April 2, 2025
ಸುದ್ದಿ

ಪೂರ್ವ ಆಫ್ರಿಕಾದಲ್ಲಿ ಬಂಟ ಸಂಭ್ರಮ -2೦23 ಕಾರ್ಯಕ್ರಮ

ನಮ್ಮೆಲ್ಲರ ಒಗ್ಗಟ್ಟು ಸಮಾಜದ ಮೇಲಿನ ಅಭಿಮಾನ ನಿರಂತರ ಇರಬೇಕು: ಶೈಲೇಶ್ ಶೆಟ್ಟಿ

   ಆಫ್ರಿಕಾ:    ಬಂಟರ ಸಂಘ ಪೂರ್ವ ಆಫ್ರಿಕಾ ನೈರೋಬಿ ಕೀನ್ಯಾ ಇದರ ಮೊದಲನೇ ವಾರ್ಷಿಕೋತ್ಸವ ದಿನಾಂಕ 28 10.2023ನೇ ಶನಿವಾರದಂದು ಹೋಟೆಲ್ ರೆಡ್ ಜಿಂಜರ್ 2ನೇ ಪಾರ್ಕ್ ಲ್ಯಾಂಡ್ಸ್ ಅವೆನ್ಯೂ ನೈರೋಬಿ ಕೀನ್ಯಾದಲ್ಲಿ ನಡೆಯಿತು.

ಸಂಘದ ಅಧ್ಯಕ್ಷರಾದ ಶೈಲೇಶ್ ಶೆಟ್ಟಿಯವರು ಮಾತನಾಡುತ್ತಾ ಜಗತ್ತಿನಯಾವ ಮೂಲೆಯಲ್ಲಿ  ಸಮಾಜ ಬಾಂಧವರು ಇದ್ದರೂ ಕೂಡ .ಸಮಾಜದ ಅಭಿಮಾನ ಒಗ್ಗಟ್ಟು  ಗುರುತಿಸಿಕೊಂಡು ಬಂದವರು.  ಭಾರತವನ್ನು ಬಿಟ್ಟು ಈ ದೇಶಕ್ಕೆ ಬಂದರು ಇಲ್ಲಿ ತುಳು ನಾಡಿನ ಸಂಸ್ಕೃತಿಯನ್ನು ಆಚರಣೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು. ಒಗ್ಗಟ್ಟಿನಲ್ಲಿ ನಮ್ಮ ಸಮಾಜವನ್ನು ಬೆಳೆಸುವಲ್ಲಿ ಎಲ್ಲರೂ ಒಂದಾಗಿದ್ದೇವೆ. ನಮ್ಮೆಲ್ಲರ ಒಗ್ಗಟ್ಟು ಸಮಾಜದ ಮೇಲಿನ ಅಭಿಮಾನ ನಿರಂತರ ಇರಬೇಕು ಎಂದು ನುಡಿದರು

     ಸಂಘದ ಮಹಿಳಾ ಸದಸ್ಯೆಯರು ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಂಗಳೂರು ಮೀನನಾಥ ಖ್ಯಾತಿಯ ರಾಘವೇಂದ್ರ ರೈ ಕುಂಜತ್ತೂರು ಇವರಿಂದ ಹಾಗೂ ಸಂಘದ ಸದಸ್ಯರಿಂದ ಸಂಗೀತ, ನೃತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. 

 ಅಕ್ಷಯ ರಾಜೇಶ್ ಶೆಟ್ಟಿ ಇವರ ಸನ್ಮಾನ ಪತ್ರ ವಾಚನ ದೊಂದಿಗೆ ನಟ ಹಾಗೂ ರಂಗಭೂಮಿ ಕಲಾವಿದರಾದ  ರಾಘವೇಂದ್ರ ರೈ ಅವರನ್ನು ಸನ್ಮಾನಿಸಲಾಯಿತು.

