
ಶ್ರೀ ಶಿವ ಪಂಚಾಕ್ಷರಿ ಟ್ರಸ್ಟ್ ರಿ. ಕೊಳ _ ಮಲ್ಪೆ, ಡಾ ಜಿ.ಶಂಕರ್ ಪ್ಯಾಮಿಲಿ ಟ್ರಸ್ಟ್ ರಿ. ಉಡುಪಿ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ ,ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲ ಇವರ ಸಹಕಾರದಲ್ಲಿ ದಿನಾಂಕ 10/03/2024 ಆದಿತ್ಯವಾರ ಶ್ರೀ ಶಿವ ಪಂಚಾಕ್ಷರಿ ಭಜನ ಮಂದಿರ ಮಲ್ಪೆ ಕೊಳ ಇಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ ಇದರ ಅಧ್ಯಕ್ಷರಾದ ರಕ್ತದ ಆಪತ್ಬಾಂದವ ಸತೀಶ್ ಸಾಲ್ಯಾನ್ ಮಣಿಪಾಲ್ ಉದ್ಘಾಟಿಸಿದರು. ನಂತರದಲ್ಲಿ ಮಾತನಾಡಿದ ಅವರು ಉಡುಪಿ ಕಡಲ ತೀರದಲ್ಲಿ ಸುಮಾರು 100ಕ್ಕೂ ಅಧಿಕ ಭಜನ ಮಂದಿರಗಳಿದ್ದು ಈ ಭಜನ ಮಂದಿರಗಳು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಮಾಜಸೇವೆ ತೊಡಗಿಕೊಂಡರೆ ಶ್ರೀ ಶಿವ ಪಂಚಾಕ್ಷರಿ ಟ್ರಸ್ಟ್ ಧಾರ್ಮಿಕ, ಸಾಂಸ್ಕೃತಿಕ, ಸಮಾಜಸೇವೆಯೊಂದಿಗೆ ರಕ್ತದಾನ ಶಿಬಿರವನ್ನು ಆಯೋಜಸಿ ರೋಗಿಗಳ ಜೀವ ಉಳಿಸುವ ಮಾನವೀಯ ಕಾರ್ಯಕ್ರಮವನ್ನು ಹಮ್ಮಿಕೊಂಡು ಇತರ ಭಜನ ಮಂದಿರಾಗಳಿಗೆ ಪ್ರೇರಣೆಯಾಗಿದೆ. ಟ್ರಸ್ಟ್ ಮೂಲಕ ಇನ್ನಷ್ಟು ಶೈಕ್ಷಣಿಕ ಆರೋಗ್ಯ ಸೇವೆಗಳು ಮುಂದಿನ ದಿನಗಳಲ್ಲಿ ನಡೆಯಲಿ ಎಂದು ಹಾರೈಸಿದರು.




ಶ್ರೀ ನಾರಾಯಣ ಸಾಲ್ಯಾನ್ ಅಧ್ಯಕ್ಷರು, ಶ್ರೀ ಶಿವ ಪಂಚಾಕ್ಷರಿ ಭಜನ ಮಂದಿರಾ ಮಲ್ಪೆ ಕೊಳ ಸಭೆಯ ಅಧ್ಯಕ್ಷತೆ ವಹಿಸಿದರು. ಶ್ರೀ ಮಂಜು ಕೊಳ ರಕ್ತದಾನ ಶಿಬಿರದ ಆಯೋಜನ ಪ್ರಮುಖರು, ಡಾ . ಸುಮಾಂಕಿತ ವೈದ್ಯರು ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲ, ಶ್ರೀ ವಿಕ್ರಮ್ ಶ್ರೀಯಾನ್, ಸದಸ್ಯರು, ಶ್ರೀ ಶಿವಪಂಚಾಕ್ಷರಿ ಟ್ರಸ್ಟ್ ರಿ. ಮಲ್ಪೆ ಕೊಳ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶ್ರೀ ರವಿರಾಜ್ ಸಾಲ್ಯಾನ್ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಶ್ರೀ ರಾಕೇಶ್ ಅಮೀನ್ ಧನ್ಯವಾದ ಅರ್ಪಿಸಿದರು.ಈ ಯಶಸ್ವಿ ರಕ್ತದಾನ ಶಿಬಿರದಲ್ಲಿ 86 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು
.