
ಮುಂಬಯಿಯ ಹಿರಿಯ-ಕಿರಿಯ ಉತ್ತಮ ಕಲಾವಿದರ ಸಮಾಗಮ – ರತ್ನಾಕರ್ ಶೆಟ್ಟಿ ಮುಂಡ್ಕೂರು
“ಇಂದಿನ ಈ ನಾಟಕದಲ್ಲಿ ಮುಂಬಯಿಯ ಹಿರಿಯ-ಕಿರಿಯ ಕಲಾವಿದರ ಸಮಾಗಮದೊಂದಿಗೆ ಒಂದು ಹೊಸ ರೀತಿಯ ತುಳು ಹಾಸ್ಯ ನಾಟಕವನ್ನು ಕೆವಿಎಸ್ ಎಂಟರ್ಟೆನೆಂಟ್ ಪ್ರದರ್ಶಸಿ ನಮಗೆ ಮನೋರಂಜನೆಯನ್ನು ನೀಡಿದ್ದಾರೆ’ ಎಂದು ಕೆವಿಎಸ್ ಎಂಟರ್ಟೆನೆಂಟ್ ನ `ಈ ರಾತ್ರೆಗ್ ಪಗೆಲ್ ಯಾನ್’ ನಾಟಕದ ದಶ ಸಂಭ್ರಮದ ಸಂದರ್ಭದಲ್ಲಿ ಎಸ್ ಎಮ್ ಶೆಟ್ಟಿ ಎಡ್ಯೂಕೇಶನಲ್ ಇನ್ಸಿಟೂಶನ್ ಇದರ ಕಾರ್ಯಧ್ಯಕ್ಷರಾದ ಮುಂಡ್ಕೂರು ರತ್ನಾಕರ ಶೆಟ್ಟಿಯವರು ನುಡಿದರು. ಹಾಗೆಯೇ ಈ ಕಲಾವಿದರ ನಾಟಕವನ್ನು ಹಲವಾರು ವರ್ಷದಿಂದ ನೋಡುತ್ತಾ ಬಂದಿದ್ದೇನೆ. ಉತ್ತಮ ನಟನೆಯಿಂದ ಎಲ್ಲಾ ಕಲಾ ರಸಿಕರಿಗೆ ಮನೋರಂಜನೆಯನ್ನು ನೀಡುವಂತಹ ನಾಟಕವನ್ನು ಇವರು ನೀಡುತ್ತಿದ್ದಾರೆ. ಇಂದು “ಈ ರಾತ್ರೆಗ್ ಪಗೆಲ್ ಯಾನ್” ಈ ಕೌಟುಂಬಿಕ ಹಾಸ್ಯ ನಾಟಕವನ್ನು ಮುಂಬಯಿಯ ಉತ್ತಮ ಕಲಾವಿದರೇ ಪ್ರಸ್ತುತ ಪಡಿಸುತ್ತಿದ್ದಾರೆ ಎಂದು ಹೇಳಲು ನನಗೆ ಹೆಮ್ಮೆಯಾಗುತ್ತಿದೆ. ಇದರ ರೂವಾರಿ ಕೃಷ್ಣರಾಜ್ ಶೆಟ್ಟಿ ಮುಂಡ್ಕೂರು ಇವರು ಶಾಲಾ ದಿನದಿಂದಲೂ ಪರಿಚಿತರು, ಒಬ್ಬ ಪ್ರತಿಭಾನ್ವಿತ ಸಯಾನ್ಸ್ ವಿದ್ಯಾರ್ಥಿಯಾಗಿದ್ದರೂ ಸಾಂಸ್ಕೃತಿಕ ವಲಯದಲ್ಲಿ ಉತ್ತಮ ಶ್ರೇಯಸ್ಸನ್ನು ಪಡೆದಿದ್ದಾರೆ ಎನ್ನಲು ಅಭಿಮಾನವಾಗುತ್ತಿದೆ ಅಂದರು.




ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತಾನಾಡಿದ ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರದ ಅಧ್ಯಕ್ಷರಾದ ಸುರೇಂದ್ರಕುಮಾರ್ ಹೆಗ್ಡೆಯವರು ಕಲಾ ಪೋಷಕರ ಹಾಗೂ ಕಲಾ ರಸಿಕರ ಬೆಂಬಲವಿದ್ದರೆ ಇಂತಹ ಹಲವಾರು ಉತ್ತಮ ನಾಟಕಗಳನ್ನು ಕವಿಎಸ್ ಎಂಟರ್ಟೆನೆಂಟ್ ಮುಂಬಯಿಯವರು ಪ್ರಸ್ತುತ ಪಡಿಸಲು ಸಿದ್ಧರಿದ್ದಾರೆ. ಬೇರೆ ಬೇರೆ ನಗರಗಳಿಂದ ಬರುವ ಕಲಾವಿದರಿಗೆ ಮುಂಬಯಿಯ ಸಹೃದಯ ಕಲಾ ಪೋಷಕರು ತುಂಬು ಬೆಂಬಲವನ್ನು ನೀಡುತ್ತಾರೆ, ಅದೇ ರೀತಿ ಇಲ್ಲಿ ಇರುವಂತಹ ಕಲಾವಿದರಿಗೂ ಸಹಕರಿಸಿ ಪ್ರೋತ್ಸಾಹಿಸಬೇಕೆಂದು ಕಳಕಳಿಯಿಂದ ವಿನಂತಿಸಿಕೊಂಡರು. ನನ್ನ ಪ್ರೊಫೆಶನಲ್ ಹಾಗೂ ಬಿಸಿನೆಸ್ ಪ್ರೊಪೈಲ್ ಗಿಂತಲೂ ನಾನೊಬ್ಬ ಕಲಾವಿದನಾಗಿ ರಂಗಭೂಮಿಯಲ್ಲಿ ನಿಮ್ಮೆಲ್ಲರ ಕರತಾಡನದಿಂದ ಗುರುತಿಸಿಕೊಳ್ಳುವುದೇ ನನಗೆ ಗೌರವವೆನಿಸುತ್ತದೆ ಅಂದರು.
ಪ್ರಾಸ್ತಾವಿಕ ಭಾಷಣವನ್ನು ಕೆವಿಎಸ್ ಎಂಟರ್ಟೈನ್ಮಂಟ್ ನ ರೂವಾರಿ ಕೃಷ್ಣರಾಜ್ ಶೆಟ್ಟಿ ಪ್ರಸ್ತುತಪಡಿಸಿದರು. ಈ ಸಂಸ್ಥೆ ಕೇವಲ ಈ ನಾಟಕವನ್ನು ಪ್ರದರ್ಶಿಸಿ ಕಲಾರಂಗಕ್ಕೆ ಗುರುತಿಸಿಕೊಂಡರೂ
ಮುಂದೆ ಇನ್ನೂ ಹಲವಾರು ನಾಟಕ ಕೃತಿಗಳನ್ನು ರಚಿಸಿ ರಂಗದಲ್ಲಿ ಪ್ರದರ್ಶನ ನೀಡಲು ನಾವು ಸಿದ್ಧರಿದ್ದೇವೆ. ನಮ್ಮ ಮುಂದಿನ ನಾಟಕದ ಕೃತಿಯೂ ಸಿದ್ಧವಾಗಿದೆ ಎಂದು ತಿಳಿಸಿದರು.




