
ಶ್ರೀ ಸೀತಾರಾಮ ಭಜನಾ ಮಂದಿರ ಪಲಿಮಾರು ಹೊಸಗೈ, ಹೆಜಮಾಡಿ, ಇಲ್ಲಿ ಪ್ರತಿವರ್ಷಮಳೆಗಾಲದಲ್ಲಿ ಧರ್ಮಗ್ರಂಥ ದ ವಾಚನ ನಡೆಯುತ್ತಿದ್ದು, ಈ ವರ್ಷ “ಕುಮಾರವ್ಯಾಸ ಭಾರತ ” ಎಂಬ ಪುಣ್ಯ ಕಥಾ ವಾಚನವು ಜುಲೈ 16ರಿಂದ ಪ್ರತಿದಿನ ಸಾಂಯಕಾಲ 4 ಗಂಟೆಯಿಂದ 6 ಗಂಟೆ ತನಕ ನಡೆಯಲಿದೆ.
ವಾಚಕರಾಗಿ ಜಯ ದೇವಾಡಿಗ, ಸುರತ್ಕಲ್ ಮತ್ತು ಪ್ರವಚನಕಾರರಾಗಿ ಭಾಸ್ಕರ್ ಕೆ ಪಡುಬಿದ್ರಿ, ಮನೋಹರ್ ಕುಂದರ್ ಎರ್ಮಾಳು ಇವರು ಪ್ರವಚನದಲ್ಲಿ ಭಾಗಿಯಾಗಿರುವರು.
ಭಕ್ತಾದಿಗಳು ದಿನಂಪ್ರತಿ ಸಕಾಲದಲ್ಲಿ ಆಗಮಿಸಿ, ಪುಣ್ಯ ಪ್ರದವಾದ ಕಥಾಶ್ರವಣ ಮಾಡಿ ಶ್ರೀ ಸೀತಾರಾಮ ದೇವರ ಕೃಪೆಗೆ ಪಾತ್ರರಾಗಬೇಕೆಂದು ಫಲಿಮಾರು ಮೊಗವೀರ ಸಭಾ, ಫಲಿಮಾರು, ಫಲಿಮಾರು ಮೊಗವೀರ ಸಭಾ ಮುಂಬಯಿ, ಫಲಿಮಾರು ಭಗಿನಿ ಸಮಾಜ ಫಲಿಮಾರು, ಫಲಿಮಾರು ಶ್ರೀ ಸೀತಾರಾಮ ಸೇವಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು ವಿನಂತಿಸಿದ್ದಾರೆ.