
ಮುಂಬಯಿ ಜು 19. ಸಾಂತಾಕ್ರೂಜ್ ಪೂರ್ವದ ಪೇಜಾವರ ಮಠದ ಮಧ್ವ ಭವನದ ಶ್ರೀ ಕೃಷ್ಣ ಸಾನಿಧ್ಯದಲ್ಲಿ ಜುಲೈ 17 ರಂದು ಆಷಾಢ ಏಕಾದಶಿಯ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳು ನಡೆದವು.
ಮಠದ ಮುಖ್ಯ ಪ್ರಬಂಧಕರಾದ ವಿದ್ವಾನ್ ಡಾ ರಾಮದಾಸ ಉಪಾಧ್ಯಾಯ ರೆಂಜಾಳ ಅವರು ಪುರೋಹಿತ್ವದಲ್ಲಿ ತುಳಸಿ ಅರ್ಚನೆ , ಭಗವದ್ಗೀತಾ ಪಾಠ , ಮಹಾಮಂಗಳಾರತಿ ನಡೆದವು.
ಶ್ರೀ ಮದ್ದೇಶ ಭಜನ ಮಂಡಳಿಯ ಸದಸ್ಯರಿಂದ ಭಜನೆ ನಡೆದವು.
ಈ ಸಂದರ್ಭದಲ್ಲಿ ಪೂರ್ಣಪ್ರಜ್ಞಾ ವಿದ್ಯಾಪೀಠ ಪ್ರತಿಷ್ಠಾನದ ಪದಾಧಿಕಾರಿಗಳು .ಪೇಜಾವರ ಮಠದ ಪ್ರಕಾಶ್ ಆಚಾರ್ಯ ರಾಮಕುಂಜ, ಹರಿ ಭಟ್ ಪುತ್ತಿಗೆ, ನಿರಂಜನ್ ಗೋಗೈ ಸೇರಿದಂತೆ , ಅಪಾರ ಭಕ್ತಾದಿಗಳು ಉಪಸ್ಥಿತ ರಿದ್ದರು.