
ಇತ್ತೀಚಿಗೆ ನಡೆದ ಟಿ20 ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ ಭಾರತ 11 ವರ್ಷಗಳ ಬಳಿಕ ಕಪ್ ಗೆಲ್ಲುವಲ್ಲಿ ಸೂರ್ಯ ಕುಮಾರ್ ಯಾದವ್ ಹಿಡಿದ ಅದ್ಭುತ ಕ್ಯಾಚ್ ಪ್ರಮುಖ ಪಾತ್ರವಹಿಸಿತ್ತು.
ಟಿ20 ಕಪ್ ಗೆದ್ದ ಬಳಿಕ ಸೂರ್ಯಕುಮಾರ್, ಪತ್ನಿ ದೇವಿಷಾ ಶೆಟ್ಟಿ ಅವರೊಂದಿಗೆ ಕಾಪುವಿನ ಇತಿಹಾಸ ಪ್ರಸಿದ್ಧ ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಮಾರಿಯಮ್ಮ ನ ದರುಶನ ಪಡೆದಿದ್ದರು.ಸೂರ್ಯಕುಮಾರ ಯಾದವ್ ಅಮ್ಮನಲ್ಲಿ ಪ್ರಾಥಿಸಿ, ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಭವ್ಯ ಶಿಲಾಮಯ ದೇವಸ್ಥಾನಕ್ಕೆ ಶಿಲಾ ಕಂಬವನ್ನು ನೀಡಿದ್ದರು.

ಈ ಸಂಧರ್ಭದಲ್ಲಿ ದೇವಸ್ಥಾನದ ಅರ್ಚಕರು ಸೂರ್ಯಕುಮಾರ ಯಾದವ್ ಅವರಿಗೆ ಅಮ್ಮನ ಮಹಾಪ್ರಸಾದ ನೀಡಿ “ಮುಂದೆ ಭಾರತ ತಂಡದ ನಾಯಕನಾಗಿ ಇಲ್ಲಿ ಬರುತ್ತೀರಿ ” ಎಂದು ಹರಸಿದ್ದರು.
ಸೂರ್ಯಕುಮಾರ್ ಕಾಪುವಿಗೆ ಭೇಟಿ ನೀಡಿದ 10 ದಿನದಲ್ಲೇ, ಅವರು ಶ್ರೀಲಂಕಾ ವಿರುದ್ಧ ನಡೆಯಲಿರುವ ಟಿ 20 ಸರಣಿಗೆ ತಂಡದ ನಾಯಕನಾಗಿ ಆಯ್ಕೆಯಗಿದ್ದು, ‘ಕಾಪು ಅಮ್ಮನ” ಅನುಗ್ರಹ ಮತ್ತು ಸೂರ್ಯಕುಮಾರ್ ಯಾದವ್ ಅವರ ಭಕ್ತಿ ಎನ್ನಬಹುದು.
ನಂಬಿ ಬಂದ ಭಕ್ತರ ಪ್ರಾರ್ಥನೆಯನ್ನು ಅನುಗ್ರಹಿಸುವ ತಾಯಿ “ಕಾಪುವಿನ ಅಮ್ಮ” ಭಕ್ತ ಕೋಟಿಯ ಮನ- ಮಂದಿರದಲ್ಲಿ ವಿರಾಜಮಾನರಾಗಿದ್ದಾರೆ.