25 C
Karnataka
April 5, 2025
ಮುಂಬಯಿ

ಡೊಂಬಿವಲಿ ಮಂಜುನಾಥ ವಿದ್ಯಾಲಯ ಕನ್ನಡ, ಆಂಗ್ಲ ಮಾಧ್ಯಮ ಶಾಲೆ ಎಸ್. ಎಸ್. ಸಿ. ಪರೀಕ್ಷೆಯಲ್ಲಿ ಶೇ.100 ಫಲಿತಾಂಶ



ಈ ಬಾರಿಯ ಮಹಾರಾಷ್ಟ್ರ ಎಸ್ ಎಸ್ ಸಿ ಬೋರ್ಡ್ ಪರೀಕ್ಷೆಯಲ್ಲಿ ಹೊರನಾಡ ಕನ್ನಡಿಗರ ಹೆಮ್ಮೆಯ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಡೊಂಬಿವಲಿ ಕರ್ನಾಟಕ ಸಂಘ ಸಂಚಾಲಿತ ಮಂಜುನಾಥ ವಿದ್ಯಾಲಯ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಗಳಿಗೆ ಉತ್ತಮ ಫಲಿತಾಂಶ ಬಂದಿದೆ

ಕನ್ನಡ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ

ಕನ್ನಡ ಮಾಧ್ಯಮದಲ್ಲಿ ಒಟ್ಟು 21 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ 3 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ,  12 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 6 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಕಳೆದ 5 ವರ್ಷಗಳಿಂದ ಕನ್ನಡ ಮಾಧ್ಯಮದ ಫಲಿತಾಂಶ ಶೇ.100 ಲಭಿಸುತ್ತಿರುವುದು ವಿಶೇಷತೆಯಾಗಿದೆ. ಕನ್ನಡ ಮಾಧ್ಯಮದಲ್ಲಿ  ಶೇ. 83.20 ಅಂಕಗಳೊಂದಿಗೆ ಅಮಿತ್ ತುಕರಾಮ್ ರಾಥೋಡ್  ಪ್ರಥಮ,   ನಂದಿನಿ ಸಂಜೀವ್ ರಾಠೋಡ್ ಶೇ. 82.60 ಅಂಕಗಳೊಂದಿಗೆ ದ್ವಿತೀಯ,   ರವಿ ರಾಕೇಶ್ ಕರ್ಕಲ್ ಶೇ. 82.60 ಅಂಕಗಳೊಂದಿಗೆ ತೃತೀಯ ಸ್ಥಾನ ಗಳಿಸಿದ್ದಾರೆ.

*ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ*

ಆಂಗ್ಲ ಮಾಧ್ಯಮದಲ್ಲಿ ಒಟ್ಟು 135 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು  71 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ,  56 ವಿದ್ಯಾ ರ್ಥಿಗಳು ಪ್ರಥಮ ಶ್ರೇಣಿ ಹಾಗೂ  8 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಕಳೆದ 14 ವರ್ಷಗಳಿಂದ ಆಂಗ್ಲ ಮಾಧ್ಯಮ ಶಾಲೆಯ ಫಲಿತಾಂಶ ಶೇ 100 ಲಭಿಸುತ್ತಿರುವುದು ಪ್ರಶಂಸನೀಯ. ಆಂಗ್ಲ ಮಾಧ್ಯಮದಲ್ಲಿ       ಶೇ  95.80 ಅಂಕಗಳೊಂದಿಗೆ ಪ್ರಣೀತ ಕೈಲಾಶ್ ಕುರ್ಹಡೆ ಪ್ರಥಮ, ಶೇ 95.00 ಅಂಕಗಳೊಂದಿಗೆ ಗೌರವ್ ಸಂಜಯ್ ಗುಪ್ತ ದ್ವಿತೀಯ, ಹಾಗೂ ಶೇ 94.80 ಅಂಕಗಳೊಂದಿಗೆ ಪ್ರಣವ್ ಕೈಲಾಶ್ ಕುರ್ಹಡೆ ತೃತೀಯ ಸ್ಥಾನ ಪಡೆದಿದ್ದಾರೆ.

