30.5 C
Mumbai
June 8, 2026
Mumbai News Kannada
ಸುದ್ದಿ

ತೀಯಾ ಫ್ಯಾಮಿಲಿ ಯು.ಎ.ಇ.ಯ  ವತಿಯಿಂದ ಭಕ್ತಿ ಸಡಗರದ ದುರ್ಗಾ ಪೂಜೆ 





ದುಬಾಯಿ : ತೀಯಾ ಫ್ಯಾಮಿಲಿ ಯು.ಎ.ಇ.ಯ ಇವರ ವತಿಯಿಂದ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ದುರ್ಗ ಪೂಜೆಯು ಪೂಜೆಯು ಭಕ್ತಿ ಸಡಗರದಿಂದ ಜರುಗಿತು.

      ನಗರದ ಬರ್ ದುಬೈಯ ಸಿಂಧೆ ಸೆರೊಮಣಿ ಸಭಾಂಗಣದಲ್ಲಿ ಅಕ್ಟೋಬರ್ 29 ರಂದು ಶ್ರೀ ರಘು ಭಟ್ ರವರ ಪೌರೋಹಿತ್ಯದಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ವಿವಿಧ ವೈಧಿಕ ಕಾರ್ಯಕ್ರಮಗಳೊಂದಿಗೆ ವೈಭವದಿಂದ ಜರುಗಿತು. ಯುಎಇಯ ಎಲ್ಲಾ ರಾಜ್ಯದ ನೂರಾರು ಭಕ್ತಾದಿಗಳು,ತೀಯಾ ಸಮಾಜ ಬಾಂಧವರು ಪೂಜೆಯಲ್ಲಿ ಪಾಲ್ಗೊಂಡು ಪುನಿತರಾದರು.

   ದುರ್ಗ ಪೂಜೆಯ  ಪ್ರತಿನಿದಿಯಾಗಿ  ಸಂಸ್ಥೆಯ ಕೋಶಾಧಿಕಾರಿ ಶ್ರೀನಿವಾಸ ಕೋಟ್ಯಾನ್ ಮತ್ತು ಶ್ರೀಮತಿ ಸರೀತ ಕೋಟ್ಯಾನ್ ದಂಪತಿಗಳು ಕುಳಿತುಕೊಂಡಿದ್ದರು.

     ರಾಜರಾಜೇಶ್ವರಿ ಭಜನಾ ಮಂಡಳಿ ದುಬೈಯ ವತಿಯಿಂದ ಭಜನೆ, ತೀಯಾ ಸಮಾಜದ ಮಹಿಳೆಯರಿಂದ ಕುಣಿತ ಭಜನೆ ಮತ್ತು ಮಹಾ ಮಂಗಳಾರತಿ ನಂತರ ಅನ್ನ ಪ್ರಸಾದದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

      ತೀಯಾ ಸಮಾಜ ಯ.ಎ.ಇ.ಯ ಅಧ್ಯಕ್ಷರಾದ ರಾಜೇಶ್ ಪಳ್ಳಿಕೆರೆಯವರು ಪೂಜೆಯಲ್ಲಿ ಅತ್ಯುತ್ತಮ ಭಜನಾ ಕಾರ್ಯಕ್ರಮ ಏರ್ಪಡಿಸಿದ್ದ ರಾಜರಾಜೇಶ್ವರಿ ಭಜನಾ ಮಂಡಳಿಯ ಸದಸ್ಯರನ್ನು, ಪೂಜಾ ಮಂಟಪವನ್ನು ತಯರಿಸಿದ ದೀಪಕ್ ರಾಜ್ ,ಪುರಂದರ ಶೆಟ್ಟಿಗಾರ್  ಮತ್ತು ಮಾದ್ಯಮದ ಮಿತ್ರರನ್ನು ಅಭಿನಂದಿಸಿದ್ದರು.ಹಾಗೂ ಯು.ಎ.ಇ.ಯ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನು ಮತ್ತು ಪೂಜೆಗೆ ಆಗಮಿಸಿದ ಭಕ್ತಾದಿಗಳನ್ನು ಸ್ವಾಗತಿಸಿ ಧನ್ಯವಾದವಿತ್ತರು.



Related posts

ಆಯುಷ್ಮಾನ್ ಭಾರತ್ ಆರೋಗ್ಯ ವಿಮೆ – ಹಿರಿಯ ನಾಗರಿಕರ ಆರೋಗ್ಯ ರಕ್ಷಣೆಗೆ ಅರ್ಜಿ ಸಲ್ಲಿಸುವುದು ಹೇಗೆ?

Mumbai News Desk

ಮುಂಬಯಿ : ಕರ್ನಾಟಕ ಬ್ಯಾಂಕ್ ನ ಹಿರಿಯ ಸಿಬ್ಬಂದಿ ನಾರಾಯಣ ಮೊಗವೀರ ಅವರ ಬೀಳ್ಕೊಡುವ ಸಮಾರಂಭ

Mumbai News Desk

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಡಾ.ರವಿರಾಜ್ ಸುವರ್ಣ ನೇಮಕ.

Mumbai News Desk

ಅಮೂಲ್ಯ ಪತ್ರಿಕೆಯ 25ರ ಸಂಭ್ರಮಾಚರಣೆಯಲ್ಲಿ ಸಂಭ್ರಮಿಸಿದ ಕವಿ ಗೋಷ್ಠಿ.

Mumbai News Desk

GST 2.0 : ಸರಳೀಕರಣಗೊಂಡ ಹೊಸ ತೆರಿಗೆ ವ್ಯವಸ್ಥೆ – 5% ಮತ್ತು 18% ಶ್ಲಾಬ್,

Mumbai News Desk

ಬಟ್ಟೆ ಕುದ್ರು ದುರ್ಗಿ ಶ್ರೀಯಾನ್ ನಿಧನ.

Mumbai News Desk