30.9 C
Mumbai
June 8, 2026
Mumbai News Kannada
ಸುದ್ದಿ

ಮಾತೃಭೂಮಿ  ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ. ಯಿಂದ ಮುಂಬೈ ಬಂಟರ ಸಂಘದ ನೂತನ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಅವರಿಗೆ ಅಭಿನಂದನೆ.





ಚಿತ್ರ ವರದಿ : ದಿನೇಶ್ ಕುಲಾಲ್

——————————

ಮುಂಬೈ: ಬಂಟರ ಸಂಘ ಮುಂಬೈ  ಯ ಸಂಚಾಲಿತ ಮಾತೃಭೂಮಿ  ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ನ ಗೌರವ  ಕಾರ್ಯದರ್ಶಿಯಗಿ ಕಾರ್ಯನಿರ್ವಹಿಸಿಕೊಂಡಿರುವ ಪ್ರವೀಣ್ ಬೋಜ ಶೆಟ್ಟಿ ಅವರು ಮುಂಬೈ ಬಂಟರ ಸಂಘದ ನೂತನ ಅಧ್ಯಕ್ಷರಾಗಿ  ಆಯ್ಕೆಗೊಂಡಿದ್ದು .ಅವರನ್ನು ನವಂಬರ್ 27ರಂದು ಕುರ್ಲಾ ಪೂರ್ವದ ಬಂಟರ ಭವನದ ಅನೆಕ್ಸ್ ಸಂಕಿರಣದಲ್ಲಿರುವಮಾತೃಭೂಮಿಯ ಕಚೇರಿಯಲ್ಲಿ ನಡೆದ  ಆಡಳಿತ ಸಭೆಯಲ್ಲಿ ಸೊಸೈಟಿ ಯ ಕಾರ್ಯಾಧ್ಯಕ್ಷರಾದ ಉಳ್ತೂರು ಮೋಹನದಾಸ್ ಶೆಟ್ಟಿ ಯವರು ಮತ್ತು ಆಡಳಿತ ಪದಾಧಿಕಾರಿಗಳು ಗೌರವಿಸಿದರು.

ಗೌರವವನ್ನು  ಸ್ವೀಕರಿಸಿದ ಪ್ರವೀಣ್ ಬೋಜ ಶೆಟ್ಟಿ ಕೃತಜ್ಞತೆ ಸಲ್ಲಿಸುತ್ತಾ ಅಧ್ಯಕ್ಷನಾಗಿ ಪ್ರಥಮ ಗೌರವ ಇದಾಗಿದೆ . ಈ ಗೌರವ ಮಾತೃಭೂಮಿ  ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಸಲ್ಲುತ್ತದೆ. ನನ್ನ ಮುಂದಿನ ಸೇವ ಕಾರ್ಯಗಳಿಗೆ ತಾವೆಲ್ಲರೂ ಸಹಕರಿಸಬೇಕು ಎಂದು ನುಡಿದರು.

ಸೊಸೈಟಿ ಯ ಕಾರ್ಯಾಧ್ಯಕ್ಷರಾದ ಉಳ್ತೂರು ಮೋಹನದಾಸ್ ಶೆಟ್ಟಿ ಯವರು ಪ್ರವೀಣ್ ಭೋಜ ಶೆಟ್ಟಿ ಅವರು ಮಾತೃಭೂಮಿಗೆ ನೀಡಿದ ಸೇವಾ ಕಾರ್ಯಗಳನ್ನು ನೆನಪಿಸಿಕೊಂಡು ಬಂಟರ ಸಂಘದ ಮೂಲಕ ಸಮಾಜದ ಉತ್ತಮ ಸೇವಾ ಕಾರ್ಯಗಳು ನಡೆಯಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸೊಸೈಟಿಯ ಉಪ ಕಾರ್ಯ ಧ್ಯಕ್ಷ ಡಾ. ಆರ್ ಕೆ ಶೆಟ್ಟಿ. ಕೋಶಧಿಕಾರಿ ಸಿ ಎ ಹರೀಶ್ ಡಿ ಶೆಟ್ಟಿ. ನಿರ್ದೇಶಕರುಗಳಾದ ಮಹೇಶ್ ಎಸ್ ಶೆಟ್ಟಿ .ಶಶಿಧರ್ ಕೆ ಶೆಟ್ಟಿ ಇನ್ನಂಜೆ .ಸಿಎ ಜಗದೀಶ್ ಬಿ ಶೆಟ್ಟಿ .ಕಿಶೋರ್ ಕುಮಾರ್ ಕುತ್ಯಾರ್. ಸುನಂದ ಡಿ ಶೆಟ್ಟಿ. ಸಿಎ ರಾಜಶ್ರೀ ಜಿ ಶೆಟ್ಟಿ. ಹಿರಿಯ ಪ್ರಬಂಧಕಿ ಮಲ್ಲಿಕಾ ಪಿ ಶೆಟ್ಟಿ. ಪ್ರಬಂಧಕಿ ಶಶಿಕಲಾ ಎಸ್ ಶೆಟ್ಟಿ .ಮ್ಯಾನೇಜರ್ ಅಡ್ಮಿನ್ ಮಹೇಂದ್ರ ಸಕ್ಪಾಲ್ ಹಾಗೂ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಉಪಸ್ಥರಿದ್ದರು



Related posts

ಕಲಾಪೋಷಕ .ಉದ್ಯಮಿ ಕೆ.ಕೆ. ಶೆಟ್ಟಿ ಅಹ್ಮದ್ ನಗರರಿಗೆ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ.

Mumbai News Desk

ಯಕ್ಷಧ್ರುವ ಪಟ್ಲ ಫೌಂಡೇಶನ್ ದಶಮಾನೋತ್ಸವದ ಸಮಾಲೋಚನಾ ಸಭೆ

Mumbai News Desk

ಕುಕ್ಕಳ ಶ್ರೇಯಸ್ ಪೂಜಾರಿಗೆ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ

Mumbai News Desk

ಸೌದಿ ಅರೇಬಿಯಾದ ಮದೀನಾ ಬಳಿ ಬಸ್-ಟ್ಯಾಂಕರ್ ಡಿಕ್ಕಿ: 42 ಭಾರತೀಯರು ಸಾವು

Mumbai News Desk

ವಿಶ್ವನಾಥ ಶೆಟ್ಟಿ ಇನ್ನಂಜೆ ವಿಧಿವಶ

Mumbai News Desk

ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಸತೀಶ್ ಕುಂಪಲ ಆಯ್ಕೆ.

Mumbai News Desk