
ಸಂಸ್ಥೆಯ ಯುವಕರ ಉತ್ಸಾಹ ಹಾಗೂ ಒಗ್ಗಟ್ಟನ್ನು ಕಂಡು ಸಂತೋಷವಾಗುತ್ತಿದೆ : ಆನಂದ ಶೆಟ್ಟಿ ಎಕ್ಕಾರ್
ಡೊಂಬಿವಲಿ, ಮಾ.16- ವಿಷ್ಣು ದೇವರ ದೇವಸ್ಥಾನ ಬಹಳ ಕಡಿಮೆ . ಮಹಾನಗರದಲ್ಲಿ ಬಂಟರ ಸಂಘ ಮತ್ತು ಡೊಂಬಿವಲಿಯಲ್ಲಿ ಮಾತ್ರ ವಿಷ್ಣು ದೇವಸ್ಥಾನವಿದೆ. ವಿಷ್ಣು ದೇವರನ್ನು ಭಕ್ತಿಯಿಂದ ಪೂಜಿಸಿದರೆ ಎಲ್ಲಾ ಕಷ್ಟಗಳು ಪರಿಹಾರ ವಾಗುವುದರಲ್ಲಿ ಸಂದೇಹವಿಲ್ಲ. ಮುಂಬ್ರಾ ಮಿತ್ರ ಭಜನಾ ಮಂಡಳಿಯ ಸಂಚಾಲಕತ್ವದಲ್ಲಿರುವ ಈ ಮಂದಿರದ ಕಾರ್ಯಕಾರಿ ಸಮಿತಿ ಡೊಂಬಿವಲಿ ಪರಿಸರದಲ್ಲಿ ಧಾರ್ಮಿಕ ಕಾರ್ಯದೊಂದಿಗೆ ಸಾಮಾಜಿಕ ಕಾರ್ಯವನ್ನು ಮಾಡುತ್ತಾ ಡೊಂಬಿವಲಿ ತುಳು- ಕನ್ನಡಿಗರ ಮನೆ ಮಾತಾಗಿದೆ . ಈ ಸಂಸ್ಥೆಯ ಯುವಕರ ಉತ್ಸಾಹ ಹಾಗೂ ಒಗ್ಗಟ್ಟನ್ನು ಕಂಡು ಸಂತೋಷವಾಗುತ್ತಿದೆ. ಯುವಕರ ಕೈಗೆ ಅಧಿಕಾರವನ್ನು ನೀಡಿದಾಗ ಸಮಾಜದಲ್ಲಿ ಯಾವ ರೀತಿ ಬದಲಾವಣೆ ಮಾಡಬಹುದು ಎಂಬ ನಿರ್ದೇಶನ ಈ ಸಂಸ್ಥೆ ನೀಡಿದೆ ಎಂದು ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಆನಂದ ಶೆಟ್ಟಿ ಎಕ್ಕಾರ್ ನುಡಿದರು. ಅವರು ಮಾರ್ಚ್ 16ರ ಶನಿವಾರದಂದು ಡೊಂಬಿವಲಿ ಪಶ್ಚಿಮ ನೇಮಡೆ ಗಲ್ಲಿಯಲ್ಲಿಯಲ್ಲಿರುವ ಮುಂಬ್ರಾ ಮಿತ್ರ ಭಜನಾ ಮಂಡಳಿ ಸಂಚಾಲಕತ್ವದ ಶ್ರೀ ಮಹಾವಿಷ್ಣು ಮಂದಿರದ 47 ನೇ ವಾರ್ಷಿಕ ಮಹಾಪೂಜೆ, ಶನೀಶ್ವರ ಪೂಜೆ, ಧಾರ್ಮಿಕ ಸಭೆಯ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡುತ್ತಿದ್ದರು. ಅತಿಥಿ ಮೊಗವೀರ ವ್ಯವಸ್ಥಾಪಕ ಮಂಡಳಿಯ ಉಪಾಧ್ಯಕ್ಷ ಅರವಿಂದ ಕಾಂಚನ್ ಮಾತನಾಡುತ್ತಾ, ಮುಂಬ್ರಾ ಮಿತ್ರ ಭಜನಾ ಮಂಡಳಿಯೊಂದಿಗೆ ನನ್ನ 41 ವರ್ಷಗಳ ಒಡನಾಟ ಸಂಸ್ಥೆಯ ಬೆಳವಣಿಗೆಯನ್ನು ನಾನು ಬಹಳ ಹತ್ತಿರದಿಂದ ಕಂಡವ . ಯಾವುದೇ ಸಂಘ- ಸಂಸ್ಥೆ ನಿಂತ ನೀರಾಗಿರದೆ ಹರಿವ ನೀರಾದಾಗ
