September 6, 2026
Mumbai News Kannada
ತುಳುನಾಡು

ಉಡುಪಿ : ಮನೆಯಲ್ಲಿ ಅಗ್ನಿ ಅವಘಡ, ಮನೆಯ ಯಜಮಾನ ಮೃತ್ಯು.





ಉಡುಪಿಯ ಅಂಬಲಪಾಡಿ ಗಾಂಧಿ ನಗರದ ಮನೆಯಲ್ಲಿ ಇಂದು ಬೆಳಗಿನ ಜಾವ (ಸೋಮವಾರ ) ಸಂಭವಿಸಿದ ಅಗ್ನಿ ದುರಂತದಲ್ಲಿ ಮನೆಯ ಯಜಮಾನ, ಬಾರ್ ಮಾಲೀಕ ರಮಾನಂದ ಶೆಟ್ಟಿ (52) ಮೃತ ಪಟ್ಟಿದ್ದಾರೆ.
ಅಂಬಲಪಾಡಿಯ ಶೆಟ್ಟಿ ಬಾರ್ ಅಂಡ್ ರೆಸ್ಟೋರೆಂಟ್ ನ ಮಾಲೀಕ ರಮಾನಂದ ಶೆಟ್ಟಿ ಅವರ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ರಮಾನಂದ ಶೆಟ್ಟಿ ಹಾಗೂ ಅವರ ಪತ್ನಿ ಅಶ್ವಿನಿ ಶೆಟ್ಟಿ ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಾಲಿಸಲಾಗಿತ್ತು, ಆದರೆ ಚಿಕೆತ್ಸೆ ಫಲಕಾರಿಯಾಗದೆ ರಮಾನಂದ ಶೆಟ್ಟಿ ಮೃತಪಟ್ಟಿದ್ದಾರೆ.
ಅಶ್ವಿನಿ ಅವರ ಚಿಕಿತ್ಸೆ ಮುಂದುವರಿದಿದೆ. ರಮಾನಂದ ಅವರ ಮಕ್ಕಳು ಮನೆಯ ಮೇಲಿನ ಮಹಿಡಿಯಲ್ಲಿದ್ದ ಕಾರಣ ಅಪಾಯದಿಂದ ಪಾರಾಗಿದ್ದಾರೆ, ಮನೆ ಸುಟ್ಟು ಕರಕಲಾಗಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅಗ್ನಿ ದುರಂತಕ್ಕೆ ಕಾರಣ ಎನ್ನಲಾಗುತ್ತಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



Related posts

ಮುಲ್ಕಿ : ಹೊಸ ಅಂಗಣ ಮಾಸಪತ್ರಿಕೆಯ ತಿಂಗಳ ಬೆಳಕು ಕಾರ್ಯಕ್ರಮ – ಸಸಿಹಿತ್ಲು ಶ್ರೀ ಭಗವತಿ ಕ್ಷೇತ್ರದ ಅನುವಂಶಿಕ ಮೊಕ್ತೇಸರ ಅಪ್ಪು ಯಾನೆ ಶ್ರೀನಿವಾಸ ಪೂಜಾರಿ ಅವರಿಗೆ ಸನ್ಮಾನ

Mumbai News Desk

*ಕಲಾ ಸಾಧನ ಸಂಸ್ಥೆ ಸಮರ್ಪಿಸಿದ ಸ್ವರದಾರ ಸಂಗೀತ ಹಬ್ಬ, ಸಂಗೀತ ಆರೋಗ್ಯಕ್ಕೆ ಔಷಧಿ ಇದ್ದಂತೆ;: ಐಕಳ ಹರೀಶ್ ಶೆಟ್ಟಿ*

Mumbai News Desk

ಕಾಪು ನಗರದ ಹೃದಯ ಭಾಗದಲ್ಲಿರುವ ಅನಂತ ಮಹಲ್ ವಾಣಿಜ್ಯ ಸಂಕೀರ್ಣದಲ್ಲಿ 80ನೇ ಸ್ವಾತಂತ್ರ್ಯೋತ್ಸವ ಆಚರಣೆ

Mumbai News Desk

ಮುಲ್ಕಿ ಬಪ್ಪನಾಡು ದೇವಸ್ಥಾನದಲ್ಲಿ ಭವ್ಯ ಸ್ವಾಗತ ಗೋಪುರ ನಿರ್ಮಾಣಕ್ಕೆ ಬಿಲ್ಲವ ಸಮಾಜದ ಸಿದ್ಧತೆ

Mumbai News Desk

ಮಂಗಳೂರಿನಲ್ಲಿ ಬಿ. ಸಂಜೀವ ಕೆ.ಬಿ. ಅವರ “ತೀಯಾ ಕುಲತಿಲಕ , ಕುಲರತ್ನ, ಮಹಾದಾನಿ ರೋಹಿದಾಸ್ ಎಸ್. ಬಂಗೇರ’ ಹಾಗೂ ‘ಶ್ರೀ ಗುರು ಚರಣಾಮೃತ’ ಕೃತಿಗಳ ಬಿಡುಗಡೆ

Mumbai News Desk

“ವಿನಯ್ ಕುಮಾರ್ ಸೊರಕೆ ನೇತೃತ್ವದಲ್ಲಿ ತಳಮಟ್ಟದಲ್ಲಿ ಕಾಂಗ್ರೆಸ್ ಬಲವರ್ಧನೆಗೆ ಹೆಜಮಾಡಿಯಲ್ಲಿ ಮಹತ್ವದ ಸಭೆ – ಡಿಜಿಟಲ್ ಮೀಡಿಯಾ ಆರಂಭ ಮತ್ತು ನೂತನ ಸದಸ್ಯರ ಸೇರ್ಪಡೆ”

Mumbai News Desk