
ಅಖಿಲ ಗಾಂವ್ದೇವಿ ಕನ್ನಡ ಮಿತ್ರ ಮಂಡಳಿಯ ಆಶ್ರಯದಲ್ಲಿ 94 ನೇ ವರ್ಷದ ಗಣೇಶೋತ್ಸವವು ಸೆ. 7 ರಂದು ನಾನಾಚೌಕ್ ಸಮೀಪದಲ್ಲಿರುವ ಗಾಂವ್ದೇವಿಯ ಜೆ. ಕೆ. ಟವರ್ ಆವರಣದಲ್ಲಿ ಜರಗಲಿದೆ. ಅಂದು ಬೆಳಿಗ್ಗೆ ಭವ್ಯವಾದ ಮೆರವಣಿಗೆಯಲ್ಲಿ ಶ್ರೀ ವಿಘ್ನೇಶ್ವರನ ಆಗಮನವಾಗಲಿದ್ದು ತದನಂತರ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿದೆ
ಸಂಜೆ ಗಂಟೆ 7 ಕ್ಕೆ ಸರಿಯಾಗಿ ಗ್ರಾಮದೇವಿಯ ಸನ್ನಿಧಾನದಲ್ಲಿ ಪೂಜೆ ನಡೆಯಲಿದ್ದು ಬಳಿಕ ಸರ್ವಾಲಂಕೃತನಾದ ಶ್ರೀ ವಿಘ್ನೇಶ್ವರನಿಗೆ ಮಹಾಪೂಜೆ ನೆರವೇರಲಿದೆ ಯಕ್ಷ ಪ್ರಿಯ ಬಳಗ ಮೀರಾ-ಭಾಯಂದರ್ ಇವರ ಹಿಮ್ಮೇಳದೊಂದಿಗೆ ಮಿತ್ರ ಮಂಡಳಿಯ ಅಧ್ಯಕ್ಷರಾದ ಮಹಾದೇವ ಪೂಜಾರಿಯವರ ನೇತೃತ್ವದಲ್ಲಿ ವೇದಮೂರ್ತಿ ನವೀನ ಭಟ್ ಚೆಂಬೂರು ಪೂಜಾ ಕೈಂಕರ್ಯವನ್ನು ನಿರ್ವಹಿಸಲಿದ್ದು ಬಳಿಕ ನೆರೆದ ಭಕ್ತಾಧಿಗಳಿಗೆ ತೀರ್ಥ ಪ್ರಸಾದ ವಿತರಿಸಲಾಗುವುದೆಂದು ಮಂಡಳಿಯ ಪ್ರಕಟಣೆ ತಿಳಿಸಿದೆ.
ಆ ಪ್ರಯುಕ್ತ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ವಿಘ್ನೇಶ್ವರನ ಕೃಪೆಗೆ ಪಾತ್ರರಾಗುವುದಲ್ಲದೆ ಕಳೆದ 94 ವರ್ಷಗಳಿಂದ ನಿರಂತರವಾಗಿ ನಡೆಯುವ ಈ ಗಣೇಶೋತ್ಸವವನ್ನು ಯಶಸ್ವಿಗೊಳಿಸಲು ಸಹಕರಿಸಬೇಕಾಗಿ ಅಖಿಲ ಗಾಂವ್ದೇವಿ ಕನ್ನಡ ಮಿತ್ರ ಮಂಡಳಿಯ ಅಧ್ಯಕ್ಷರಾದ ಮಹಾದೇವ ಪೂಜಾರಿ ವಿನಂತಿಸಿದ್ದಾರೆ
.
.
.