
ಬಿಜೆಪಿ ಡೊಂಬಿವಲಿ ಸೌತ್ ಸೆಲ್ , ಇದರ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ರತನ್ ಪೂಜಾರಿ ಯವರಿಗೆ ಮುಂಬ್ರ ಮಿತ್ರ ಭಜನಾ ಮಂಡಳಿ ಸಂಚಾಲಿತ ಶ್ರೀ ವಿಷ್ಣು ಮಂದಿರದಲ್ಲಿ ಮಂದಿರದ ವತಿಯಿಂದ ಅಭಿನಂದನಾ ಗೌರವ ಸಮರ್ಪಿಸಲಾಯಿತು.





ಈ ಸಂದರ್ಭದಲ್ಲಿ ಮಂಡಳಿಯ ಅಧ್ಯಕ್ಷರಾದ ಇಂದುಶೇಖರ ಸುವರ್ಣ, ಗೌರವ ಅಧ್ಯಕ್ಷ ರಾದ ನಿತ್ಯಪ್ರಕಾಶ್ ಪುತ್ರನ್, ಉಪಾಧ್ಯಕ್ಷ ರಾದ ಅರವಿಂದ್ ಪದ್ಮಶಾಲಿ, ಕಾರ್ಯದರ್ಶಿ ಸಚಿನ್ ಪೂಜಾರಿ, ಕೋಶಾಧಿಕಾರಿ ಪ್ರವೀಣ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸವಿತಾ ಸಾಲ್ಯಾನ್ ಹಾಗೂ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.