
ಸಂಘ- ಸಂಸ್ಥೆಗಳು ಯಕ್ಷಗಾನ ಪ್ರದರ್ಶನ ಕ್ಕೆ ಸಹಕಾರ ನೀಡಿದಲ್ಲಿ ಯಕ್ಷಗಾನಕ್ಕೆ ಎಂದಿಗೂ ಅಳಿವಿಲ್ಲ- ಜಯಂತ್ ಶೆಟ್ಟಿ
ಚಿತ್ರ ವರದಿ ರವಿ. ಬಿ. ಅಂಚನ್ ಪಡುಬಿದ್ರಿ
ನವಿ ಮುಂಬಯಿ ಅ4: ಮಾರಣಕಟ್ಟೆ ಮೇಳ ಮತ್ತು ಅತಿಥಿ ಕಲಾವಿದರಿಂದ ಪ್ರತಿವರ್ಷ ಮುಂಬಯಿ ಮಹಾನಗರದಲ್ಲಿ ಉತ್ತಮ ಯಕ್ಷಗಾನ ಪ್ರದರ್ಶನ ಗೊಳ್ಲುತ್ತಿದೆ ಇನ್ನು ಹದಿನೈದು ದಿನ ಮಾರಣಕಟ್ಟೆ ಮೇಳದ ಯಕ್ಷಗಾನ ಮಹಾನಗರದಲ್ಲಿ ಜರಗಲಿದೆ. ಇಂದು ಯಕ್ಷಗಾನ ಗಂಡು ಕಲೆಯಾಗಿ ಉಳಿದಿಲ್ಲ ಇಂದಿನ ದಿನದಲ್ಲಿ ಮಕ್ಕಳ ತಂಡ, ಮಹಿಳೆಯರ ತಂಡಗಳು ಉತ್ತಮ ಯಕ್ಷಗಾನ ಪ್ರದರ್ಶನಗಳನ್ನು ನೀಡುತ್ತಿವೆ. ಯಕ್ಷಗಾನದ ಅದರ್ಶ ಪಾತ್ರ, ವ್ಯಕ್ತಿತ್ವ, ನಿಷ್ಠೆಯನ್ನು ನಮ್ಮ ಜೀವನದಲ್ಲಿ ಪಾಲಿಸಿದರೆ ಉತ್ತಮ ವ್ಯಕ್ತಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ, ನಮ್ಮ ಮಕ್ಕಳನ್ನು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ನಾವು ಪ್ರೇರಣೆ ನೀಡಿದಲ್ಲಿ ಕಲಾವಿದರು, ಕಲಾಪೋಷಕರು ಹೆಚ್ಚಾಗುವುದರೊಂದಿಗೆ ಕಲೆ ಉಳಿದು ಬೆಳೆಯಬಹುದು ಅದರೊಂದಿಗೆ ಮಹಾನಗರದ ಸಂಘ- ಸಂಸ್ಥೆಗಳು ಯಕ್ಷಗಾನ ಪ್ರದರ್ಶನಕ್ಕೆ ಹೆಚ್ಚಿನ ಸಹಕಾರ ನೀಡಿದಲ್ಲಿ ಯಕ್ಷಗಾನಕ್ಕೆ ಎಂದಿಗೂ ಅಳಿವಿಲ್ಲ ಎನ್ನಬಹುದು ನಾವೆಲ್ಲರೂ ಒಂದಾಗಿ ನಮ್ಮ ತಾಯ್ನಾಡಿನ ಶ್ರೇಷ್ಠ ಕಲೆಗೆ ಸದಾ ಪ್ರೋತ್ಸಾಹ ನೀಡೋಣಾ ಎಂದು ಕನ್ನಡ ಸಂಘ ವರ್ತಕ ನಗರ ಥಾಣೆ ಇದರ ಅಧ್ಯಕ್ಷರಾದ ಜಯಂತ್ ಶೆಟ್ಟಿ ನುಡಿದರು.
ಅವರು ಅಗಸ್ಟ್ 3 ರ ಶನಿವಾರದಂದು ಘನ್ಸೋಲಿಯ ಶ್ರೀ ಮೂಕಾಂಬಿಕಾ ಮಂದಿರದ ವಠಾರದಲ್ಲಿ ಹೊಸೂರು ರತ್ನಾಕರ್ ಶೆಟ್ಟಿ ಯವರ ವ್ಯವಸ್ಥಾಪಕತ್ವದಲ್ಲಿ ಜರಗಿದ ರಾಮಾಂಜನೇಯ.. ಕನಕಾಂಗಿ ಕಲ್ಯಾಣ ಯಕ್ಷಗಾನದ ಮಧ್ಯಂತರದಲ್ಲಿ ಜರಗಿದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.




