25.2 C
Karnataka
April 6, 2025
ಮುಂಬಯಿ

ಬಂಟರ ಸಂಘ ಮುಂಬಯಿ – ವಸಯಿ ಡಹಣು ಪ್ರಾದೇಶಿಕ ಸಮಿತಿಯ ವತಿಯಿಂದ ವಿಶ್ವ ಯೋಗ ದಿನಾಚರಣೆ. 



ಯೋಗದಿಂದ ಭಾರತದ ಭವ್ಯ ಸಂಸ್ಕೃತಿಯು ವಿಶ್ವಕ್ಕೆ ಪರಿಚಯವಾಗುತ್ತಿದೆ – ಡಾ. ಆರ್. ಕೆ. ಶೆಟ್ಟಿ

ವಸಯಿ ಜೂ 23. ಅನಾದಿ ಕಾಲದಿಂದ ಸಾಧು ಸಂತರು ಯೋಗವನ್ನು ನಡೆಸಿಕೊಂಡು ಬರುತ್ತಿದ್ದು, 2014ನೇ ಇಸವಿಯಲ್ಲಿ ಶ್ರೀ ನರೇಂದ್ರ ಮೋದಿಜಿಯವರು ದೇಶದ ಪ್ರಧಾನಿ ಆದಾಗ ಯೋಗವನ್ನು ವಿಶ್ವಕ್ಕೆ ಪರಿಚಯಿಸುವ ಕೆಲಸವನ್ನು ಪ್ರಾರಂಭಿಸಿದರು. ಪ್ರತಿನಿತ್ಯ ಯೋಗವನ್ನು ಮಾಡುವುದರಿಂದ ಮನುಷ್ಯನ ಆರೋಗ್ಯಕ್ಕೆ ಯಾವ ರೀತಿಯಾದ ಪರಿಣಾಮವನ್ನು ಬೀರುತ್ತದೆ ಎಂಬ ವಿಷಯವನ್ನು ಮನಗಂಡು ವಿಶ್ವ ಆರೋಗ್ಯ ಸಂಸ್ಥೆಯು ಜೂನ್ 21 ನ್ನು ವಿಶ್ವ ಯೋಗ ದಿನಾಚರಣೆಯನ್ನಾಗಿ ಘೋಷಿಸಿ ಇಂದು ವಿಶ್ವದ ಹೆಚ್ಚಿನ ದೇಶಗಳು ಅತ್ಯಂತ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದೆ. ಈ ಮೂಲಕ ಭವ್ಯ ಭಾರತದ ಸಂಸ್ಕೃತಿ, ಆಚಾರ ವಿಚಾರಗಳು ಯೋಗದ ಮೂಲಕ ವಿಶ್ವದೆಲ್ಲೆಡೆ ಪರಿಚಯವಾಗುತ್ತಿರುವುದು ನಮಗೆಲ್ಲರಿಗೂ ಹೆಮ್ಮೆ ಹಾಗೂ ಅಭಿಮಾನ. ಜಾಗತಿಕ ಮಟ್ಟದ ಸಂಭ್ರಮದಲ್ಲಿ ನಾವೆಲ್ಲರೂ ಅತ್ಯಂತ ಸಡಗರದಿಂದ ಭಾಗವಹಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಯೋಗವು ಕೇವಲ ಯೋಗ ದಿನಾಚರಣೆಗೆ ಸೀಮಿತವಾಗಿರದೆ ನಿರಂತರವಾಗಿ ನಡೆಸಿಕೊಂಡು ಬಂದಲ್ಲಿ ನಮ್ಮ ಆರೋಗ್ಯಕ್ಕೆ ಉತ್ತಮ ಎಂದು ಬಂಟರ ಸಂಘ ಮುಂಬಯಿಯ ಗೌರವ ಪ್ರಧಾನ ಕಾರ್ಯದರ್ಶಿಗಳಾದ ಡಾ. ಆರ್ ಕೆ ಶೆಟ್ಟಿಯವರು ನುಡಿದರು,

