
ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ(ಐಸಿಎಐ)ದ ಮೇಯಲ್ಲಿ ನಡೆದ ಚಾರ್ಟರ್ಡ್ ಅಕೌಂಟೆನ್ಸಿ(ಸಿಎ) ಅಂತಿಮ ಪರೀಕ್ಷೆಯ ಫಲಿತಾಂಶದಲ್ಲಿ ಮಲಾಡ್ ಪೂರ್ವದ ಇರಾನಿ ಕಾಲೋನಿಯ ನಿವಾಸಿ ಶ್ರೇಯಾ ವಿಜಯಕುಮಾರ್ ಸಾಲಿಯಾನ್ ಮೊದಲ ಹಂತದಲ್ಲಿ ಉತ್ತೀರ್ಣರಾಗಿದ್ದಾರೆ. ಈಕೆ ದಿ.ವಿಜಯಕುಮಾರ್ ಸಾಲಿಯಾನ್, ಅಜೆಕಾರ್ ಮತ್ತು ವಾರಿಜಾಕ್ಷಿ ವಿಜಯಕುಮಾರ್ ಸಾಲಿಯಾನ್ ಮುಕ್ಕ ದಂಪತಿಯ ಪುತ್ರಿ. ಶ್ರೇಯಾ ಅವರು ತನ್ನ ಇಂಡಸ್ಟ್ರಿಯಲ್ ತರಬೇತಿಯನ್ನು ಬ್ಲೂಮ್ ವೆಂಚರ್ಸ್‌ನಲ್ಲಿ ಪೂರ್ಣಗೊಳಿಸಿದ್ದರು.