
ಬಂಟರ ಸಂಘ,ಜೋಗೇಶ್ವರಿ- ದಹಿಸರ್ ಪ್ರಾದೇಶಿಕ ವಿಭಾಗದ ಮಹಿಳಾ ವಿಭಾಗದ ವತಿಯಿಂದ , ಜೂನ್ 5 ರಂದು ವಿಶ್ವ ಪರ್ಯಾವರಣ ದಿನವನ್ನು ಬೊರಿವಲಿ ಪಶ್ಚಿಮದ ಆರತಿ ಶೆಟ್ಟಿ ಇಂಟರ್ ನ್ಯಾಶನಲ್ ಸ್ಕೂಲಿನಲ್ಲಿ ಪ್ರಥಮ ಬ್ಯಾಚ್ ನ ವಿದ್ಯಾರ್ಥಿ ಗಳ ಜತೆ ಆಚರಿಸಿತು.

ಅಂದು ವಿಶೇಷ ಅತಿಥಿಯಾಗಿ ಮಾಜಿ ಕೊರ್ಪರೇಟರ್ ತೇಜಸ್ವಿ ಗೋಸಾಲ್ಕರ್, ಸ್ಕೂಲಿನ ಕಾರ್ಯಕಾರಿ ಸಮಿತಿ, ಹಾಗೂ ಸಿಬ್ಬಂದಿಗಳು ಉಪಸ್ಥಿತಿ ತರಿದ್ದರು.
ಪರ್ಯಾವರಣ ದಿನಾಚರಣೆಯ ನಿಮಿತ್ತ ಗಿಡಗಳನ್ನು ಕಾಣಿಕೆಯಾಗಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುನಿತಾ ಎನ್. ಹೆಗ್ಡೆ, ಮತ್ತಿತರ ಪದಾಧಿಕಾರಿಗಳು ಹಂಚಿದರು.
ಈ ಸಂದರ್ಭದಲ್ಲಿ ಮಹಿಳಾ ವಿಭಾಗದ ಸಂಚಾಲಕಿ ಶೈಲಜಾ ಎ. ಶೆಟ್ಟಿ, ಮುಖ್ಯ ಸಲಹೆಗಾರರಾದ , ಡಾಕ್ಟರ್ ಪಿ ವಿ ಶೆಟ್ಟಿ. ಮುಂಡಪ್ಪ ಎಸ್. ಪಯ್ಯಡೆ, ನಿತ್ಯಾನಂದ ಹೆಗ್ಡೆ, , ರವೀಂದ್ರ ಎಸ್. ಶೆಟ್ಟಿ ಮತ್ತು ಎರ್ಮಾಳು ಹರೀಶ್ ಶೆಟ್ಟಿ, ಅಶೋಕ್ ಶೆಟ್ಟಿ ಎಲ್ಐಸಿ. ಹಾಗೂ ಮಹಿಳಾ ವಿಭಾಗದ ಪದಾಧಿಕಾರಿಗಳು ಮತ್ತು ಸದಸ್ಯರು ಪಾಲ್ಗೊಂಡಿದ್ದರು .