 ಬಂಟರ ಸಂಘ ಮುಂಬಯಿ ವಸಯಿ ಡಹಣು ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ಜೂನ್ 21ರ ಶುಕ್ರವಾರ ಸಂಜೆ 5ಕ್ಕೆ ಸರಿಯಾಗಿ ರಿಜೆನ್ಸಿ ಬಾಂಕ್ವೆಟ್ ಸಭಾಂಗಣ ನಾಲಾಸೋಪಾರ ಪೂರ್ವದಲ್ಲಿ ಆಯೋಜಿಸಿದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಮಂಜುನಾಥ್ ಎನ್ ಶೆಟ್ಟಿ ಕೊಡ್ಲಾಡಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ಯೋಗ ದಿನಾಚರಣೆಯಂತಹ ಸಾಮಾನ್ಯ ಕಾರ್ಯಕ್ರಮಕ್ಕೆ ಬಂಟರ ಸಂಘ ಮುಂಬಯಿಯ ಪ್ರತಿನಿಧಿಯಾಗಿ ಡಾ. ಆರ್ ಕೆ ಶೆಟ್ಟಿಯವರು ಆಗಮಿಸಿದ್ದು ಬಹಳಷ್ಟು ಸಂತಸ ತಂದಿದೆ. ಡಾ. ಆರ್ ಕೆ ಶೆಟ್ಟಿಯವರ ವೃತ್ತಿ ಹಾಗೂ ಪ್ರವೃತ್ತಿ ಬದುಕಿನ ಸಾಧನೆಗಳು ನಮಗೆಲ್ಲರಿಗೂ ಸ್ಪೂರ್ತಿಯಾಗಿದೆ ಎಂದು ನುಡಿದರು,

ವಿಶ್ವ ಯೋಗ ದಿನಾಚರಣೆಯ ಸಂಯೋಜಕಿ ಹಾಗೂ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ  ಉಮಾ ಸತೀಶ್ ಶೆಟ್ಟಿಯವರು ಮಾತನಾಡಿ ಆರ್ಟ್ ಆಫ್ ಲಿವಿಂಗ್ ಮೂಲಕ ಯೋಗವನ್ನು ಕಲಿತಿದ್ದು ಶಾರೀರಿಕವಾಗಿ ಬಹಳಷ್ಟು ಪ್ರಯೋಜನವಾಗಿದೆ. ಪ್ರಾದೇಶಿಕ ಸಮಿತಿಯಲ್ಲಿ ಯೋಗವು ನಿರಂತರವಾಗಿ ಸಾಗಲಿ ಎಂದು ಆಶಿಸಿದರು. 

ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಕಾರಿ ಸಮಿತಿ ಸದಸ್ಯೆಯರು ಉಪಸ್ಥಿತರಿದ್ದ ವಿಶ್ವ ಯೋಗ ದಿನಾಚರಣೆಯಲ್ಲಿ ಆರ್ಟ್ ಆಫ್ ಲಿವಿಂಗ್ ನ ಪ್ರತಿನಿಧಿ ಶ್ರೀ ರಚೀತ್ ಅವರು ಯೋಗಾಭ್ಯಾಸವನ್ನು ನಡೆಸಿಕೊಂಡ ಕೊಟ್ಟರು ,

