
ಬಾoಬೆ ಬoಟ್ಸ್ ಅಸೋಷಿಯೇಶನ್ ನ ಮಹಿಳಾ ವಿಭಾಗ ಅಯೋಜನೆಯಲ್ಲಿ ನವಂಬರ್ 4 ರ ಶನಿವಾರ ನವಿಮುಂಬಯಿಯ ಜೂಹಿ ನಗರದ ಬಂಟ್ಸ್ ಸೆಂಟರ್ ನಲ್ಲಿ ನಡೆದ ಕುಣಿತ ಭಜನಾ ಸ್ಪರ್ದೆಯಲ್ಲಿ ಪ್ರಥಮ ಬಹುಮಾನವನ್ನು ಡೊoಬಿವಲಿ ಪಶ್ಚಿಮದ ಜುನಡೊoಬಿವಲಿ ಪರಿಸರದ ಮುoಬ್ರಾಮಿತ್ರ ಭಜನಾ ಮoಡಳಿಯ ಸoಚಾಲಕತ್ವದ ಶ್ರೀ ಮಹಾ ವಿಷ್ಣು ಮoದಿರದ ಬಾಲಕಿಯರ ಭಜನಾ ತoಡವು ಅತ್ಯುತ್ತಮ ಕುಣಿತ ಭಜನೆಯನ್ನು ಸಾದರ ಪಡಿಸಿ, ಪ್ರಥಮ ಬಹುಮಾನವನ್ನು ತನ್ನದಾಗಿರಿಸಿ ಕೊoಡಿತು.
ಶ್ರೀ ಮಹಾವಿಷ್ಣು ಮಂದಿರದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಬಾಲಕಿಯರ ಭಜನಾ ತಂಡವು ಪ್ರಥಮ ಬಹುಮಾನ ಗೆದ್ದ ಬಗ್ಗೆ ಸಂತಸ ವ್ಯಕ್ತಪಡಿಸಿ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.