ಸಂಸ್ಥೆಯು ಉನ್ನತ ಶಿಖರವನ್ನೇರ ಬಹುದು. ಈ ಸಂಸ್ಥೆಯ ಬೆಳವಣಿಗೆಗೆ ಕಾರಣಿಭೂತರಾದವರಿಗೆ ಅಭಿನಂದನೆಗಳು ವಿಷ್ಣು ದೇವರ ಅನುಗ್ರಹದಿಂದ ನಿಮ್ಮಿಂದ ಧಾರ್ಮಿಕ ಕಾರ್ಯದೊಂದಿಗೆ ಸಮಾಜ ಕಲ್ಯಾಣ ಕಾರ್ಯಗಳು ನಿರಂತರ
ನಡೆಯುತ್ತಿರಲಿ. ಭಜನೆ ಮನಸ್ಸಿಗೆ ಮುದ ನೀಡುವುದರೊಂದಿಗೆ ಮನಸ್ಸಿನ ಕೊಳಕನ್ನು ನಿವಾರಿಸುತ್ತದೆ. ಸಂಸ್ಥೆಗೆ ಮತ್ತಷ್ಟು ಯುವ ಪೀಳಿಗೆಯನ್ನು ಸೇರಿಸು ಕೊಂಡು ಸಂಸ್ಥೆಯನ್ನು ಅಭಿವೃದ್ಧಿಯ ಪಥದತ್ತ ಮುನ್ನಡೆಸುವ ಜವಬ್ದಾರಿ ನಿಮ್ಮಲ್ಲಿರಲಿ ಎಂದರು.
ಇದಕ್ಕೂ ಮೊದಲು ಬೆಳಿಗ್ಗೆ ಅನಂತ ಪದ್ಮನಾಭ ಭಟ್ ಹೆಜಮಾಡಿ ಇವರ ಪೌರೋಹಿತ್ಯದಲ್ಲಿ ಗಣಹೋಮ, ಶ್ರೀ ಸತ್ಯನಾರಾಯಣ ಮಹಾ ಪೂಜೆ ನಡೆಯಿತು. ಗಣ ಹೋಮದ ಪೂಜಾ ವಿಧಿ ವಿಧಾನದಲ್ಲಿ ಸಚಿನ್ ಪೂಜಾರಿ ದಂಪತಿ ಸಹಕರಿಸಿದರೆ ಶ್ರೀ ಸತ್ಯನಾರಾಯಣ ಮಹಾಪೂಜೆಯ ವಿಧಿ ವಿಧಾನದಲ್ಲಿ ಲೀಲೇಶ್ ಸುವರ್ಣ ದಂಪತಿ ಸಹಕರಿಸಿದರು. ಶನಿ ಗ್ರಂಥ ಪಾರಾಯಣದಲ್ಲಿ ಶ್ರೀಮತಿ ಆಶಾ ಪುರಂದರ ಸಾಲಿಯಾನ್ ಸಹಕರಿಸಿದರು.

ಮದ್ಯಾನ ಶನಿ ಗ್ರಂಥ ಪ್ರಯಾಣದ ಉದ್ಘಾಟಕರಾಗಿ ಶ್ರೀಯುತ ಶೇಖರ್ ಮೆಂಡನ್ ( ಕಾರ್ಯಾಧ್ಯಎಕ್ಷರು ಮೊಗವೀರ ವ್ಯವಸ್ಥಾಪಕ ಮಂಡಳಿ, ಡೊಂಬಿವಲಿ ) ಶ್ರೀ ತಾರಾನಾಥ್ ಅಮೀನ್ ( ಗೌರವ ಕೋಶಾಧಿಕಾರಿ ; ಕರ್ನಾಟಕ ಸಂಘ ಡೊಂಬಿವಲಿ ) ಶ್ರೀಮತಿ ಲಕ್ಷ್ಮಿ ಶೆಟ್ಟಿಗಾರ್ ( ಸಮಾಜ ಸೇವಕಿ ) ಹಾಗು ಮಂದಿರದ ಅಧ್ಯಕ್ಷರು , ಗೌರವ ಅಧ್ಯಕ್ಷರು , ಮಹಿಳಾ ವಿಭಾಗದ ಕಾರ್ಯಾಧ್ಯಎಕ್ಷರು ಶ್ರೀಮತಿ ಸವಿತಾ ಸಾಲಿಯಾನ್ ನೆರವೇರಿಸದರು. ಹಾಗು ಮಂದಿರದ ಅಮೃತ ಫಲಕದ ಉದ್ಘಾಟನೆಯನ್ನು ಅತಿಥಿ ಗಣ್ಯರ ದಿವ್ಯ ಹಸ್ತದಿನ ನೆರವೇರಿಸಲಾಯಿತು.