 ಈ ಕಾರ್ಯಕ್ರಮದಲ್ಲಿ ಪ್ರಾದೇಶಿಕ ಸಮಿತಿಯ ಉಪ ಕಾರ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಕಣಂಜಾರ್,  ಕಾರ್ಯದರ್ಶಿ ಜಗನ್ನಾಥ್ ಡಿ ಶೆಟ್ಟಿ  ಪಳ್ಳಿ, ಕೋಶಾಧಿಕಾರಿ ವಿಜಯ್ ಎಮ್ ಶೆಟ್ಟಿ, ವೈದ್ಯಕೀಯ ಸಮಿತಿ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿ ನಂದಿಕೂರು, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷೆ  ಜಯ ಅಶೋಕ್ ಶೆಟ್ಟಿ, ಮಹಿಳಾ ವಿಭಾಗ ಉಪ ಕಾರ್ಯಾಧ್ಯಕ್ಷೆ  ಅರುಣಾ ಎ ಶೆಟ್ಟಿ, ಕಾರ್ಯದರ್ಶಿ  ಸಂಧ್ಯಾ ವಿ ಶೆಟ್ಟಿ, ಕೋಶಾಧಿಕಾರಿ  ಜಯಶ್ರೀ ವಿ ಶೆಟ್ಟಿ, ಜೊತೆ ಕಾರ್ಯದರ್ಶಿ  ಪ್ರಭಾವತಿ ಎಸ್ ಶೆಟ್ಟಿ, ಜೊತೆ ಕೋಶಾಧಿಕಾರಿ  ಸಂಧ್ಯಾ ಯು ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯೆಯರು ಉಪಸ್ಥಿತರಿದ್ದರು. ಔಪಚಾರಿಕವಾಗಿ ನಡೆದ ಸಭಾ ಕಾರ್ಯಕ್ರಮವನ್ನು ಪ್ರಾದೇಶಿಕ ಸಮಿತಿಯ ಕಾರ್ಯಕ್ರಮ ಸಮಿತಿ ಕಾರ್ಯಾಧ್ಯಕ್ಷ ವಿಜಯ್ ಪಿ ಶೆಟ್ಟಿ ಕುತ್ತೆತ್ತೂರು ನಿರೂಪಿಸಿ ವಂದಿಸಿದರೆ, ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ಸುಪ್ರೀತ್ ಶೆಟ್ಟಿ ನೀರೆ  ಸಹಕರಿಸಿದರು. 

ಕಾರ್ಯಕ್ರಮದ ಕೊನೆಯಲ್ಲಿ ಲಘು ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ ತುಳುಕುಟ ಫೌಂಡೇಶನ್ ನಾಲಾಸಾಪೂರ್ ಗೌರವಾಧ್ಯಕ್ಷ. ಓ. ಪಿ. ಪೂಜಾರಿ, ಮತ್ತಿತರರು ಪಾಲ್ಗೊಂಡಿದ್ದರು,

Related posts

ಮಲಾಡ್ ಮಹತೋಭಾರ ಶ್ರೀ ಶನೀಶ್ವರ ದೇವಸ್ಥಾನ ಸುವರ್ಣ ಮಹೋತ್ಸವ ನಿಮಿತ್ತ ಪೂರ್ವಬಾವಿ ಸಭೆ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ರೋಷನ್ ಬಾಲಕೃಷ್ಣ ಮೂಲ್ಯ ಗೆ ಶೇ 84.60 ಅಂಕ.

Mumbai News Desk

ಕುಲಾಲ ಸಂಘ ಮುಂಬಯಿ ನವಿ ಮುಂಬಯಿ ಸ್ಥಳೀಯ ಸಮಿತಿಯ ಮಹಿಳಾ ವಿಭಾಗದವತಿಯಿಂದ ಅರಸಿನ ಕುಂಕುಮ,

Mumbai News Desk

ತುಳು ಸಂಘ ಬೊರಿವಲಿ, ಮಹಿಳಾ ವಿಭಾಗದಿಂದ ಅರಸಿನ ಕುಂಕುಮ

Mumbai News Desk

ಶ್ರೀ ಗುರು ಸದ್ಗುರು ಅಯ್ಯಪ್ಪ ಭಕ್ತವೃಂದ ಟ್ರಸ್ಟ್ ಮಲಾಡ್28ನೇ ವರ್ಷದ ಅಯ್ಯಪ್ಪ ಮಹಾಪೂಜೆ ಸಂಪನ್ನ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಮೇಘನಾ ಉಮೇಶ್ ಪೂಜಾರಿ ಗೆ ಶೇ 90.40 ಅಂಕ.

Mumbai News Desk