ದೇಪುಣಿ ಗುತ್ತು ಚಂದ್ರಹಾಸ ಶೆಟ್ಟಿ ಮಾತನಾಡುತ್ತಾ ತಾಯಿ ಶ್ರೀ ಮೂಕಾಂಬಿಕೆ ಯಕ್ಷಗಾನ ಪ್ರೀಯೆ ಅದುದರಿಂದ ರಮೇಶ್ ಶೆಟ್ಟಿ ಸಿವಿಲ್ ಮಾರಣಕಟ್ಟೆ ತಾಯಿಯ ಕೃಪೆಯಿಂದ ಪ್ರತಿವರ್ಷ ಮಾರಣ ಕಟ್ಟೆ ಮೇಳವನ್ನು ಮಹಾನಗರಕ್ಕೆ ಬರಮಾಡಿಸಿ ತಮ್ಮ ಉದ್ಯಮವನ್ನು ಬದಿಗಿಟ್ಟು ಶ್ರೀ ಮೂಕಾಂಬಿಕಾ ದೇವಿಯ ಕ್ಷೇತ್ರದಲ್ಲಿ ಯಕ್ಷಗಾನ ಸೇವೆಯಲ್ಲಿ ನಿರತರಾಗುತ್ತಾರೆ. ಇಂತಹ ಯಕ್ಷಗಾನ ಸೇವಕನಿಗೆ ನಾವೆಲ್ಲರೂ ಸಹಕಾರ ನೀಡ ಬೇಕು ಅಗ ಕಲೆ ಹಾಗೂ ಕಲಾವಿದರಿಗೆ ಸಹಾಯ ಸಿಗುತ್ತದೆ ಎಂದರು.
ಇದೇ ಸಂಧರ್ಬದಲ್ಲಿ ಕಲಾ ಸಂಘಟಕ, ಉದ್ಯಮಿ ಹೊಸೂರು ರತ್ನಾಕರ್ ಶೆಟ್ಟಿಯವರನ್ನು ವೇದಿಕೆಯ ಮೇಲಿದ್ದ ಗಣ್ಯರು ಶಾಲು, ಫಲ, ಪುಷ್ಪ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.


ಇದಕ್ಕೂ ಮೊದಲು ತಾಯಿ ಶ್ರೀ ಮೂಕಾಂಬಿಕಾ ದೇವಿಯ ಎದುರು ಗಣ್ಯರಿಂದ ದೀಪ ಪ್ರಜ್ವಲಿಸಿ ಉದ್ಘಾಟನಾ ಕಾರ್ಯಕ್ರಮವು ಜರಗಿತು.
ವೇದಿಕೆಯ ಮೇಲೆ ಕನ್ನಡ ಸಂಘ ವರ್ತಕ ನಗರ ಥಾಣೆ ಇದರ ಅಧ್ಯಕ್ಷ ಜಯಂತ್ ಶೆಟ್ಟಿ, ಸಂತೋಷ್ ಶೆಟ್ಟಿ ಹೋಟೆಲ್ ಸ್ವಾದ್ , ಉಮೇಶ್ ಶೆಟ್ಟಿ ಹೋಟೆಲ್ ಪ್ರೀಯಾಂಕ, ಜಯಾನಂದ ದೇವಾಡಿಗ ಕಲಾ ಸಂಘಟಕರು, ನವೀನ್ ಶೆಟ್ಟಿ ಹೋಟೆಲ್ ದುರ್ಗಾ ವಿಹಾರ್, ಚಂದ್ರಹಾಸ ಶೆಟ್ಟಿ ದೇಪುಣಿಗುತ್ತು , ಹೊಸೂರು ರತ್ನಾಕರ ಶೆಟ್ಟಿ ಕಲಾ ಸಂಘಟಕರು, ಹಾಗೂ ಮುಂಬಯಿ ಮುಂಬಯಿ ಮೇಳದ ಯಜಮಾನರಾದ ಬೆಳ್ಳಾಲ ರಮೇಶ್ ಶೆಟ್ಟಿ ಸಿವಿಲ್ ಉಪಸ್ತಿತರಿದ್ದರು.
ಸುಧಾಕರ್ ಕೊಠಾರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.