September 6, 2026
Mumbai News Kannada
ಪ್ರಕಟಣೆ

ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಮುಂಬೈ ಭೇಟಿಯ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ. 






    ಮುಂಬಯಿ ಜು11. ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಮತ್ತು ಸ್ವಾದಿ ಮಾತೆ ಶ್ರೀ ಮಾತಾನಂದಮಯಿ ಅವರು ಇದೇ ಬರುವ ಜುಲೈ 16ರಂದು ಮುಂಬಯಿಗೆ ಆಗಮಿಸಲಿದ್ದು. ಮುಂಬಯಿಯ ಹಾಗೂ ಥಾಣೆಯ ಉಪನಗರಗಳಲ್ಲಿ ಜುಲೈ 27 ರವರೆಗೆ ಉಪಸ್ಥಿತರಿದು ಭಕ್ತರಿಗೆ ಆಶೀರ್ವಚನ ನೀಡಲಿರುವರು. ಈ ಸಂದರ್ಭದಲ್ಲಿ ಮುಂಬಯಿಯ ಹಾಗೂ ಉಪನಗರದ ವಿವಿಧ ಕಡೆಗಳಲ್ಲಿ ಸ್ವಾಮೀಜಿಯವರ ಗುರುವಂದನಾ ಕಾರ್ಯಕ್ರಮ ಹಾಗೂ ಸಾರ್ವಜನಿಕ ಆಶೀರ್ವಚನ ಕಾರ್ಯಕ್ರಮವು ಜರಗಲಿರುದು. 

ಈ ಕಾರ್ಯಕ್ರಮಗಳ ಸಂಪೂರ್ಣ ವಿವರ ವಿರುವ ಆಮಂತ್ರಣ ಪತ್ರಿಕೆಯನ್ನು ಜುಲೈ 8ರಂದು ಸಯನ್ ಶ್ರೀ ನಿತ್ಯಾನಂದ ಸಭಾ ಗೃಹದಲ್ಲಿ ಮುಂಬಯಿಯ ಗುರುಭಕ್ತರು ಶ್ರೀ ಗುರುದೇವ ಸೇವಾ ಬಳಗ ಮುಂಬಯಿ ಮಹಾರಾಷ್ಟ್ರ ಘಟಕ ಸಮಿತಿಯು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಗುರುದೇವ ಸೇವಾ ಬಳಗ ಮುಂಬಯಿಯ ಅಧ್ಯಕ್ಷರಾದ ದಾಮೋದರ ಶೆಟ್ಟಿ, ನೆರೂಳ್,  ಕಾರ್ಯದರ್ಶಿ ಪೇಟೆಮನೆ ಪ್ರಕಾಶ್ ಶೆಟ್ಟಿ, ಕೋಶಾಧಿಕಾರಿ ರವೀಂದ್ರ ಶೆಟ್ಟಿ, ಶ್ರೀ ಗುರುದೇವ ಸೇವಾ ಬಳಗ ಮುಂಬಯಿ ಮಹಾರಾಷ್ಟ್ರ ಘಟಕ ಇದರ ಬೆಳ್ಳಿ ಹಬ್ಬ ಆಚರಣೆ ಸಮಿತಿಯ ಅಧ್ಯಕ್ಷರಾದ ನ್ಯಾಯವಾದಿ ಕೆಪಿ ಪ್ರಕಾಶ್ ಎಲ್ ಶೆಟ್ಟಿ, ಉದ್ಯಮಿ ಚಂದ್ರಹಾಸ ರೈ, ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರ ಮಹಾರಾಷ್ಟ್ರ ಇದರ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶ್ವೇತಾ ಚಂದ್ರಹಾಸ ರೈ,ಗುರುದೇವ ಸೇವಾ ಬಳಗ  ಯುವ ವಿಭಾಗದ ಮುಖ್ಯಸ್ಥರಾದ ಡಾಕ್ಟರ್  ಅಧಿಪ್ ಕೆ ಶೆಟ್ಟಿ, ಹಾಗೂ ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕದ ಸದಸ್ಯರು ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಸದಸ್ಯರು  ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಜರಗಿದ ಪೂರ್ವಭಾವಿ ಸಭೆಯಲ್ಲಿ ಶ್ರೀಗಳ ಸಾರ್ವಜನಿಕ ಆಶೀರ್ವಚನ ಕಾರ್ಯಕ್ರಮ ಹಾಗೂ ಗುರುವಂದನಾ ಕಾರ್ಯಕ್ರಮಗಳನ್ನು  ಅತ್ಯಂತ ಯಶಸ್ವಿಯಾಗಿ ಆಚರಿಸಬೇಕು ಗುರುಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಮತ್ತು ಇದೇ ಸಂದರ್ಭದಲ್ಲಿ  ನಡೆಯುವ ಬೆಳ್ಳಿಯ ಸಮಾರಂಭವನ್ನು ಅತ್ಯಂತ ವಿಜ್ರಂಭಣೆಯಿಂದ ನಡೆಸಬೇಕು ಎಂದು ಅಧ್ಯಕ್ಷರು ನುಡಿದರು.



Related posts

     ಜೂ  ೧೬ :  ಶನಿ ಮಹಾತ್ಮ ಚಾರಿಟೇಬಲ್ ಸೊಸೈಟಿ ವತಿಯಿಂದ ವಿದ್ಯಾರ್ಥಿಗಳಿಗೆ   ಪುಸ್ತಕ,   ಸಾಮಗ್ರಿಗಳ  ವಿತರಣೆ

Mumbai News Desk

ಜೂನ್ 16 : ಮುಂಬೈ ಫೋರ್ಟ್‌ನ ಶ್ರೀ ಶನಿಮಹಾತ್ಮ ತ್ರಿಭುವನೇಶ್ವರಿ ಸೇವಾ ಸಮಿತಿಯಿಂದ ಮೂರ್ತಿ ಪ್ರತಿಷ್ಠಾಪನಾ ದಿನ ಹಾಗೂ ಚೈತನ್ಯ ಬ್ರಹ್ಮ ಕಲಶೋತ್ಸವ

Mumbai News Desk

ಜು.10 : ಹರಿಶ್ಚಂದ್ರ ಪಿ ಸಾಲ್ಯಾನ್ ರವರ 24 ನೇ ಕೃತಿ ‘ತುಳುನಾಡಿನ ಆಟಿ ತಿಂಗಳು’ ಬಿಡುಗಡೆ.

Mumbai News Desk

ದಿ ಯಂಗ್ ಮೆನ್ಸ್ ಬೋವಿ ಅಸೋಷಿಯೇಶನ್, ಜ. 12 ರಂದು 88 ನೇ ವಾರ್ಷಿಕೋತ್ಸವ,

Mumbai News Desk

ಮಲಾಡ್ ಕನ್ನಡ ಸಂಘ, ಮಾ.8ರಂದು ವಿಶ್ವಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರಿಗಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ

Mumbai News Desk

ಸೆ.20 : ಮಾತೃಭೂಮಿ ಕೋ -ಆಪರೇಟಿವ್ ಕ್ರೆಡಿಟ್ ಸೊಸೈಟಿ ಇದರ 37ನೇ ವಾರ್ಷಿಕ ಮಹಾಸಭೆ

Mumbai News Desk