 ಕಾರ್ಯಕ್ರಮದ ಆರಂಭದಿಂದ ಕೊನೆಯವರೆಗೂ ತುಳು ಭಾಷೆಗೆ ಹೆಚ್ಚು ಪ್ರಾಧಾನ್ಯತೆ ನೀಡಿರುವುದು ವಿಶೇಷವಾಗಿತ್ತು.

 ಈ ಸಂದರ್ಭದಲ್ಲಿ *ಮೂಡಾಯಿ ಆಫ್ರಿಕಾದ ಪೆರ್ಮೆದ ಬಂಟೆರ್* ಆಲ್ಬಮ್ ಹಾಡು ಬಿಡುಗಡೆಗೊಂಡಿತು.

ಶಾಂತಿ ಯಶವಂತ್ ಶೆಟ್ಟಿ, ಶುಭ ಶೈಲೇಶ್ ಶೆಟ್ಟಿ ಪ್ರಾರ್ಥನೆಯನ್ನು ಹಾಡಿದರು, 

. ಸಂಘದ ಎಲ್ಲಾ ಸದಸ್ಯರಿಗೆ ಪ್ರಥಮ ವರ್ಷದ ಸವಿನೆನಪಿಗಾಗಿ   ಶಾಲು ಹಾಗೂ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು. ಸಪ್ನ ಅಶೋಕ್ ಭಂಡಾರಿ, ಗಾಯತ್ರಿ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ ಸಂದೀಪ್ ಸಾಮಾನಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಅಭಿಜಿತ್ ಸೂಡ ವಂದಿಸಿದರು.                                                                                                       

Related posts

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ದಿ. ಎಸ್ ಎಸ್ ಮನೋಹರ್ ಶೆಟ್ಟಿ ಅವರಿಗೆ ನುಡಿ ನಮನ.

Mumbai News Desk

ನಿಡ್ಲೆ ಗೋವಿಂದ ಭಟ್ ಮತ್ತು ಪುತ್ತಿಗೆ ಕುಮಾರ ಗೌಡ ರಿಗೆ ಕಾಂತಾವರ ಯಕ್ಷದೇಗುಲ ಪ್ರಶಸ್ತಿ

Mumbai News Desk

ಡಹಾಣೂವಿನ ಸಮಾಜ ಸೇವಕ ಅಶೋಕ್  ಎಸ್. ಶೆಟ್ಟಿ ಉಳೆಪಾಡಿ ಇವರಿಗೆ ಸನ್ಮಾನ.

Mumbai News Desk

ದ್ವಾರಕಾಮಯಿ ಮಠ ಶ್ರೀ ಕ್ಷೇತ್ರ ಶಂಕರಪುರದ ವತಿಯಿಂದ ಪುಲ್ವಾಮ ದಾಳಿಯಲ್ಲಿ ಮಡಿದ ಯೋಧರಿಗೆ ನುಡಿ -ನಮನ

Mumbai News Desk

ಪಡುಬಿದ್ರೆ-ಪಣಿಯೂರು ರೈಲ್ವೆ ನಿಲ್ದಾಣದಲ್ಲಿ ಮಂಗಳೂರು-ಕುರ್ಲಾ(ಬಾಂಬೆ) ಮತ್ತ್ವಗಂಧ ರೈಲ್ವೆ ನಿಲುಗಡೆಗೆ ಅವಕಾಶ ಕಲ್ಪಿಸುವಂತೆ ರಾಜ್ಯ ರೈಲ್ವೆ ಖಾತೆ ಸಚಿವ ವಿ ಸೋಮಣ್ಣಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮನವಿ

Mumbai News Desk

ಬಂಟರ ಸಂಘ ಮುಂಬೈಯ ನೂತನ ಟ್ರಸ್ಟಿ   ಉಳ್ತೂರು  ಮೋಹನ್ದಾಸ್ ಶೆಟ್ಟಿ ಅವರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಭಿನಂದನೆ.

Mumbai News Desk