳು ಕನ್ನಡ ಸಂಘ ಸಂಸ್ಥೆಯ ಹೆಚ್ಚಿನ ಸದಸ್ಯರುಗಳು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿ ಯಾಗಲು ಸಹಕರಿಸಿದರು. ಮಂದಿರ ದ್ ಉಪ ಬುವಾಜಿ ಶ್ರೀಯುತ ಲೀಲೆಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.