
ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ಡೊಂಬಿವಲಿ ಇದರ 59 ನೇ ನವರಾತ್ರೋತ್ಸವ ಸಂದರ್ಭದಲ್ಲಿ ಮಹಿಳಾ ವಿಭಾಗದ ವತಿಯಿಂದ ಆಕ್ಟೊಬರ್20 ರ ಶುಕ್ರವಾರ ದಂದು ಹಳದಿ ಕುಂಕುಮ ಕಾರ್ಯಕ್ರಮ ನಡೆಯಿತು.






ಸುಮಾರು ಒಂದು ವರೆ ಸಾವಿರ ದಿಂದ ಎರಡು ಸಾವಿರ ಮಹಿಳೆಯರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು, ಅವರೆಲ್ಲರಿಗೂ ಶ್ರೀ ದೇವಿಯ ಅನುಗ್ರಹ ಸದಾ ಇರಲಿ, ಎಂದು ಮಹಿಳಾ ವಿಭಾಗದ ಅಧ್ಯಕ್ಷೆ ವಿಲಾಸಿನಿ ಶೆಟ್ಟಿ ತಿಳಿಸಿ, ಭಾಗವಹಿಸಿದ ಎಲ್ಲ ಮಹಿಳೆಯರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಂಡಳಿಯ ಧರ್ಮದರ್ಶಿ ಅಶೋಕ್ ದಾಸು ಶೆಟ್ಟಿ, ಅಧ್ಯಕ್ಷ ರಾದ ಗೋಪಾಲ್ ಶೆಟ್ಟಿ, ಕಾರ್ಯದರ್ಶಿ ಕಿಶೋರ್ ಶೆಟ್ಟಿ, ಮತ್ತು ಮಹಿಳಾ ವಿಭಾಗದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.