ಮಧ್ಯಾಹ್ನ ಶನಿದೇವರ ಕಲಶ ಪ್ರತಿಷ್ಠಾಪಿಸಿ ಶನಿದೇವರ ಗ್ರಂಥ ಪಾರಾಯಣ ನಡೆಯಿತು ಶನಿ ದೇವರ ಗ್ರಂಥ ವಾಚಕರಾಗಿ ಅರವಿಂದ ಪದ್ಮಶಾಲಿ, ಗೀತಾ ಮೆಂಡನ್, ಲಕ್ಷ್ಮಣ ಸಿ, ಸುನಂದ ಶೆಟ್ಟಿ, ಮಾಧವ ಪೂಜಾರಿ, ನಾರಾಯಣ ಸುವರ್ಣ, ಜಯ ಶೆಟ್ಟಿ, ದಿನೇಶ್ ಕೋಟ್ಯಾನ್, ರಾಜೇಶ್ ಕೋಟ್ಯಾನ್, ಮೋಹನ್ ಕೋಟ್ಯಾನ್, ಲೋಕೇಶ್ ಸುವರ್ಣ, ಅಣ್ಣಪ್ಪ ಮೊಗವೀರ, ಪ್ರಶಾಂತ್ ಪೂಜಾರಿ ಸಹಕರಿಸಿದರು . ಅರ್ಥದಾರಿಗಳಾಗಿ ರತ್ನಾಕರ್ ಬಂಗೇರ, ಕಿಶೋರ್, ಸುರೇಶ್ ಕರ್ಕೇರ, ಅಶೋಕ್ ಶೆಟ್ಟಿ, ಸೋಮನಾಥ ಪೂಜಾರಿ, ರವಿ ಸುವರ್ಣ, ಶೇಖರ್ ಮೆಂಡನ್, ಭಾಸ್ಕರ್ ಅಮೀನ್ ಸಹಕರಿಸಿದರು. ಕೊನೆಯಲ್ಲಿ ಮಂಗಳಾರತಿ ನಡೆದು ತೀರ್ಥಪ್ರಸಾದ ವಿತರಿಸಿ ಅನ್ನ ಸಂತರ್ಪಣೆ ನಡೆಯಿತು.




ಅಧ್ಯಕ್ಷರ ಮಾತು : ನಮ್ಮ ಹಿರಿಯರು ಹಾಕಿ ಕೊಟ್ಟ ಸನ್ಮಾರ್ಗದಲ್ಲಿ ನಾವು ನಡೆಯುತ್ತಿದ್ದು, ನಮ್ಮ ಸಂಸ್ಥೆ ಧಾರ್ಮಿಕ, ಸಾಮಾಜಿಕ ಕಾರ್ಯದಲ್ಲಿ ಮಹಾನಗರದಲ್ಲಿ ಒಂದು ಉತ್ತಮ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ನಮ್ಮ ಮಂದಿರದಲ್ಲಿ ಸದಾ ಧಾರ್ಮಿಕ ಕೆಲಸಗಳೊಂದಿಗೆ ದಾನಗಳಲ್ಲಿ ಮಹಾ ದಾನವಾದ ಅನ್ನದಾನವೂ ನಡೆಯುತ್ತಿದೆ. ಇನ್ನೂ ಮೂರು ವರ್ಷದಲ್ಲಿ ಸಂಸ್ಥೆಯು ಅದ್ದೂರಿ ಸುವರ್ಣ ಮಹೋತ್ಸವವನ್ನು ಆಚರಿಸುವ ಯೋಜನೆ, ಯೋಚನೆಯನ್ನು ಹಾಕಿ ಕೊಂಡಿದೆ. ಈ ಕಾರ್ಯಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯವಿದೆ – ಇಂದು ಶೇಖರ್ ಸುವರ್ಣ, ಅಧ್ಯಕ್ಷರು, ಮುಂಬ್ರಾ ಮಿತ್ರ ಭಜನಾ ಮಂಡಳಿ ಸಂಚಾಲಕತ್ವದ ಶ್ರೀ ಮಹಾವಿಷ್ಣು ಮಂದಿರ.
ವೇದಿಕೆಯ ಮೇಲೆ ಇಂದು ಶೇಖರ ಸುವರ್ಣ, ಆನಂದ ಶೆಟ್ಟಿ ಎಕ್ಕಾರ್, ನಿತಿನ್ ಪ್ರಕಾಶ್ ಪುತ್ರನ್, ರಾಜೀವ್ ಭಂಡಾರಿ, ಅರವಿಂದ ಕಾಂಚನ್, ಮನೋಹರ ಮೆಂಡನ್, ಸವಿತಾ ಸಾಲ್ಯಾನ್ ಉಪಸ್ಥಿತರಿದ್ದರು. ಗೌರವ ಪ್ರದಾನ ಕಾರ್ಯದರ್ಶಿ ಸಚಿನ್ ಪೂಜಾರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.