
ಭಾರತೀಯ ಅಂಚೆ ಇಲಾಖೆ ಉಡುಪಿ ವಿಭಾಗ ಮತ್ತು ಬಿಲ್ಲವ ಸಮಾಜ ಸೇವಾ ಸಂಘ [ರಿ] ಹಕ್ರೆಮಠ, ಕೊಡೇರಿ ಇವರ ಸಹಭಾಗಿತ್ವದಲ್ಲಿ ನವೆಂಬರ್ 1 ರಂದು ಶುಕ್ರವಾರ “ಡಾಕ್-ಸೇವಾ; ಜನ್-ಸೇವಾ-ಒಂದೇ ಸೂರು-ಸೇವೆ ಹಲವಾರು” ಎಂಬ ಆಶಯದ ಅಂಚೆ-ಜನ ಸಂಪರ್ಕ ಅಭಿಯಾನವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡೇರಿಯಲ್ಲಿ ನಡೆಯಿತು.
ಅಭಿಯಾನದ ನೇತೃತ್ವ ವಹಿಸಿದ್ದ ಕುಂದಾಪುರ ಉತ್ತರ ಉಪ ಅಂಚೆ-ವಿಭಾಗದ ಹೆಚ್ಚುವರಿ ಸಹಾಯಕ ಅಂಚೆ ಅಧೀಕ್ಷಕ ಕೃಷ್ಣರಾಜ ವಿಠ್ಠಲ ಭಟ್ಟರು ಮಾತನಾಡಿ, ಜನರಿಗೆ ಅನುಕೂಲವಾಗುವಂತೆ ಒಂದೇ ಸೂರಿನಡಿ ಹಲವಾರು ಅಂಚೆ-ಸೇವೆಗಳನ್ನು ನೀಡುವ ಸಲುವಾಗಿ ಇಂತಹ ಅಭಿಯಾನಗಳನ್ನು ಗ್ರಾಮ-ಗ್ರಾಮಗಳಲ್ಲಿ ಅಂಚೆ ಇಲಾಖೆಯು ನಡೆಸುತ್ತಿದ್ದು, ನೂರಾರು ಜನರು ಇದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ತಿಳಿಸಿ, ವಿವಿಧ ಅಂಚೆ ಸೇವೆಗಳ ಮಾಹಿತಿ ನೀಡಿದರು.
ಈ ಅಭಿಯಾನದ ಅಧ್ಯಕ್ಷತೆ ವಹಿಸಿದ್ದ ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ನ ಸದಸ್ಯ ಮತ್ತು ಕೊಡೇರಿ ಬಿಲ್ಲವ ಸಮಾಜ ಸೇವಾ ಸಂಘದ ಮಾಜಿ ಗೌರವ ಪ್ರಧಾನ ಕಾರ್ಯದರ್ಶಿ ಆನಂದ ಪೂಜಾರಿ ಕೊಡೇರಿ ಮಾತನಾಡುತ್ತಾ ಇಂತಹ ಜನಸ್ನೇಹಿ ಅಭಿಯಾನವನ್ನು ಆಯೋಜಿಸುತ್ತಿರುವ ಅಂಚೆ ಇಲಾಖೆಯನ್ನು ಶ್ಲಾಘಿಸಿ, ಅಭಿನಂದಿಸಿದರು. ಹಲವಾರು ಗ್ರಾಮಸ್ತರು ಆಧಾರ್-ಹೊಸ ನೋಂದಣಿ/ಪರಿಷ್ಕರಣೆ, ಆನ್-ಲೈನ್-ಅಪಘಾತ ವಿಮಾ ಸೌಲಭ್ಯ ಹಾಗು ವಿವಿಧ ಅಂಚೆ-ಸೌಲಭ್ಯಗಳ ಪ್ರಯೋಜನವನ್ನು ಪಡೆದುಕೊಂಡರು.
ಈ ಅಭಿಯಾನದಲ್ಲಿ ಅಂಚೆ ಇಲಾಖೆಯ ಕೊಡೇರಿ ಶಾಖೆಯ ಬಿಪಿಎಮ್ ರಾಜೇಶ್ವರಿ ಶಿವರಾಮ್. ಬಿಲ್ಲವ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸುಧೀರ್ ಪೂಜಾರಿ ಕಾಡ್ಕೇರಿ ಸೇರಿದಂತೆ ಹಲವಾರು ಗ್ರಾಮಸ್ಥರು ಉಪಸ್ಥಿತರಿದ್ದರು
.