ವೇದಿಕೆಯಲ್ಲಿ ಅತಿಥಿಗಳಾಗಿ ಗಣ್ಯಾದಿಗಣ್ಯರಾದ ಆರ್ ಬಿ ಶೆಟ್ಟಿ ಇನ್ ಗ್ಲೋಬ್ ಎಸ್ಫೋಟ್, ಉದ್ಯಮಿ ಅಮರ್ ನಾಥ್ ಶೆಟ್ಟಿ, ಕಾಂದಿವಲಿ ಕನ್ನಡ ಸಂಘದ ಮಹಿಳಾ ಕಾರ್ಯಧ್ಯಕ್ಷೆ ವಿನೋದ ಡಿ ಶೆಟ್ಟಿ, ಅಂತರಾಷ್ಟ್ರೀಯ ಕ್ರೀಡಾ ಪಟು ಸುಚರಿತ ಶೆಟ್ಟಿ, ರಮೇಶ್ ಮಹಾಲಿಂಗ ಕುಂದಾಪುರ, ಹೊಬಳಿ ಮಂಡಳಿಯ ಅಧ್ಯಕ್ಷರು, ಮೋಹನ್ ದಾಸ್ ಪೂಜಾರಿ, ಭಾರತ್ ಬ್ಯಾಂಕ್ ಮುಂಬಯಿಯ ಡೈರೆಕ್ಟರ್ ಹಾಗೂ ಬಿಲ್ಲವರ ಅಸೋಸಿಯೇಶನ್ ಮುಂಬಯಿಯ ಪದಾಧಿಕಾರಿ, ವಿದ್ಯಾಧರ್ ಕರ್ಕೇರ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಚೀಪ್ ಎಕ್ಸಿಕ್ಯೂಟಿವ್ ಆಫೀಸರ್ ಭಾರತ್ ಬ್ಯಾಂಕ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮುಖ್ಯವಾಗಿ 9 ಪ್ರದರ್ಶನಗಳನ್ನು ನೀಡಿ ನಮಗೆ ಸಹಕರಿಸಿದ ಮುಂಬಯಿ, ಪುಣೆ ಸೂರತ್ ಹಾಗೂ ನಾಸಿಕ್ ನ ಸಂಘ ಸಂಸ್ಥೆಗಳಿಗೆ ಗೌರವವನ್ನು ನೀಡಲಾಯಿತು. ಅದೇ ರೀತಿ ಈ ನಾಟಕದಲ್ಲಿ ಪ್ರಥಮ ಪ್ರದರ್ಶನದಿಂದ ಇಷ್ಟರವರೆಗೆ ಭಾಗವಹಿಸಿದ ಎಲ್ಲಾ ಕಲಾವಿದರನ್ನು ಹಾಗೂ ತೆರೆಯ ಮರೆಯಲ್ಲಿರುವ ಕಲಾವಿದರು ಮತ್ತು ನೇಪಥ್ಯದಲ್ಲಿ ಸಹಕರಿಸಿದ ಎಲ್ಲರಿಗೂ ಪ್ರೀತಿ ಪೂರ್ವಕ ಗೌರವವನ್ನು ಕೆವಿಎಸ್ ಎಂಟರ್ಟನೆಂಟ್‌ನ ವತಿಯಿಂದ ನೀಡಲಾಯಿತು.
ಕೊನೆಗೆ ಕಲಾಸೌರಭದ ರೂವಾರಿ ಪದ್ಮನಾಭ್ ಸಸಿಹಿತ್ತು ಇವರು ಧನ್ಯವಾದ ಗೈದರು. ಸಭಾಕಾರ್ಯಕ್ರಮದ ನಂತರ ಪನ್ವಿ ಕ್ರಿಯೇಶನ್ ನ ರೂವಾರಿ ಹರೀಶ್ ಶೆಟ್ಟಿ ಏರ್ಮಾಳ್ ಇವರು ಚಿತ್ರಗೀತೆಗಳನ್ನು ಪ್ರಸ್ತುತ ಪಡಿಸಿದರು. ಆ ನಂತರ ನಾಟಕದ ಉಳಿದ ಭಾಗ ಮುಂದುವರಿಯಿತು. ಇಡೀ ನಾಟಕದುದ್ದಕ್ಕೂ ಕಿಕ್ಕಿರಿದು ತುಂಬಿದ ಸಭಾಗೃಹದಲ್ಲಿ ನಗುವಿನ ಕಲರವ ಹಾಗೂ ಕರತಾಡನದಿಂದಾಗಿ ಅಭಿನಯಿಸಿದ ಕಲಾವಿದರು ಪ್ರೋತ್ಸಾಹಗೊಂಡು ಉತ್ಕೃಷ್ಟ ಅಭಿನಯ ನೀಡಿದರು.