
“ಆನಂದವನ್ನು ನಮ್ಮೊಳಗೆ ಹುಡುಕಬೇಕು”
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಹನುಮಜ್ಜಯಂತಿ ಮಹೋತ್ಸವ-ಶ್ರೀಮದ್ರಾಮಾಯಣ ಮಹಾಯಜ್ಞದ ಅಂಗವಾಗಿ ಜರಗಿದ ಧರ್ಮಸಭೆಯಲ್ಲಿ ಪೂಜ್ಯ ಒಡಿಯೂರು ಶ್ರೀಗಳವರಿಂದ ಸಂದೇಶ
“ಶ್ರೀರಾಮನ ಆದರ್ಶ, ಹನುಮಂತನ ಸ್ವಾಮಿನಿಷ್ಠೆ ಪ್ರೇರಣೆಯಾಗಿ ಸ್ವೀಕರಿಸಿದರೆ ಸಂತೃಪ್ತ ಬದುಕು ಸಾಧ್ಯ. ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣವಾದ ಬಳಿಕ ನಡೆಯುತ್ತಿರುವ ಪ್ರಥಮ ರಾಮನವಮಿ, ಪ್ರಥಮ ಹನುಮ ಜಯಂತಿ ಆಚರಿಸಲಾಗುತ್ತಿದೆ. ಭಜನೆ, ಸಂಕೀರ್ತನೆಯ ಮೂಲಕ ಆತ್ಮಾನಂದ ಪಡೆಯಬಹುದು. ಸಮಾಜಮುಖಿಯಾಗಿದ್ದವನಿಗೆ ಮಾತ್ರ ಆತ್ಮಾನಂದ ಪಡೆಯುವ ಹಕ್ಕಿದೆ. ಸಂಸಾರದ ಒಳಗೆ ಅರಿವಿನ ಅಗತ್ಯವಿದ್ದು, ಆ ಮೂಲಕ ಬದುಕನ್ನು ಉತ್ತಮವಾಗಿಸಬಹುದು. ಸೇವಾ ಮನೋಭಾವದಿಂದ ಸಹಕಾರ ತತ್ತ÷್ವದಲ್ಲಿ ಮುನ್ನಡೆದಾಗ ಯಶಸ್ಸು ನಿಶ್ಚಿತ. ಧರ್ಮಾನುಷ್ಠಾನದ ನಡೆಯಲ್ಲಿ ಸಾಗಿದಾಗ ಆತ್ಮೋನ್ನತಿ ಪಡೆಯಬಹುದಾಗಿದೆ. ಪ್ರತಿಯೊಬ್ಬರೂ ಆನಂದವನ್ನು ತನ್ನೊಳಗೆ ಹುಡುಕಬೇಕು. ಯೋಗ, ಧ್ಯಾನದಿಂದ ದೇವನೊಲಿಯುತ್ತಾನೆ. ಆನಂದದ ಸೆಲೆ ಆದ್ಯಾತ್ಮದಲ್ಲಿ ಅಡಗಿದೆ. ಉಪಕಾರ ಮಾಡಿಕೊಂಡು ಬದುಕುವುದೇ ದೊಡ್ಡ ಸಂಪತ್ತು. ಎಲ್ಲರೂ ಜನಪರವಾಗಿ ತೊಡಗಿಕೊಳ್ಳಬೇಕು. ತ್ಯಾಗ ಸೇವೆ ಜೊತೆಯಾದಾಗ ಯಶಸ್ಸು ಸಾಧ್ಯ” ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವನಂದ ಸ್ವಾಮೀಜಿಯವರು ಹನುಮಜ್ಜಯಂತಿಯ ಸಂದೇಶ ನೀಡಿದರು.

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಹನುಮಜ್ಜಯಂತಿ ಮಹೋತ್ಸವ-ಶ್ರೀಮದ್ರಾಮಾಯಣ ಮಹಾಯಜ್ಞದ ಅಂಗವಾಗಿ ಜರಗಿದ ಧರ್ಮಸಭೆಯಲ್ಲಿ ದತ್ತಪ್ರಕಾಶ ದ್ವೆöÊಮಾಸಿಕ ಪತ್ರಿಕೆಯ 25ನೇ ವರ್ಷದ ಪ್ರಥಮ ಸಂಚಿಕೆ ಬಿಡುಗಡೆಗೊಳಿಸಿದ ಪೂಜ್ಯ ಶ್ರೀಗಳವರು “ನಾವೀಗ ಮತದಾನದ ಸಂಭ್ರಮದ ಕ್ಷಣದಲ್ಲಿದ್ದೇವೆ. ದೇಶ ಬಲಿಷ್ಠವಾಗಲು ರಾಷ್ಟç ಪ್ರೇಮ ಅಗತ್ಯ. ರಾಷ್ಟç ಉಳಿದರೆ ಮಾತ್ರ ಧರ್ಮಾನುಷ್ಠಾನ ಸಾಧ್ಯ. ದೇಶವನ್ನು ಉಳಿಸುವ ಕಾರ್ಯವಾಗಬೇಕು. ರಾಷ್ಟçವನ್ನು ಸಬಲೀಕರಣ ಮಾಡುವ ಬಲಿಷ್ಠ ನಾಯಕನ ಆಯ್ಕೆ ನಮ್ಮದಾಗಬೇಕು. ಮತವು ತಮದಿಂದ ಕೂಡಿರಬಾರದು. ಅರಿವಿನೊಂದಿಗೆ ನಮ್ಮ ಮತದಾನವಾಗಬೇಕು. ಮತದಾನ ಅಮೂಲ್ಯವಾದದ್ದು. ಎಲ್ಲರೂ ಮತದಾನ ಮಾಡಿ ದೇಶದ ಹಿತ ಕಾಪಾಡುವ, ಸಮರ್ಥ, ಯೋಗ್ಯ ನಾಯಕನನ್ನು ಆಯ್ಕೆ ಮಾಡಿ” ಎಂದರು.
