
ಮುಂಬಯಿ ಮಾ 6.ಸಾಫಲ್ಸಾಫಲ್ಯ ಸಮಾಜ ಬಾಂಧವರ ಅಭಿವೃದ್ಧಿಗಾಗಿ ಸಾಫಲ್ಯ ಸೇವಾ ಸಂಘವು ಮುಂಬಯಿ ಮಹಾನಗರದಲ್ಲಿ ನಿರಂತರ ತನ್ನ ಕೊಡುಗೆಯನ್ನು ನೀಡುತ್ತಾ ಬಂದಿದೆ. ಇದರ ಮಹಿಳಾ ವಿಭಾಗದ ವತಿಯಿಂದಮಹಿಳಾ ದಿನಾಚರಣೆಯ ಪ್ರಯುಕ್ತ ಸಾಫಲ್ಯ ಸ್ತ್ರೀ ಶಕ್ತಿ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಮಾರ್ಚ್ 9 ರ ಶನಿವಾರ ಮಧ್ಯಾಹ್ನ 3.00 ರಿಂದ ಕುರ್ಲಾ ಬಂಟರ ಭವನದ ಆನೆಕ್ಸ್ ಹಾಲ್ ನಲ್ಲಿ ಸಂಘದ ಅಧ್ಯಕ್ಷರಾದ ಶ್ರೀನಿವಾಸ ಸಪಲ್ಯರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ನಾಟ್ಯಗುರು ಕುಮಾರಿ ಲತಿಕಾ ಶ್ರೀಯಾನ್, ಸಮಾಜ ಸೇವಕಿ ಶಕುಂತಲಾ ಪುತ್ರನ್, ಲೇಖಕಿ ಸುಮಿತ್ರಾ ಬಿ ಗುಜರನ್, ಸಂಪಾದಕಿ, ಲೇಖಕಿ ಡಾ. ಜಿ ಪಿ ಕುಸುಮಾ, ಮತ್ತು ಸಮಾಜ ಸೇವಕಿ ಸುಮಿತ್ರ ವಿ ಕುಂಜರ್ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಈ ಸಂದರ್ಭದಲ್ಲಿ ಸ ಸಾಫಲ್ಯ ಸಮಾಜದ ಯಶಸ್ವಿ ಮಹಿಳೆಯರಾದ ರತ್ನಾ ಕುಂದರ್, ಮಂಜುಳಾ ಅಮೀನ್, ಸುನೀತಾ ಬಂಗೇರ, ಉಷಾ ವಿ. ಸಪಳಿಗ ಹಾಗೂ ದೀಪಾ ಸುವರ್ಣ ಇವರುಗಳಿಗೆ ಗೌರವಾರ್ಪಣೆ ನಡೆಯಲಿದೆ,
ಕಾರ್ಯಕ್ರಮವು ಲಲಿತಾ ಸಹಸ್ರನಾಮ , ಹಳದಿ ಕುಂಕುಮ, ದಿ ಆರ್ಟ್ ಆಫ್ ಲೀವಿಂಗ್ ವಿಶೇಷ ಕಾರ್ಯಕ್ರಮ ಹೀಗೆ ವೈವಿಧ್ಯಮಯ ಕಾರ್ಯಕ್ರಮಗಳ ಜೊತೆಗೆ ಮನೋರಂಜನೆಗಾಗಿ ಗೇಮ್ಸ್ ಗಳನ್ನೂ ಒಳಗೊಂಡಿದೆ.
ಸಮಾಜ ಬಾಂಧವರೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗುವಂತೆ ಸಹಕರಿಸಬೇಕಾಗಿ ಸಾಫಲ್ಯ ಸೇವಾ ಸಂಘದ ಪದಾಧಿಕಾರಿಗಳು ವಿನಂತಿಸಿದ್ದಾರೆ.,
ವಿ.ಸೂ: ಕಾರ್ಯಕ್ರಮ ಮುಗಿದ ಬಳಿಕ ಕುರ್ಲಾ ರೈಲ್ವೆ ಸ್ಟೇಷನ್ ಗೆ ಬಸ್ಸಿನ ವ್ಯವಸ್ಥೆ ಮಾಡಲಾಗಿದೆ.
💫 Subscribe, Like, Share