ಶ್ರೀ ನಿತ್ಯಾನಂದ ಸೇವಾ ಸಂಸ್ಥೆ ಮೀರಾಭಾಯಂದರ್ ವತಿಯಿಂದ ಗುರುಪೂರ್ಣಿಮೆ ಉತ್ಸವವನ್ನು ಜುಂ.21ರಂದು ಭಾಯಂದರ್ ಪೂರ್ವದ ಗೋಲ್ಡನ್ ನೆಸ್ಟ್ ಸರ್ಕಲ್ ಸಮೀಪದ, ಭಾಯಂದರ್ ಫಾಟಕ್ ರಸ್ತೆಯಲ್ಲಿರುವ ಕ್ರೌನ್ ಬಿಜಿನೆಸ್ ಹೋಟೇಲಿನ ಅಶ್ವಿನಿ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಲಿದೆ.
ಅಂದು ಬೆಳಗ್ಗೆ 10 ಗಂಟೆಯಿಂದ ಮೀರಾ ಭಾಯಂದರ್ ಪರಿಸರದ ವಿವಿಧ ಭಜನಾ ಮಂಡಳಿಗಳಿಂದ ಭಜನೆ ನಡೆಯಲಿದೆ. ಮದ್ಯಾಹ್ನ ಗಂಟೆ 12.30ಕ್ಕೆ ಗುರು ಪೂಜೆ, ಮಹಾ ಆರತಿ ನಡೆಯಲಿದ್ದು ತದನಂತರ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಗುರು ಭಕ್ತರು ಭಾಗಿಯಾಗಿ ಉತ್ಸವವನ್ನು ಚಂದಗಾಣಿಸಿ ಕೊಡಬೇಕಾಗಿ ಸಂಸ್ಥೆಯ ಅಧ್ಯಕ್ಷ ಗಂಗೊಳ್ಳಿ ಗೋಪಾಲಕೃಷ್ಣ ಜಿ.ಗಾಣಿಗ, ಕಾರ್ಯದರ್ಶಿ ಸೀತಾರಾಮ್ ಶೆಟ್ಟಿ ಅಮಾವಾಸ್ಯೆಬೈಲು, ಕೋಶಾಧಿಕಾರಿ ಶೈಲೇಶ್ ಶೆಟ್ಟಿ ಸೂಡ , ಸಂಚಾಲಕ ಆನಂದ್ ಶೆಟ್ಟಿ ಕುಕ್ಕುಂದೂರು, ಅರ್ಚಕರಾದ ಲಕ್ಷ್ಮಣ್ ಶೆಟ್ಟಿ ಮತ್ತು ನಾರಾಯಣ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಶ್ರೀ ಶೆಟ್ಟಿ, ಭಜನಾ ಸಮಿತಿಯ ಕಾರ್ಯಾಧ್ಯಕ್ಷೆ ಲತಾ ಪುತ್ರನ್, ಯುವ ವಿಭಾಗದ ಕಾರ್ಯಾಧ್ಯಕ್ಷ ಕಾಪು ರಾಜೇಶ್ ಶೆಟ್ಟಿ ಹಾಗೂ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ

previous post