September 6, 2026
Mumbai News Kannada
ಪ್ರಕಟಣೆ

ಯಕ್ಷ ವೈಭವ 2025ರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ





ಭ್ರಾಮರಿ ಯಕ್ಷಮಿತ್ರರು ಮಂಗಳೂರು ಟ್ರಸ್ಟ್ ಇದರ ಆಶ್ರಯದಲ್ಲಿ ನಡೆಯುವ 8ನೇ ವರ್ಷದ ಯಕ್ಷ ವೈಭವ 2025ರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಮಂಗಳೂರಿನ ನಲ್ಲಿ ಸೋಮವಾರ ಸಂಜೆ ಜರಗಿತು . ಮಾಜಿ ಮೇಯರ್ ದಿವಾಕರ ಪಾಂಡೇಶ್ವರ ದೀಪ ಬೆಳಗಿಸಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು ಸಮಾನಮನಸ್ಕ ಗೆಳೆಯರು ಸೇರಿಕೊಂಡು ಆರಂಭಿಸಿದ ವಾಟ್ಸಪ್ ಬಳಗವೊಂದು ಟ್ರಸ್ಟ್ ಆಗಿ ಪರಿವರ್ತಿತಗೊಂಡು ಯಕ್ಷಗಾನ ಸಂಘಟನೆಯ ಕೆಲಸ ಮಾಡಿ ಅಪರೂಪದ ಇಡೀ ರಾತ್ರಿಯ ಯಕ್ಷಗಾನ ಸಂಘಟಿಸುವ ಮೂಲಕ ಯಕ್ಷಗಾನ ಸೇವೆ ಮಾಡುತ್ತಿರುವುದು ಶ್ಲಾಘನೀಯ ಎಂದು ಶುಭ ಹಾರೈಸಿದರು. ಯಕ್ಷಗಾನವೆಲ್ಲ ಕಾಲಮಿತಿಗೆ ಒಳಪಡುತ್ತಿರುವಾಗ ಮಳೆಗಾಲದಲಿ ಯಕ್ಷಗಾನ ಕಲಾವಿದರಿಗೆ ಸಹಕಾರ ನೀಡುವ ಮೂಲಕ ಯಕ್ಷಗಾನ ಸಂಘಟಿಸುತ್ತಿರುವುದು ಮತ್ತು ಹಿರಿಯ ಕಲಾವಿದರನ್ನು ಸನ್ಮಾನಿಸಿ ಭ್ರಾಮರೀ ಯಕ್ಷಮಣಿ ಪ್ರಶಸ್ತಿ ನೀಡುವುದರ ಜತೆಗೆ ರಂಗದ ತೆರೆಮರೆಯಲ್ಲಿ ದುಡಿಯುವ ನೇಪಥ್ಯ ಕಲಾವಿದರಿಗೆ ಹಾಗೂ ಯಕ್ಷ ಸಂಘಟನೆ ಸಂಸ್ಥೆಗಳಿಗೆ ಭ್ರಾಮರೀ ಯಕ್ಷಸೇವಾ ಪುರಸ್ಕಾರ ನೀಡುತ್ತಿರುವುದು ಮೆಚ್ಚುಗೆಯ ಕೆಲಸ ಎಂದರು.

ಈ ಬಾರಿಯ ಭ್ರಾಮರೀ ಯಕ್ಷವೈಭವ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಗಸ್ಟ್ 2 2025 ಶನಿವಾರದಿಂದ ಮರುದಿನ ಮುಂಜಾನೆವರೆಗೆ ಜರಗಲಿದೆ .ಉಚಿತ ಪ್ರವೇಶ ಇರುತ್ತದೆ ಎಂದು ಸಂಘಟಕರು ತಿಳಿಸಿದರು

ಈ ಸಂದರ್ಭ ಭ್ರಾಮರಿ ಯಕ್ಷಮಿತ್ರರು ಟ್ರಸ್ಟ್‌ನ ಪ್ರಮುಖರಾದ ವಿನಯ್ ಕೃಷ್ಣ ಕುರ್ನಾಡ್,ಸತೀಶ್ ಮಂಜೇಶ್ವರ್, ರವಿಶಂಕರ ಭಟ್, ಸೂರ್ಯನಾರಾಯಣ ಭಟ್, ಪರಮೇಶ್ವರ್ ಭಟ್ ,ಉಮೇಶ್ ಶೆಟ್ಟಿ, ಕೃಷ್ಣ ಮರ್ಕಮೆ, ಅಶ್ವಿತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು ಸತೀಶ್ ಮಂಜೇಶ್ವರ ಸ್ವಾಗತಿಸಿದರು ವಿನಯಕೃಷ್ಣ ಕುರ್ನಾಡು ವಂದಿಸಿದರು.



Related posts

ಚಿತ್ರಕಲಾವಿದ ಜಯ್ ಸಾಲಿಯನ್ ಅವರಿಗೆ ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿ ಗೌರವ

Mumbai News Desk

ಕರ್ನಾಟಕ ಸಂಘ, ಕಲ್ಯಾಣ : ಮೇ 1ರಂದು ಮಹಾರಾಷ್ಟ್ರ ದಿನಾಚರಣೆ

Mumbai News Desk

ಜ. 24 ಮತ್ತು 25 ; ಗೋರೆಗಾಂವ್ (ಪೂರ್ವ)ದ ಸಹಕಾರವಾಡಿ ಶ್ರೀ ಸದ್ಗುರು ನಿತ್ಯಾನಂದ ಆಶ್ರಮದಲ್ಲಿ 61ನೇ ವಾರ್ಷಿಕ ಮಹೋತ್ಸವ ಹಾಗೂ ಗುರುಮೂರ್ತಿ ಅಭಿಷೇಕ

Mumbai News Desk

ಮಾರ್ಚ್ 26-27ರಂದು ಕಾಪುವಿನ 3 ಮಾರಿಗುಡಿಯಲ್ಲಿ ‘ಕಾಲವಧಿ ಸುಗ್ಗಿ ಮಾರಿಪೂಜೆ’

Mumbai News Desk

ಸೃಜನಾ’ ಮುಂಬಯಿ ಕನ್ನಡ ಲೇಖಕಿಯರ ಬಳಗದ ವತಿಯಿಂದ ತಾ.29/11/2025 ರಂದು ಕೃತಿ ಸಮೀಕ್ಷೆ ಕಾರ್ಯಕ್ರಮ

Mumbai News Desk

ನ. 3 ಮತ್ತು 4 ರಂದು ಶ್ರೀ ರಾಧಾಕೃಷ್ಣ ಮತ್ತು ಶ್ರೀ ಶನೀಶ್ವರ ಮಂದಿರದ 65ನೇ ವಾರ್ಷಿಕ ಮಂಗಳೋತ್ಸವ

Mumbai News Desk