ತಮ್ಮ ಸಾಧನೆಯ ಮೂಲಕ ಶಾಲೆಯ ಕೀರ್ತಿಯನ್ನು ಉತ್ತುಂಗ ಶಿಖರಕ್ಕೇರಿಸಿದ ವಿದ್ಯಾರ್ಥಿಗಳಿಗೆ, ಅವರ ಯಶಸ್ಸಿಗೆ ಕಾರಣರಾದ ಮುಖ್ಯ ಶಿಕ್ಷಕರಾದ ಸುರೇಖಾ ಪಂಡಿತ್, ಪ್ರಭು ಕೋತಾಲಿ ಹಾಗೂ ಶಿಕ್ಷಕ/ಶಿಕ್ಷಕಿ ವೃಂದ, ಪಾಲಕರು, ಶಿಕ್ಷಕೇತರ ಸಿಬ್ಬಂದಿಯನ್ನು ಡೊಂಬಿವಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸುಕುಮಾರ ಎನ್ ಶೆಟ್ಟಿ , ಉಪಾಧ್ಯಕ್ಷರಾದ ಲೋಕನಾಥ ಎ ಶೆಟ್ಟಿ, ಕಾರ್ಯಾಧ್ಯಕ್ಷರಾದ ಡಾ! ಇಂದ್ರಾಳಿ ದಿವಾಕರ್ ಟಿ ಶೆಟ್ಟಿ ಉಪಕಾರ್ಯಾಧ್ಯಕ್ಷರಾದ ದೇವದಾಸ ಎಲ್ ಕುಲಾಲ್, ಗೌರವ ಕಾರ್ಯದರ್ಶಿ ಪ್ರೊ! ಅಜಿತ್  ಬಿ ಉಮ್ರಾಣಿ, ಜತೆ ಕಾರ್ಯದರ್ಶಿ ದಿನೇಶ್ ಬಿ ಕುಡ್ವ, ಕೋಶಾಧಿಕಾರಿ ತಾರಾನಾಥ ಸೂರು ಅಮೀನ್ , ಜತೆ ಕೋಶಾಧಿಕಾರಿ ವಿಮಲಾ ವಿ ಶೆಟ್ಟಿ ಹಾಗೂ ಕಾರ್ಯಕಾರಿ ಮಂಡಳಿಯ ಸರ್ವ ಸದಸ್ಯರು ಅಭಿನಂದಿಸಿದ್ದಾರೆ.

1st Rank -ಕು. ಪ್ರಣೀತ  ಕೈಲಾಸ್ ಕುಹರ್ಡೆ 95.80% ಮಂಜುನಾಥ ವಿದ್ಯಾಲಯ ಅಂಗ್ಲ ಮಾಧ್ಯಮ

2 nd Rank -ಗುರವ್ ಗುಪ್ತ 95.00 % ಮಂಜುನಾಥ ವಿದ್ಯಾಲಯ ಅಂಗ್ಲ ಮಾಧ್ಯಮ

3rd Rank -ಪ್ರಣವ್ ಕೈಲಾಶ್ ಕುರ್ಹಡೆ 94.80% ಮಂಜುನಾಥ ವಿದ್ಯಾಲಯ ಅಂಗ್ಲ ಮಾಧ್ಯಮ

Related posts

ಮಲಾಡ್ ಶ್ರಿ ವರಮಹಾಲಕ್ಷ್ಮಿ ಪೂಜಾ ಸಮಿತಿಯಿಂದ ಹಳದಿ ಕುಂಕುಮ

Mumbai News Desk

ಬೊರಿವಲಿ ದೇವುಲ್ಪಾಡಾದ ಶ್ರೀಬ್ರಹ್ಮ ಬೈದರ್ಕಳ ಗರೋಡಿ ವಾರ್ಷಿಕ ಮಹಾಪೂಜೆ, ಬ್ರಹ್ಮ ಬೈದರ್ಕಳ ನೇಮೋತ್ಸವ ಭಕ್ತಿ ಸಂಭ್ರಮದೊಂದಿಗೆ ಸಂಪನ್ನ,

Mumbai News Desk

ಗೋರೆಗಾಂವ್ ಕರ್ನಾಟಕ ಸಂಘದ 66ನೇ ಸಂಸ್ಥಾಪನಾ ದಿನಾಚರಣೆ.

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಸಮೀಕ್ಷಾ ಪ್ರಶಾಂತ್ ಬಾಗಲ್ ಗೆ ಶೇ 86.4 ಅಂಕ.

Mumbai News Desk

ಮೀರಾರೋಡಿನಲ್ಲಿ ಗೆಜ್ಜೆ ಗಿರಿ ಮೇಳದವರಿಂದ……ಎಡ್ಮೂರ ಮುಗೇರ ಸತ್ಯೊಲು…ಯಕ್ಷಗಾನ ಪ್ರದರ್ಶನ.

Mumbai News Desk

ಕನ್ನಡ ಸಂಘ, ಸಯನ್ ಇದರ ಆಟಿಡೊಂಜಿ ದಿನ

Mumbai News Desk