24.7 C
Karnataka
April 3, 2025
ಮುಂಬಯಿ

ಮೆಂಡನ್ ಮೂಲಸ್ಥಾನ ಮುಂಬಯಿ ಶಾಖೆ 92ನೇ ವಾರ್ಷಿಕ ಮಹಾಸಭೆ.



ಮೂಲಸ್ಥಾನ ಅಭಿವೃದ್ಧಿಗೊಂಡಾಗ ನಮ್ಮ ಪರಿವಾರಗಳ ಶ್ರೇಯ, ಅಭಿವೃದ್ಧಿಯಾಗುತ್ತದೆ: ಜಯ ಬಿ .ಮೆಂಡನ್

ಮುಂಬಯಿ,ಅ2: ಮೆಂಡನ್ ಮೂಲ ಸ್ಥಾನ ಮುಂಬಯಿ ಶಾಖೆಯ 92ನೇ ವಾರ್ಷಿಕ ಮಹಾಸಭೆ ಜೂ. 30ರಂದು ಮುಂಬಯಿ ಶಾಖೆಯ ಅಧ್ಯಕ್ಷ ಜಯ ಬಿ. ಮೆಂಡನ್ ಅವರ ಅಧ್ಯಕ್ಷತೆಯಲ್ಲಿ ಅಂಧೇರಿ ಪಶ್ಚಿಮದ ವೀರ ದೇಸಾಯಿ ಮಾರ್ಗದ ಎಂವಿಎಂ ಶೈಕ್ಷಣಿಕ ಕ್ಯಾಂಪಸ್‌ನ ಮೊಗವೀರ ಭವನದಲ್ಲಿ ನಡೆಯಿತು.

ಮಹಾಸಭೆಯಲ್ಲಿ ವರದಿ ವರ್ಷದಲ್ಲಿ ನಿಧನ ಹೊಂದಿದವರ ಹೆಸರನ್ನು, ಕಾರ್ಯದರ್ಶಿ ಜಯರಾಮ್ ಮೆಂಡನ್ ವಾಚಿಸಿದರು .
2023-24ನೇ ವರ್ಷದ ಲೆಕ್ಕಪಟ್ಟಿ ಮಂಡನೆ ಕೋಶ ಧಿಕಾರಿ ದಾಮೋದರ್ ಎಸ್ ಮೆಂಡನ್ ಮಂಡಿಸಿದರು.
ಸಭೆಯಲ್ಲಿದ್ದ ಸದಸ್ಯರು ಮಂಜೂರು ಮಾಡಿದರು .

ಈ ಸಂದರ್ಭದಲ್ಲಿ ಮೆಂಡನ್ ಮೂಲಸ್ಥಾನದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ 7 ಜನ ಹಿರಿಯರಾದ ನಾರಾಯಣ್ ಜಿ ಮೆಂಡನ್, ಸುಮತಿ ತಿಂಗಳಾಯ, ಶೇಷಪ್ಪ ಮೆಂಡನ್, ಕುಸುಮ ಜೆ ಕಾಂಚನ್ .ಕೇಶವ ಮೆಂಡನ್, ಧನಂಜಯ ಮೆಂಡನ್, ಉಮೇಶ್ ಮೆಂಡನ್ ಇವರೆಲ್ಲರನ್ನು ಸಮ್ಮಾನಿಸಲಾಯಿತು.

ಸಭೆಯಲ್ಲಿ ಉಪಸ್ತರಿದ್ದ ಹಿರಿಯಸದಸ್ಯರು ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ವಾರ್ಷಿಕ ಸಭೆಯಲ್ಲಿ ಈ ವರ್ಷ ಡಿಸೆಂಬರ್ 14ರಂದು ಕಾಶಿ ಮತ್ತುಅಯೋಧ್ಯೆಗೆ ಯಾತ್ರೆ ಮಾಡುವುದಾಗಿ ನಿರ್ಧರಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಜಯ ಮೆಂಡನ್ ಮಾತನಾಡುತ್ತಾ ಮೂಲಸ್ಥಾನದ ಸೇವಾ ಕಾರ್ಯಗಳಲ್ಲಿ ದಾನ ನೀಡಿದ ದಾನಿಗಳು ಮತ್ತು ಸೇವಕರ್ತರ ಸೇವೆಯಿಂದ ಮೂಲಸ್ಥಾನದ ಸೇವಾ ಕಾರ್ಯಗಳು ಅಭಿವೃದ್ಧಿ ಗೊಂಡಿದೆ. ಮುಂದಿನ ದಿನಗಳಲ್ಲೂ ಕೂಡ ಮೂಲಸ್ಥಾನದ ಅಭಿವೃದ್ಧಿಯ ಕೆಲಸಗಳನ್ನು ಎಲ್ಲರೂ ಮಾಡಬೇಕು. ಮೂಲಸ್ಥಾನ ಅಭಿವೃದ್ಧಿಗೊಂಡಾಗ ನಮ್ಮ ಪರಿವಾರಗಳು ಶ್ರೇಯ,ಅಭಿವೃದ್ಧಿಯಾಗುತ್ತದೆ ಎಂದು ನುಡಿದರು
ಕೊನೆಯಲ್ಲಿ ಜೊತೆ ಕಾರ್ಯದರ್ಶಿ ವೆಂಕಟೇಶ್ ಮೆಂಡನ್ ಧನ್ಯವಾದ ನೀಡಿದರು ಆ ಬಳಿಕ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

Related posts

ಪೋರ್ಟ್ ಸೆಂಟ್ರಲ್ ಹೋಟೆಲ್ ನ ಆಯೋಜನೆಯಲ್ಲಿ ಗಣೇಶ್ ಉತ್ಸವ ಸಂಭ್ರಮ.

Mumbai News Desk

ಮೊಗವೀರ  ವ್ಯವಸ್ಥಾಪಕ ಮಂಡಳಿಯಲ್ಲಿ  ” ಆಟಿಡ ಒಂಜಿ ಕೂಟ “

Mumbai News Desk

ನವೋದಯ ಕನ್ನಡ ಸೇವಾ ಸಂಘ (ರಿ), ಥಾಣೆ ಇದರ ಆಯೋಜನೆಯಲ್ಲಿ ವಿಜೃಂಭಣೆಯಿಂದ ಸಂಪನ್ನಗೊಂಡ ಭಜನಾ ಮಂಗಳೋತ್ಸವ

Mumbai News Desk

ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ದಿವ್ಯ ಮೂರ್ತಿಯ ವಿಸರ್ಜನಾ ಮೆರವಣಿಗೆ

Mumbai News Desk

ಕರ್ನಾಟಕ ಸಂಘ ಡೊಂಬಿವಲಿ : ಲಲಿತ ಕಲಾ ಹಾಗೂ ಮಹಿಳಾ ವಿಭಾಗದ ವತಿಯಿಂದ ಸಂಭ್ರಮದ ನಾಡಹಬ್ಬ.

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟ ದ ಸಮಾಜ ಕಲ್ಯಾಣ ಸಹಾಯಹಸ್ತ

Mumbai News Desk