ಮುಂಬಯಿ ನ 12. ವರ್ಲಿ ಮಧುಸೂದನ್ ಮಿಲ್ ಕಂಪೌಂಡಿನಲ್ಲಿರುವ ಶ್ರೀ ಸಿದ್ಧೇಶ್ವರ ಅನ್ನದಾತ ಅಪ್ಪಾಜಿ ಬೀಡು ಪೌಂಡೇಶನ್ ಆಡಳಿತದಲ್ಲಿರುವ ಸಿದ್ದೇಶ್ವರ ದೇವಸ್ಥಾನ (ಅಪ್ಪಾಜಿ ಬೀಡು) ದೇವಸ್ಥಾನದಲ್ಲಿ
ನ.16 ರಂದು ಮಾಲೆ ಧಾರಣೆ , ಶಿಬಿರದಲ್ಲಿ ಅನ್ನದಾನ, ಪೂಜಾ ಕಾರ್ಯಗಳು ಪ್ರಾರಂಭ ವಾಗಲಿದೆ,
ಪ್ರಾತಃಕಾಲದಲ್ಲಿ ಅಪ್ಪಾಜಿ ಬೀಡುವಿನಲ್ಲಿ ಗಣಹೋಮ ಹಾಗೂ ಕಲಿಯುಗ ವರದ ಶ್ರೀ ಅಯ್ಯಪ್ಪ ಸ್ವಾಮಿಯ ಮಣಿ ಮಾಲೆ ಧಾರಣೆ ಕಾರ್ಯಕ್ರಮದೊಂದಿಗೆ ಶಿಬಿರದ ಉದ್ಘಾಟನೆ ಆಗಲಿದೆ.
ಶಿಬಿರ ಉದ್ಘಾಟನೆಗೊಂಡ ಬಳಿಕ,ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆಗೆ ಮಾಲೆಧಾರಣೆ ಮಾಡಿದ ಸ್ವಾಮಿಗಳ ಶರಣುಘೋಶದೊಂದಿಗೆ ಶ್ರೀ ಗುರುಸ್ವಾಮಿಗಳ ನೇತೃತ್ವದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಪೂಜೆಯು ಜರಗಲಿದೆ.
ಅದೇ ರೀತಿ, ತಾ.16.11.2024ನೇ ಶನಿವಾರದಿಂದ ಮೊದಲ್ಗೊಂಡು ಇರುಮುಡಿ ಕಟ್ಟುವ ತನಕ,ಪ್ರತೀ ಶನಿವಾರದಂದು ಶ್ರೀ ಅಯ್ಯಪ್ಪ ಸ್ವಾಮಿಗೆ ಅತೀ ಪ್ರಿಯವಾದ ಸಾರ್ವಜನಿಕ ಪಡಿಪೂಜೆಯು ವಿಜೃಂಭಣೆಯಿಂದ ಜರಗಲಿರುವುದು.*
ಅಪ್ಪಾಜಿ ಬೀಡಿನಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಸನ್ನಿಧಾನಕ್ಕೆ ಮಾಲಾ ಧಾರಣೆ ಮಾಡಿ ಯಾತ್ರೆ ಮಾಡುವವರು ಪದ್ಮನಾಭ ಎಸ್ ಶೆಟ್ಟಿ 98191 03377 ಪ್ರವೀಣ್ ಕುಮಾರ್ ಶೆಟ್ಟಿ ಕುರ್ಕಾಲ್. 9892292449.ಇವರನ್ನು ಸಂಪರ್ಕಿಸಲು ಬಹುದು, ಎಂದು ಫೌಂಡೇಶನ್ ನ ಸಂಸ್ಥಾಪಕ ರಮೇಶ್ ಗುರುಸ್ವಾಮಿ* ಅಧ್ಯಕ್ಷರಾದ ಪದ್ಮನಾಭ.ಎಸ್. ಶೆಟ್ಟಿ,ಆಡಳಿತ ವಿಶ್ವಸ್ಥರು ಶ್ರೀಮತಿ ಶಾಂಭವಿ ರಮೇಶ್ ಶೆಟ್ಟಿ, , , ಹಾಗೂ ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ ಶ್ರೀಮತಿ ಕವಿತಾ ಶೆಟ್ಟಿ ಮತ್ತಿತರ ಪದಾಧಿಕಾರಿಗಳು ಟ್ರಸ್ಟಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.