ಸಮಾರAಭದಲ್ಲಿ ಮುಂಬೈ ಉದ್ಯಮಿಗಳಾದ ವಾಮಯ್ಯ ಬಿ.ಶೆಟ್ಟಿ, ಚೆಂಬೂರು, ರಮೇಶ್ ಶೆಟ್ಟಿ ಸಿ.ಬಿ.ಡಿ., ಒಡಿಯೂರು ಶ್ರೀ ಗುರುದೇವ ಸೆವಾ ಬಳಗ, ಮುಂಬೈ ಘಟಕದ ಅಧ್ಯಕ್ಷ ದಾಮೋದರ ಎಸ್.ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕೆ. ಶೆಟ್ಟಿ ಪೇಟೆಮನೆ, ಒಡಿಯೂರು ಶ್ರೀ ಯುವ ಸೇವಾ ಬಳಗ, ಮುಂಬೈ ಘಟಕಾಧ್ಯಕ್ಷ ಡಾ. ಅದಿಪ್ ಕೆ. ಶೆಟ್ಟಿ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸಹಕಾರಿ ರತ್ನ ಎ. ಸುರೇಶ್ ರೈ ಮೊದಲಾದವರು ಉಪಸ್ಥಿತರಿದ್ದರು.
ಯಜ್ಞದ ಮಂಡಲದಲ್ಲಿ ಹನುಮಂತನ ವಿಶೇಷ ರಂಗೋಲಿ ಬಿಡಿಸಿದ ಶಿವಪ್ರಸಾದ್ ಹೊಳ್ಳ ಬಾಯಾರು ಇವರನ್ನು ಪೂಜ್ಯ ಶ್ರೀಗಳವರು ಪ್ರಸಾದ ಮಂತ್ರಾಕ್ಷತೆ ನೀಡಿ ಹರಸಿ ಗೌರವಿಸಿದರು.
ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಮುಖ್ಯಶಿಕ್ಷಕಿ ಶ್ರೀಮತಿ ರೇಣುಕಾ ಎಸ್.ರೈ ಆಶಯಗೀತೆ ಹಾಡಿದರು. ಸಂತೋಷ್ ಭಂಡಾರಿ ವಂದಿಸಿದರು. ಒಡಿಯೂರುದ ತುಳುಕೂಟದ ಅಧ್ಯಕ್ಷ ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು
ಪ್ರಾತಃಕಾಲ ಶ್ರೀ ರಾಮನವಮಿಯಿಂದ ಮೊದಲ್ಗೊಂಡ ಅಖಂಡ ಭಗವನ್ನಾಮಸಂಕೀರ್ತನೆ ಮಂಗಲಾಚರಣೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ಜರಗಿತು. ಬೆಳಿಗ್ಗೆ ಗಂಟೆ 9ಕ್ಕೆ ವೇ|ಮೂ| ಕುರೋಮೂಲೆ ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಶ್ರೀಮದ್ರಾಮಾಯಣ ಮಹಾಯಜ್ಞ ಆರಂಭಗೊAಡಿತು. ಬಳಿಕ ನಾಗದೇವರಿಗೆ ಪಂಚಾಮೃತ ಅಭಿಷೇಕ, ನಾಗ ತಂಬಿಲ, ಮಧ್ಯಾಹ್ನ ಮಹಾಯಜ್ಞದ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ರಾತ್ರಿ ಸಾಮೂಹಿಕ ಶ್ರೀಹನುಮದ್ವçತಪೂಜೆ, ರಂಗಪೂಜೆ, ವಿಶೇಷ ಬೆಳ್ಳಿ ರಥೋತ್ಸವ, ಉಯ್ಯಾಲೆ ಸೇವೆ ಸಂಪನ್ನಗೊAಡಿತು.